ವಿಜಯನಗರ | ʼಟೊಟೆಂಪೋಲ್‌ ಕುಲಚಿಹ್ನೆʼ ಎಂಬುದು ಸಮುದಾಯದ ಅಸ್ತಿತ್ವದ ಸಂಕೇತ: ಪಿ. ಆರಡಿಮಲ್ಲಯ್ಯ

Date:

Advertisements

‌ಟೊಟೆಂಪೋಲ್‌ ಕುಲಚಿಹ್ನೆ‌ ಎಂಬುದು ಸಮುದಾಯವೊಂದರ ಅಸ್ತಿತ್ವದ ಸಂಕೇತವಾಗಿದೆ ಎಂದು ಶಿವಮೊಗ್ಗದ ಕಮಲಾ ನೆಹರೂ ಸ್ಮಾರಕ ರಾಷ್ಟೀಯ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪಿ. ಆರಡಿಮಲ್ಲಯ್ಯ ಕಟ್ಟೇರ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ನಡೆದ ʼಪಾಕ್ಷಿಕ ಮಾತುʼ ಕಾರ್ಯಕ್ರಮದಲ್ಲಿ ʼಟೊಟೆಂಪೋಲ್‌ (ಕುಲಚಿನ್ಹೆ) ಐತಿಹಾಸಿಕ ವಿಶ್ಲೇಷಣೆʼ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಕುಲಶಾಸ್ತ್ರೀಯ ಅಧ್ಯಯನದಲ್ಲಿ ಬರುವ ಕುಲಚಿಹ್ನೆಗಳು ಸಮುದಾಯಗಳ ಉಳಿವಿನ ಅಸ್ತಿತ್ವಕ್ಕೆ ಅಗತ್ಯ. ಕ್ರಿಪೂ.ದಿಂದ ಹಿಡಿದು ಪ್ರಸ್ತುತದವರೆಗೆ ಕುಲಚಿಹ್ನೆಗಳು ಯಾವ ರೀತಿ ಬದಲಾವಣೆಗೊಂಡು ಬೇರೆ ರೂಪಗಳನ್ನು ಪಡೆದವು ಎಂಬುವುದನ್ನು ವಿಸ್ತೃತವಾಗಿ ವಿವರಿಸಿದರು. ಟೊಟೆಂಪೋಲ್‌ ಎಂದರೆ ಅಶೋಕ ಸ್ತಂಭ. ಪ್ರಕೃತಿ ಕೇಂದ್ರಿತ ಕುಲಚಿಹ್ನೆ, ಪ್ರಾಣ ಕೇಂದ್ರಿತ ಕುಲಚಿಹ್ನೆ ಮತ್ತು ಮಾನವ ಕೇಂದ್ರಿತ ಕುಲಚಿಹ್ನೆಗಳು ಆದಿಕಾಲದಿಂದಲೂ ಇದ್ದವು ಎಂಬುದನ್ನು ತಿಳಿಸಿಕೊಟ್ಟರು.

ಸಾಮ್ರಾಟ ಅಶೋಕನಿಗಿಂತ ಪೂರ್ವದಲ್ಲಿ ಟೊಟೆಂಪೋಲ್‌ಗಳು ಇದ್ದವು. ಹಾಗೆಯೇ ಮಾನವನ ವಿಕಾಸವನ್ನು ಟೊಟೆಂಪೋಲ್‌ ಕುಲಚಿನ್ಹೆಗಳಲ್ಲಿ ನೋಡಬಹುದು. ಕಾನಿಷ್ಕದಲ್ಲಿರುವ ಅತ್ಯಂತ ಎತ್ತರವಾದ 400 ಅಡಿ ಕೊಕೆಂಪೋಲ್‌ ಇದೆ. ಶಿರಸಿಯಲ್ಲಿರುವ ಟೊಟೆಂಪೋಲ್‌(ಕುಲಚಿನ್ಹೆ)ಗೆ ಬಂಗಾರದ ಲೇಪನ ಮಾಡಲಾಗಿದೆ. ಈ ಹೊಸ ವಿಷಯದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದು, ವಿದ್ಯಾರ್ಥಿಗಳೂ ಕೂಡ ಇಂತಹ ವಿಶಿಷ್ಟ ವಿಷಯಗಳ ಕುರಿತು ಸಂಶೋಧನೆ ನಡೆಸಬೇಕು ಎಂದು ತಿಳಿಸಿದರು.

Advertisements

ಈ ಸುದ್ದಿ ಓದಿದ್ದೀರಾ?: ವಿಜಯನಗರ | ಮಹಿಳಾ ಸಶಕ್ತೀಕರಣ, ಯುವ ಸಬಲೀಕರಣವೇ ʼಗ್ಯಾರಂಟಿʼ ಉದ್ದೇಶ: ಎಸ್‌ ಆರ್‌ ಮೆಹರೋಜ್‌ ಖಾನ್

ಕಾರ್ಯಕ್ರಮದಲ್ಲಿ ಮಾನವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ತಾರಿಹಳ್ಳಿ ಹನುಮಂತಪ್ಪ, ವಿಭಾಗದ ಮುಖ್ಯಸ್ಥ ಡಾ.ಎಲ್ ಶ್ರೀನಿವಾಸ, ಸಂಚಾಲಕ ಡಾ. ಶಿವರಾಜ ಎಸ್, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X