ತುಮಕೂರು | ಕಾವ್ಯ, ಪುಸ್ತಕಗಳು ಜಾತಿ ಮತವಿಲ್ಲದೆ ಜಾತ್ಯತೀತವಾಗಬೇಕು : ರಘುನಂದನ

Date:

Advertisements

ಕವಿತೆ ಅರ್ಥವಾಗಬೇಕೆಂದರೆ ಅದರೊಂದಿಗೆ ಸಂಸಾರ ನಡೆಸಬೇಕು; ಅದರ ತೀವ್ರ ಒಡನಾಟವಿರಬೇಕು. ಆಗ ಮಾತ್ರ ಕವಿತೆ ದಕ್ಕುತ್ತದೆ ಎಂದು ಕವಿ, ನಾಟಕಕಾರ ರಘುನಂದನ ಹೇಳಿದರು.

ತುಮಕೂರು ವಿಶ್ವದ್ಯಾನಿಲಯದ ಕುವೆಂಪು ಅಧ್ಯಯನ ಪೀಠ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕವಿತೆ ಅಲೌಕಿಕವಾದದ್ದು; ಅದು ಬೇರೊಂದು ಲೋಕವನ್ನೇ ಕಟ್ಟಿಕೊಡುತ್ತದೆ. ನಾವು ಕವಿತೆಯನ್ನು ಮನರಂಜನೆಗೋಸ್ಕರ ಮಾತ್ರ ಓದುತ್ತಿದ್ದೇವೆ. ಆದರೆ ಕವಿತೆ ಮನದ ಕಾಯಿಲೆಗೆ ಕಷಾಯ, ಅದೊಂದು ಔಷಧಿ ಎಂಬುದನ್ನು ನಾವು ತಿಳಿದಿಲ್ಲ ಎಂದರು.

Advertisements

ನಾವೆಲ್ಲರೂ ಈ ಲೋಕದಲ್ಲಿ ಇದ್ದೇವೆ ಎಂಬುದಕ್ಕಿಂತ ನಾವು ಲೋಕದ ಭಾಗವಾಗಿದ್ದೇವೆ; ನಮ್ಮ ಇರುವಿಕೆ, ಲೋಕದಲ್ಲಿ ನಾವಿದ್ದೇವೆ ಎಂಬ ಅರಿವೇ ಮುಖ್ಯ. ನಾವೆಲ್ಲರೂ ಒಂದೇ ಪ್ರಪಂಚದಲ್ಲಿದ್ದೇವೆ, ಹಾಗಾಗಿ ಒಳಗಿನದು, ಹೊರಗಿನದು ಎಂಬ ಭೇದ ಬೇಡ. ನಾವೆಲ್ಲರೂ ಒಂದೇ ಎಂಬ ಸಮನ್ವಯ ಭಾವವೇ ಶ್ರೇಷ್ಠ ಎಂದರು.

1000972817

ಕಾವ್ಯ, ಪುಸ್ತಕಗಳು ಜಾತಿ ಮತವಿಲ್ಲದೆ ಜಾತ್ಯತೀತವಾಗಬೇಕು. ಪುಸ್ತಕಗಳನ್ನು ಓದುವಾಗ ಯಾವ ಸಿದ್ಧಾಂತವಿಟ್ಟುಕೊಳ್ಳದೆ ಓದಬೇಕು. ಆಗ ಮಾತ್ರ ಅದರ ಸಾರ ಅರ್ಥವಾಗುತ್ತದೆ. ನಾವು ಯಾರೂ ಶಾಶ್ವತವಲ್ಲ. ಒಂದು ಸಾವು ಮತ್ತೊಂದು ಹುಟ್ಟಿಗೆ ಕಾರಣವಾಗುತ್ತದೆ. ಆನಂದ, ದುಃಖವೆಲ್ಲವೂ ಕ್ಷಣಿಕವಷ್ಟೇ ಎಂದರು.

ಯಾವ ನದಿಯೂ ಶ್ರೇಷ್ಠವಲ್ಲ, ಯಾವುದೂ ಕನಿಷ್ಠವಲ್ಲ. ಹನಿ ಹನಿಯೂ ಶ್ರೇಷ್ಟವೆ. ಯಾರೂ ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲ, ವಿಶ್ವಮಾನವ ಕುವೆಂಪು ಹೇಳುವ ಹಾಗೆ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರೂ ಅಲ್ಲ ಎಂಬ ವಿಶ್ವಮಾನವ ಸಂದೇಶ ಒಪ್ಪಿಕೊಳ್ಳಬೇಕು ಎಂದರು.

ಕುವೆಂಪು ಅಧ್ಯಯನ ಪೀಠದ ಸಂಯೋಜಕಿ ಡಾ. ಗೀತಾ ವಸಂತ, ಕಲಾವಿದ ತೋವಿನಕೆರೆ ಹನುಮಂತೇಗೌಡ, ಕಥೆಗಾರ ಮಿರ್ಜಾ ಬಷೀರ್, ಪತ್ರಕರ್ತ ಉಗಮ ಶ್ರೀನಿವಾಸ್, ರಂಗ ನಿರ್ದೇಶಕ ನಟರಾಜ್ ಹೊನ್ನವಳ್ಳಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X