‘ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಫ್ಯಾಷನ್ ಆಗಿದೆ. ಅದರ ದೇವರ ನಾಮಸ್ಮರಣೆ ಮಾಡಿದ್ದರೆ ಏಳೇಳು ಜನ್ಮಕ್ಕೆ ಸ್ವರ್ಗವಾದರೂ ಪ್ರಾಪ್ತಿಯಾಗುತ್ತಿತ್ತು’ ಎಂಬ ಅಮಿತ್ ಶಾ ಹೇಳಿಕೆ ಖಂಡಿಸಿ ಕೊಪ್ಪಳ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ರಾಜ್ಯ ಸಮಿತಿಯ ಸಂಸತ್ತಿನಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.
ಕೋರ್ ಕಮಿಟಿ ಅದ್ಯಕ್ಷ ಯಲ್ಲಪ್ಪ ಹಳೆಮನಿ ಮಾತನಾಡಿ, “ಸಂವಿಧಾನ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ, ದೇಶದ ಸಂವಿಧಾನದ ಬಗ್ಗೆ ಅವಹೇಳನಾರಿ ಹೇಳಿಕೆ ನೀಡಿರುವ ಅಮಿತ್ ಶಾ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ʼಜ್ಞಾನವೇ ಅತ್ಯುತ್ತಮ ಸಂಪತ್ತು. ಮೌಢ್ಯವೇ ಅತ್ಯಂತ ಕೆಟ್ಟ ಶತ್ರುʼ, ಗುಲಾಮಗಿರಿಯನ್ನು ಮೆಟ್ಟಿ ನಿಲ್ಲುತ್ತಾರೆಂದು ಅಂಬೇಡ್ಕರ್‌ರವರು ತಮ್ಮ ಜೀವಿತಾವಧಿಯ ಕಾಲದಲ್ಲಿಯೇ ಎಚ್ಚರಿಸುತ್ತಿದ್ದರು. ಅದ್ಯಾವುದನ್ನೂ ಲೆಕ್ಕಿಸದೆ ನಾವುಗಳು ಅವರ ಮಾತುಗಳಿಗೆ ಬೆಲೆಕೊಡದೆ ಇಂದು ಮೌಢ್ಯದ ಗುಲಾಮರಾಗಿದ್ದೇವೆ” ಎಂದು ಹೇಳಿದರು.
ಡಿಎಸ್‌ಎಸ್ ಭಿಮವಾದ ಜಿಲ್ಲಾಧ್ಯಕ್ಷ ಸಿ ಕೆ ಮರಿಸ್ವಾಮಿ ಮಾತನಾಡಿ, “ದೇಶದ ನೆಲದ ಕಾನೂನು ಮನುಸೃತಿಯಿಂದ ಏನೂ ಪಡೆದಿಲ್ಲ. ಹಾಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲವೆಂದು ಸಂಘ ಪರಿವಾರದ ಗುರೂಜಿ ಗೋಲ್ವಾಲ್ಕರ್ ಹೇಳಿದ್ದ. ಹಿಂದುಗಳಿಗೆ ಪ್ರಜಾಪ್ರಭುತ್ವದ ತತ್ವಗಳು ಹೊರಗಿನವು. ಇಡೀ ಮನುಕುಲದ ಅತಿಶ್ರೇಷ್ಠ ಮತ್ತು ಮಹಾನ್ ಕಾನೂನು ರಚನೆಕಾರ ಮನು ಎಂದಿದ್ದರು. ಆದರೆ, ಅದೇ ವಂಶದ ಜಾತಿವಾದಿ ಮನಸ್ಥಿತಿಗಳು ಇಂದು ಇಡೀ ದೇಶದ ತುಂಬಾ ವ್ಯಾಪಿಸಿ ಬಾಬಾಸಾಹೇಬ್ ಅವರ ಬಗ್ಗೆ ಅಪಪ್ರಚಾರ ಮಾಡುತ್ತ ಈ ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕಾಶ್ ಇರಪುರ ರಮೇಶ್ ಭೋಗುಂಪಾ ಮಾತನಾಡಿ “2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಅಥವಾ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಹೇಳಿಕೆ ನೀಡುವವರ ವಿರುದ್ಧ ಈವರೆಗೆ ಕ್ರಮ ಕೈಗೊಂಡಿಲ್ಲ. ಇದನ್ನು ನೋಡಿದರೆ ಆರ್‌ಎಸ್‌ಎಸ್ ಅಜೆಂಡಾ ಹೇರಲು ಹೊರಟಿದ್ದಾರೆ. ಬಡವರ ದಲಿತರ ಸ್ಥಿತಿಗತಿ ಬಗ್ಗೆ ಚಿಂತನೆ ಮಾಡುತ್ತಿಲ್ಲ. ʼನಾವು ಅಧಿಕಾರಕ್ಕೆ ಬಂದಿರುವುದೇ ಈ ದೇಶದ ಸಂವಿಧಾನ ಬದಲಾವಣೆ ಮಾಡಲುʼ ಎಂದು, ದೆಹಲಿಯ ಜಂತರ್ ಮಂತರ್‌ನಲ್ಲಿ ಹಾಡುಹಗಲೇ ಸಂವಿಧಾನದ ಪ್ರತಿ ಸುಟ್ಟು ವಿಕೃತಿ ಮೆರೆದಿದ್ದಾರೆ. ನಿರಂತರವಾಗಿ ಸಂವಿಧಾನ ಶಿಲ್ಪಿ ಭೀಮರಾವ್ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಇದನ್ನು ಅವರ ಅನುಯಾಯಿಗಳಾದ ನಾವು ಸಹಿಸುವುದಿಲ್ಲ” ಎಂದು ಗುಡಿಗಿದರು.
ಆಯೂಬ್ ಮಾತನಾಡಿ, “ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಕೂಡ ಇದನ್ನು ಖಂಡಿಸಲೇಬೇಕು. ಬಾಬಾ ಸಾಹೇಬರೇನಾದರೂ ಈ ದೇಶದಲ್ಲಿ ಹುಟ್ಟದೇ ಹೋಗಿದ್ದರೆ, ಅಮಿತ್ ಶಾನಂತಹ ದುರುಳ ರಾಜಕಾರಣಿಗಳು ಅಂತಹ ಸ್ಥನಕ್ಕೇರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅಂಬೇಡ್ಕರ್ ಅವರ ಋಣದಿಂದ ಆಯ್ಕೆಯಾದ ರಾಜಕಾರಣಿಗಳು ಯಾವತ್ತೂ ಕೂಡಾ ಅಂಬೇಡ್ಕರ್ ವಿರೋದಿಗಳ ಧ್ವನಿ ಎತ್ತಲೇ ಇಲ್ಲ. ನಮ್ಮ ಪಾಡೇನು ಎಂದು ಊಹಿಸಲು ಸಾಧ್ಯವೇ? ಅವರು ಬರೆದಿರುವ ಸಂವಿಧಾನ ನಮಗೆಂದಿಗೂ ಸ್ವರ್ಗ ಇದ್ದ ಹಾಗೆ. ಮನುವಾದ ಯಾವತ್ತೂ ಕೂಡ, ಮುಂದೆ ಕೂಡ ನರಕವೇ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಭಾರತದ ಸಂವಿಧಾನ ಮಾನವ ಘನತೆಯನ್ನು ರಕ್ಷಿಸುತ್ತದೆ: ಚಿಂತಕ ಡಾ. ಸರ್ಜಾಶಂಕರ್ ಹರಳಿಮಠ
ಮಂಜುನಾಥ್ ಗೋಮಾರ್ಸಿ ಮಾತನಾಡಿ, “ಡಾ. ಬಾಬಾಸಾಹೇಬರಿಗೆ ಅಪಮಾನಕರವಾಗಿ ಮಾತನಾಡಿರುವ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಡಬೇಕು. ಅವರ ವಿರುದ್ಧ ರಾಷ್ಟ್ರದ್ರೋಹಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು. ಇನ್ಮುಂದೆ ಸಂವಿಧಾನದ ವಿರುದ್ಧ ಹೇಳಿಕೆ ಕೊಡುವಂತ, ಮಹಾನಮಾನವತವಾದಿಗೆ ಅವಮಾನಕರ ಹೇಳಿಕೆ ಕೊಡುವವರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾರುತಿ ಹುಲ್ಕಿಹಾಳ್, ಮೂರ್ತಿ ಗಂಗಾವತಿ, ಅಯೂಬ್, ಪರಶುರಾಮ್, ವೆಂಕಟೇಶ್ ಟಿ, ಸೃಫರ್ಜ್, ತಿಪ್ಪಣ್ಣ, ಓಂಕಾರಪ್ಪ ಸೇರಿದಂತೆ ಬಹುತೇಕರು ಇದ್ದರು.