ಮುದ್ದೇಬಿಹಾಳ ತಾಲೂಕು ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಆಹ್ವಾನ; ಕಸಾಪ ನೆಡೆಗೆ ಸಾಹಿತಿಗಳ ವಿರೋಧ

Date:

Advertisements

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಫೆಬ್ರವರಿ 15ರಿಂದ ನಡೆಯುವ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗುವವರು ತಮ್ಮ ಸ್ವ-ವಿವರ ಸಹಿತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದು, ಸಾಹಿತ್ಯ ಲೋಕಕ್ಕೆ ಸಲ್ಲದ ಇಂತಹ ಹೇಳಿಕೆಯನ್ನು ಪ್ರಜ್ಞಾವಂತ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ‌ ವಿಶ್ರಾಂತ ಪ್ರಾಧ್ಯಾಪಕ ಚಂದ್ರಗೌಡ ಕುಲಕರ್ಣಿ ಕರೆ ನೀಡಿದರು.

ಈ ಕುರಿತು ಪತ್ರಿಕಾ ಪ್ರಕಟಣೆಗೆ ತಿಳಿಸಿರುವ ಅವರು, “ಒಂದು ತಾಲೂಕಿನಲ್ಲಿ ಸಾಹಿತ್ಯಿಕ ಸಾಧನೆ ಮಾಡಿದ ಎಂಟರಿಂದ ಹತ್ತು ಮಂದಿ ಸಾಹಿತಿಗಳನ್ನು ಗುರುತಿಸಿ ಸೂಕ್ತವಾದವರನ್ನು ಆಯ್ಕೆ ಮಾಡುವುದು ಕರ್ನಾಟಕ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜವಾಬ್ದಾರಿ. ಜಿಲ್ಲಾ ಅಧ್ಯಕ್ಷರೂ ಕೂಡಾ ಈ ಆಯ್ಕೆಯ ಜವಾಬ್ದಾರಿಯುತ ವ್ಯಕ್ತಿಗಳಾಗಿರುತ್ತಾರೆ” ಎಂದರು.

“ಸಾಹಿತ್ಯ ಸೇವೆಯ ಘನ ಉದ್ದೇಶದಿಂದ ಹುಟ್ಟಿದ ಈ ಸಂಸ್ಥೆ ಈವರೆಗೆ ನಡೆದುಬಂದ ಅರ್ಥವತ್ತಾತ್ ಪರಂಪರೆಯನ್ನು ಮುಂದುವರೆಸಬೇಕು. ತಾಲೂಕಿನ ಅಧ್ಯಕ್ಷರಾದಿಯಾಗಿ ಎಲ್ಲ ಪದಾಧಿಕಾರಿಗಳು ಜವಾಬ್ದಾರಿ ಹೊತ್ತು ಮುನ್ನಡೆಸಬೇಕು. ಆ ಪರಂಪರೆಯನ್ನು ಮುರಿದು ಅಧ್ಯಕ್ಷರಾಗಲು ಅರ್ಜಿ ಸಲ್ಲಿಸಲು ಸೂಚಿಸಿದರೆ, ಕೋರಿದರೆ ಗೌರವಯುತ ಸಾಹಿತಿಗಳಾರೂ ಸ್ಪಂದಿಸಲಾರರು” ಎಂದು ಆಕ್ಷೇಪ ವ್ಯಕ್ತಪಡಿಸಿದರು.

Advertisements

“ತಾಲೂಕು, ಜಿಲ್ಲೆ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಆ ಸಾಹಿತಿಗೆ ಗೊತ್ತಾಗದ ರೀತಿಯಲ್ಲಿ ನಡೆಯಬೇಕೇ ಹೊರತು ಅವರಿಂದ ಅರ್ಜಿ ಪಡೆದು ನಡೆಯುವಂಥದ್ದಲ್ಲ. ಈ ಹಿಂದೆ ಮುದ್ದೇಬಿಹಾಳ ತಾಲೂಕು ಸಮ್ಮೇಳನಗಳು ನಾಲ್ಕು ನಡೆದಿವೆ. ಆಗ ಯಾರಿಂದಲೂ ಅರ್ಜಿ ಕರೆದಿರಲಿಲ್ಲ. ಪರಿಷತ್ತಿನ ಪದಾಧಿಕಾರಿಗಳು, ತಾಲೂಕಿನ ಹಿರಿಯರು, ಸ್ಥಳೀಯ ಪಕ್ಷಾತೀತವಾದ ರಾಜಕಾರಣಿಗಳು ಒಮ್ಮತದಿಂದ ಆರಿಸಿ, ಆಯ್ಕೆಯಾದ ಸಾಹಿತಿಯವರನ್ನು ಮನೆವರೆಗೆ ಹೋಗಿ ಅಹ್ವಾನ ನೀಡಿದ ಉದಾಹರಣೆಗಳು ಇದೇ ತಾಲೂಕಿನಲ್ಲಿವೆ. ಈಗ ತಾಲೂಕಿನ ಐದನೆಯ ಸಮ್ಮೇಳನಕ್ಕೆ ಅರ್ಜಿ ಹಾಕುವ ಪ್ರಸಂಗ ಬಂದಿದೆಯೆಂದರೆ ಇದರಂತಹ ಅವಮಾನದ ಕೆಲಸ ಮತ್ತೊಂದಿಲ್ಲ. ದಯವಿಟ್ಟು ತಾಲೂಕು ಮತ್ತು ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಶಾಸಕರು, ಸಂಸ್ಕೃತಿ ಪ್ರೇಮಿಗಳು ಕೆಟ್ಟ ಪರಂಪರೆಗೆ ಅವಕಾಶ ಕೊಡದೆ ಮೊದಲಿನ ಪರಂಪರೆಯನ್ನು ಮುಂದುವರೆಸಬೇಕು” ಎಂದು ಪ್ರಗತಿಪರ ಚಿಂತಕ ಅಬ್ದುಲ್ ರೆಹಮಾನ್ ಬಿದರಕುಂದಿ ಹೇಳಿದರು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಘಟಪ್ರಭಾ ನದಿಯಲ್ಲಿ ಅಕ್ರಮ ಮರಳುಗಾರಿಕೆ; ಸೂಕ್ತ ಕ್ರಮಕ್ಕೆ ರೈತ ಸಂಘ ಮನವಿ

“ಮುದ್ದೇಬಿಹಾಳ ಕಸಾಪ ಎರಡು ಜಿಲ್ಲಾ ಸಾಹಿತ್ಯ ಸಮ್ಮೇಳನ, ನಾಲ್ಕು ತಾಲೂಕು ಸಮ್ಮೇಳನ ನಡೆಸಿದ ಒಳ್ಳೆಯ ಹೆಸರನ್ನು ಪಡೆದಿದೆ. ಇದನ್ನು ಅರ್ಥಮಾಡಿಕೊಂಡು ಈಗ ತಾಲೂಕು ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವುದು ಸೂಕ್ತ. ಸಾಹಿತ್ಯಾಭಿಮಾನಿಗಳು ಸೂಕ್ತ ಈತಿಯಲ್ಲಿ ಆಯ್ಕೆಯಾಗುವಂತೆ ಪದಾಧಿಕಾರಿಗಳ ಮೇಲೆ ಒತ್ತಡ ಹೇರಬೇಕು” ಎಂದು ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X