ಮೌಲ್ಯಾಧಾರಿತ ರಾಜಕೀಯದೊಂದಿಗೆ, ದೇಶದ ಕಲ್ಯಾಣ ಎಂಬ ಧ್ಯೇಯದೊಂದಿಗೆ ಪ್ರಸಕ್ತ ರಾಜಕೀಯ ರಂಗದಲ್ಲಿ ಸಕ್ರಿಯವಾಗಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ 2025-2026 ರ, ಅವಧಿಗೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷೀಯ ಚುನಾವಣೆಯು ಗಣರಾಜ್ಯ ದಿನದಂದು ಮಂಗಳೂರು ನಗರದ ಹ್ಯಾಮಿಲ್ಟನ್ ಸರ್ಕಲ್ ಬಳಿ ಇರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ, ಪಕ್ಷದ ರಾಜ್ಯ ಸಮಿತಿ ವೀಕ್ಷಕರ ಉಸ್ತುವಾರಿಯಲ್ಲಿ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಕ್ಷದ ರಾಜ್ಯಾಧ್ಯಕ್ಷರಾದ ಅಡ್ವೋಕೇಟ್ ತಾಹಿರ್ ಹುಸೇನ್ ರವರು ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದರು.
ಜಿಲ್ಲೆಯ ಎಲ್ಲೆಡೆಗಳಿಂದ ಆಗಮಿಸಿದ್ದ, ಜಿಲ್ಲಾ ಸಮಿತಿಯ ಸದಸ್ಯರಿರುವ ಪಕ್ಷದ ಕಾರ್ಯಕರ್ತರ ಮತದಾನದ ಬಳಿಕ, ಜನಪರ ಹೋರಾಟಗಾರರಾದ ಎಂ. ದಿವಾಕರ್ ರಾವ್ ಬೋಳೂರುರವರು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಡ್ವೊಕೇಟ್ ತಾಹೀರ್ ಹುಸೇನ್ ರವರು ಘೋಷಿಸಿದರು.
ಪಾಧ್ಯಕ್ಷರಾಗಿ ಆಸಿಫ್ ಇಕ್ಬಾಲ್ ಮತ್ತು ಆಯೆಷಾ ಮಮ್ತಾಝ್, ಪ್ರಧಾನ ಕಾರ್ಯದರ್ಶಿಯಾಗಿ ಮುನೀರ್ ಪದ್ರೆಂಗಿ, ಕಾರ್ಯದರ್ಶಿಯಾಗಿ ಮರ್ಯಮ್ ಶಹೀರಾ, ಸಂಘಟನಾ ಕಾರ್ಯದರ್ಶಿಯಾಗಿ ಇಸ್ಹಾಕ್ ವಿಟ್ಲ, ಮಾಧ್ಯಮ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಕುಕ್ಕಾಜೆ, ಕೋಶಾಧಿಕಾರಿಯಾಗಿ, ಮುಹಮ್ಮದ್ ಸೈಫ್ ರವರನ್ನು ಇದೇ ಸಂದರ್ಭದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ವೆಲ್ಫೇರ್ ಪಾರ್ಟಿ ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ್ ಸಾಲ್ಯಾನ್, ರಾಜ್ಯ ಕಾರ್ಯದರ್ಶಿ ರಿಝ್ವಾನ್ ಹುಮನಾಬಾದ್, ರಾಜ್ಯ ಸಮಿತಿಯ ಕೋಶಾಧಿಕಾರಿಯಾಗಿರುವ ಅಬ್ದುಸ್ಸಲಾಂ ಸಿ.ಎಚ್. ಮುಂತಾದವರಾಗಿರುವ ಪಕ್ಷದ ಗಣ್ಯ ನಾಯಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಫಾರೂಖ್ ಅಲೇಕಲರವರು ಸ್ವಾಗತಿಸಿದರು ಹಾಗೂ ಪಕ್ಷದ ನೂತನ ಪ್ರಧಾನ ಕಾರ್ಯದರ್ಶಿ ಮುನೀರ್ ಪದ್ರೆಂಗಿ ಧನ್ಯವಾದವಿತ್ತರು.
