ದೇಶದ ಶೇ. 55 ರಷ್ಟು ಟ್ರಕ್ ಚಾಲಕರಲ್ಲಿ ದೃಷ್ಟಿದೋಷ; ಅಪಘಾತಗಳಿಗೆ ಕಾರಣವಾದ ಕಣ್ಣಿನ ಸಮಸ್ಯೆ!

Date:

Advertisements

ನಮ್ಮ ದೇಶದ ಟ್ರಕ್ ಚಾಲಕರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದರಲ್ಲಿ ದೃಷ್ಟಿದೋಷ ಬಹುವಾಗಿ ಕಾಡುತ್ತಿದೆ. ಇತ್ತೀಚಿಗೆ ಐಐಟಿ-ದೆಹಲಿ ಸಿದ್ಧಪಡಿಸಿರುವ ವರದಿಯ ಪ್ರಕಾರ ದೇಶದ ಒಟ್ಟು ಟ್ರಕ್ ಚಾಲಕರ ಪೈಕಿ ಶೇ 55.1ರಷ್ಟು ಮಂದಿಗೆ ಕಣ್ಣಿನ ಸಮಸ್ಯೆ ಕಾಡುತ್ತಿದೆ. ಅಲ್ಲದೆ, ಶೇ 46.7ರಷ್ಟು ಚಾಲಕರು ಹತ್ತಿರದ ದೃಷ್ಟಿದೋಷದ ಸಮಸ್ಯೆಯಿದೆ. 

ಸರಿಯಾದ ಸಮಯಕ್ಕೆ, ಗುಣಮಟ್ಟದ ಆಹಾರ ಸೇವಿಸದ ಕಾರಣ ಸ್ಥೂಲಕಾಯದ ಸಮಸ್ಯೆಯಿಂದಲೂ ಬಳಲುತ್ತಿದ್ದಾರೆ  ಎಂದು ವರದಿ ಹೇಳಿದೆ. ಚಾಲಕರಲ್ಲಿ  ಶೇ 18.4ರಷ್ಟು ಮಂದಿಯ ರಕ್ತದಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಂಶವಿದೆ. ಇದಲ್ಲದೆ ಹಲವು ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ದುರ್ಗಮ, ಅಪಾಯಕಾರಿ ಹಾಗೂ ವಾಯು ಮಾಲಿನ್ಯವುಳ್ಳ ರಸ್ತೆಗಳಲ್ಲಿ ದಿನವಿಡಿ ಚಾಲನೆ ಮಾಡುವುದರಿಂದ ಟ್ರಕ್‌ ಚಾಲಕರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ನಮ್ಮ ದೇಶದ ರಸ್ತೆಗಳಲ್ಲಿ ಶೇ 50ರಷ್ಟು ಸಂಚಾರ ದಟ್ಟಣೆಯಿದೆ. ಜೊತೆಗೆ, ಸರಕು ಸಾಗಣೆ ವೆಚ್ಚವು ಶೇ 14ರಿಂದ ಶೇ 16ರಷ್ಟು ಹೆಚ್ಚಿದೆ. ಅಂತರರಾಜ್ಯ, ವಾರಗಟ್ಟಲೆ ಚಾಲನೆ ಮಾಡುವ ಚಾಲಕರು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ರಾಷ್ಟ್ರದ ಸರಕು ಸಾಗಣೆಯಲ್ಲಿ ಟ್ರಕ್‌ ಚಾಲಕರ ಸೇವೆ ಪ್ರಮುಖವಾದುದು. ದೇಶದ ಉದ್ದಗಲಕ್ಕೂ ಇವರು ಸಂಪರ್ಕ ಬೆಸೆಯುತ್ತಾರೆ. ಟ್ರಕ್‌ ಚಾಲನೆ ಮಾಡುವವರಲ್ಲಿ ಸ್ವಂತ ಲಾರಿ ಹೊಂದಿದ್ದವರಿಗೆ ಆರ್ಥಿಕವಾಗಿ ಒಂದಷ್ಟು ಲಾಭಗಳಿವೆ. ಆದರೆ ತಿಂಗಳ ಕೂಲಿ, ದಿನಗೂಲಿಗೆ ಟ್ರಕ್‌ ಚಲಾಯಿಸುವವರು ಹಲವು ಸಮಸ್ಯೆಗಳಿವೆ. ಸರಿಯಾಗಿ ವೇತನ ಸಿಗುವುದಿಲ್ಲ, ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಳಿರುವುದಿಲ್ಲ. ನಿದ್ದೆಗೆಟ್ಟು ಕೆಲಸ ಮಾಡುವುದರಿಂದ ಹಲವು ತೊಂದರೆಗೆ ಸಿಲುಕಬೇಕಾಗುತ್ತದೆ. ಬೇರೆ ಉದ್ಯಮಗಳ ಕಾರ್ಮಿಕರಿಗೆ ಸಿಗುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೌಲಭ್ಯಗಳು ಇವರಿಗೆ ಅಷ್ಟು ಸುಲಭದಲ್ಲಿ ದೊರಕುವುದಿಲ್ಲ. ಭಾರತೀಯ ರಸ್ತೆಮಾರ್ಗ ಜಾಲವು 90 ಸಾವಿರ ಕಿಲೋಮೀಟರ್‌ಗಿಂತಲೂ ಹೆಚ್ಚಿದೆ. ಬಹುತೇಕ ರಾಜ್ಯಗಳಲ್ಲಿ ರಸ್ತೆಗಳು ಕಳಪೆ ಸ್ಥಿತಿಯಲ್ಲಿವೆ. ಈ ರಸ್ತೆಗಳು ಚಾಲನೆಗೆ, ವಿಶೇಷವಾಗಿ ಟ್ರಕ್ ಚಾಲಕರಿಗೆ ಉಪಯುಕ್ತವೆಂದು ಪರಿಗಣಿಸಲಾಗುವುದಿಲ್ಲ ಎಂದು ಹಲವು ವರದಿಗಳು ತಿಳಿಸಿವೆ. ಬಹುತೇಕ ಸಂದರ್ಭಗಳಲ್ಲಿ ಅಪಘಾತಗಳಿಗೆ ಕೆಟ್ಟ ರಸ್ತೆಗಳೆ ಕಾರಣವಾಗುತ್ತವೆ.

Advertisements

ಬಹುತೇಕ ಟ್ರಕ್‌ ಚಾಲಕರು ಅಸಂಘಟಿರು. ಅವರ ಕುಟುಂಬವು ಅತಂತ್ರದಲ್ಲಿರುತ್ತದೆ. ಸದ್ಯದ ಅಂಕಿಅಂಶಗಳನ್ನು ಗಮನಿಸಿದರೆ 100 ಟ್ರಕ್‌ಗಳಿಗೆ 75 ಚಾಲಕರು ಮಾತ್ರ ಲಭ್ಯರಿದ್ದಾರೆ. ಹತ್ತಾರು ದಿನ ಒಂದೇ ಸಮ ಕೆಲಸ ಮಾಡುವುದರಿಂದ ಅವರಿಗೆ ನಿಗದಿತ ಅವಧಿಯ ಮಾನದಂಡವಿರುವುದಿಲ್ಲ. ಅಪಘಾತವುಂಟಾದಾಗ ಹಲವು ಸಂದರ್ಭಗಳಲ್ಲಿ ಮಾಲೀಕರಿಗಿಂತ ಹೆಚ್ಚಾಗಿ ಚಾಲನೆ ಮಾಡುವ ಕೆಲಸಗಾರರನ್ನು ಬಡಪಾಯಿಗಳನ್ನು ಬಲಿಪಶು ಮಾಡಲಾಗುತ್ತದೆ.

ಚಾಲಕರು ನಿರಂತರವಾಗಿ 12 ಗಂಟೆಗಳ ಕಾಲ ಅಥವಾ 3 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ಅವರು ನಿದ್ರೆಯಿಲ್ಲದೆ ಅನೇಕ ದಿನಗಳ ಕಾಲ ಕೆಲಸ ಮಾಡಬೇಕಿರುತ್ತದೆ. ಸರಕು ಸಾಗಣೆಯನ್ನು ನಿಗದಿತ ಅವಧಿಯೊಳಗೆ ತಲುಪಿಸುವ ಕಾರಣದಿಂದ ಟ್ರಕ್ ಚಾಲಕರು ನಿರಂತರವಾಗಿ ಗಂಟೆಗಳ ಕಾಲ ಪ್ರಯಾಣಿಸಬೇಕಾಗುವುದಲ್ಲದೆ ಸದಾ ಒತ್ತಡದಲ್ಲಿಯೇ ದಿನ ದೂಡಬೇಕಾಗಿರುತ್ತದೆ. ವಿವಿಧ ಪ್ರದೇಶಗಳಲ್ಲಿ ದೀರ್ಘ ಪ್ರಯಾಣದ ಸಮಯದಲ್ಲಿ ಕಳ್ಳತನ, ದರೋಡೆ, ಕಿರುಕುಳ, ಪ್ರಾಣ ಹಾನಿ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿಗೆ ಒಳಗಾಗಬೇಕಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ಬೆಳೆಸಿದ ಮಧ್ಯಮವರ್ಗ; ಮಧ್ಯಮವರ್ಗ ಮುಗಿಸಿದ ಮೋದಿ

ಸಾರಿಗೆ ಸಮಯದಲ್ಲಿ ವಿಶ್ರಾಂತಿ ಪಡೆಯಲು ಟ್ರಕ್ ಚಾಲಕರಿಗೆ ಸಾಕಷ್ಟು ಆಯ್ಕೆಗಳಿಲ್ಲ. ಹೆಚ್ಚಾಗಿ ರಸ್ತೆ ಬದಿಯ ಡಾಬಾಗಳಲ್ಲಿ ವಿಶ್ರಾಂತಿಗೆ ತೆರಳುತ್ತಾರೆ. ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಇರುವ ರಸ್ತೆ ಬದಿಯ ಡಾಬಾಗಳು ಟ್ರಕ್‌ ಚಾಲಕರಿಗೆ ಇರುವ ಬಹುತೇಕ ಏಕೈಕ ತಾಣವಾಗಿದೆ. ಇಲ್ಲಿ ನೈರ್ಮಲ್ಯೀಕರಣದ ಪರಿಸ್ಥಿತಿಗಳು ತೀರ ಕೆಟ್ಟದಾಗಿರುತ್ತವೆ. ಇಲ್ಲಿಂದಲೇ ಅವರ ಅನಾರೋಗ್ಯ ಶುರುವಾಗುತ್ತದೆ. ಇಂತಹ ಡಾಬಾಗಳಲ್ಲಿ ಟ್ರಕ್‌ ಚಾಲಕರಿಗೆ ಮೂಲಸೌಕರ್ಯ ಒದಗಿಸಲು ಯಾವುದೇ ಕಠಿಣ ನಿಯಮಾವಳಿಗಳನ್ನು ಸರ್ಕಾರದಿಂದ ರೂಪಿಸಲಾಗಿಲ್ಲ.

ದೃಷ್ಟಿ ಸಮಸ್ಯೆಯಿಂದ ಶಾಶ್ವತ ಅಂಗವಿಕಲತೆ, ಹೆಚ್ಚು ಅಪಘಾತ

ಟ್ರಕ್‌ ಚಾಲಕರಿಗೆ ಬಹುತೇಕ ಸಮಸ್ಯೆಗಳು ಮಾರಕವಾದರೂ ದೃಷ್ಟಿ ಸಮಸ್ಯೆಯು ಬಹಳ ಗಂಭೀರ ಸಮಸ್ಯೆಯಾಗಿದೆ. ಇದು ಶಾಶ್ವತ ಅಂಕವಿಕಲತೆಯನ್ನು ಉಂಟು ಮಾಡುತ್ತದೆ. ಕೆಲವೊಮ್ಮೆ ಶಾಶ್ವತ ಕುರುಡುತನ ಮಾಡುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ದೃಷ್ಟಿದೋಷ ಹೊಂದಿರುವ ಚಾಲಕರು ಕನ್ನಡಕ ಬಳಸಿದರೂ ಅವಧಿ ಮೀರಿದ ನಂತರ ಬದಲಿಸುವುದು ಅಥವಾ ವೈದ್ಯರ ಸೂಚನೆಗಳನ್ನು ಪಾಲಿಸುವುದಿಲ್ಲ. ದೂರದೃಷ್ಟಿಯ ಸಮಸ್ಯೆಗಳ ಬಹುತೇಕ  ಪ್ರಕರಣಗಳಲ್ಲಿ ಶೇ 45 ರಷ್ಟು ಮಂದಿ 18-35 ವರ್ಷ ವಯಸ್ಸಿನ ಕಿರಿಯ ಗುಂಪಿನಲ್ಲಿ ಕಂಡುಬಂದಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಅನೇಕ ಚಾಲಕರು ಕಣ್ಣಿನ ಪೊರೆ ಅಥವಾ ಗ್ಲುಕೋಮಾದಿಂದ ಬಳಲುತ್ತಿದ್ದಾರೆ. ಎಲ್ಲ ಟ್ರಕ್ ಚಾಲಕರು ತಮ್ಮ ಮತ್ತು ಇತರರಿಗೆ ಸುರಕ್ಷಿತವಾಗಿರಲು ವಾಡಿಕೆಯ ಕಣ್ಣಿನ ತಪಾಸಣೆ ಅತ್ಯಗತ್ಯವಾಗಿದೆ. ಆದರೆ ಯಾರು ಇದನ್ನು ಪಾಲಿಸುವುದಿಲ್ಲ.

ಚಾಲಕರ ದೃಷ್ಟಿ-ಸಂಬಂಧಿತ ಸಮಸ್ಯೆಗಳಿಂದಾಗಿ ಭಾರತೀಯ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತವೆ. ದೃಷ್ಟಿದೋಷ ಬಂದ ಟ್ರಕ್‌ ಚಾಲಕರು ಹಲವು ಜಂಜಾಟಗಳಿಂದ ಆಸ್ಪತ್ರೆಗಳಿಗೆ ತೆರಳುವುದಿಲ್ಲ ಹಾಗೂ ಕಣ್ಣಿನ ಪರೀಕ್ಷೆಗೆ ಒಳಗಾಗುವುದಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತವೆ. ಭಾರತದ ರಸ್ತೆಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಟ್ರಕ್‌ ಟಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಅರ್ಧದಷ್ಟು ಜನರು ದೃಷ್ಟಿ ಸಮಸ್ಯೆಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಟ್ರಕ್‌ ಹಾಗೂ ಯಾವುದೇ ವಾಹನ ಚಲಾವಣೆಗೆ ಸುಲಭವಾಗಿ ದಾರಿ ಸಿಗುತ್ತದೆ. ಆದರೆ ಯಾವುದೇ ಪಾಶ್ಚಿಮಾತ್ಯ ದೇಶದಲ್ಲಿ ಸರಿಯಾದ ಕನ್ನಡಕ ಮತ್ತು ಕಣ್ಣಿನ ತಪಾಸಣೆ ಇಲ್ಲದೆ ವಾಹನ ಚಲಾಯಿಸಲು ಅನುಮತಿ ನೀಡುವುದಿಲ್ಲ. ಅವರನ್ನು ಅನರ್ಹರು ಎಂದು ಪರಿಗಣಿಸಲಾಗುತ್ತದೆ.

ಟ್ರಕ್ ಚಾಲಕರ ಅಸಂಘಟಿತ ಕೆಲಸದ ಸ್ವಭಾವವು ಕಣ್ಣಿನ ಸಮಸ್ಯೆ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬಹುತೇಕ ಟ್ರಕ್‌ ಚಾಲಕರು ಗ್ರಾಮೀಣ ಪ್ರದೇಶದಿಂದ ಬಂದವರು ಹಾಗೂ ಬಡವರಾಗಿರುತ್ತಾರೆ. ತಮ್ಮ ಆರ್ಥಿಕ ಪರಿಸ್ಥಿತಿಗಳಿಂದಾಗಿ ಈ ವೃತ್ತಿಗೆ ಬಂದಿರುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡದೆ ಮತ್ತಷ್ಟು ತೊಂದರೆಗಳಿಗೆ ಸಿಲುಕಿಕೊಳ್ಳುತ್ತಾರೆ. ಸರ್ಕಾರಗಳು ಕೂಡ ಇಂತಹವರ ಬಗ್ಗೆ ಗಮನಹರಿಸಬೇಕಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X