ಪ್ರಯಾಗರಾಜ್ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಬೆಳಗಾವಿ ಮೂಲದ ನಾಲ್ವರು ಸಾವಿಗಿಡಾದ ಹಿನ್ನೆಲೆ ಇಬ್ಬರು ಅಧಿಕಾರಿಗಳನ್ನು ನಿಯೋಜನೆ ಮಾಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಮೂಲದ ಮೇಘಾ ದೀಪಕ ಹತ್ತರವಾಠ (24), ಜ್ಯೋತಿ ದೀಪಕ ಹತ್ತರವಾಠ (44), ಅರುಣ ಕೋಪರ್ಡಜೆ (61) ಮತ್ತು ಮಹಾದೇವ ಹನುಮಂತ ಬಾವನೂರ್ (48) ಪ್ರಯಾಗರಾಜ್ ಕುಂಭಮೇಳದಲ್ಲಿ ಕಾಲ್ತುಳಿತದಿಂದ ಸಾವಿಗಿಡಾಗಿದ್ದು, ಅವರ ಮೃತದೇಹವನ್ನು ತರುವುದಕ್ಕಾಗಿ ಜಿಲ್ಲಾಡಳಿತ ಇಬ್ಬರು ಅಧಿಕಾರಿಗಳನ್ನು ಕಳುಹಿಸಿದೆ.
ಈ ಸುದ್ದಿ ಓದಿದ್ದೀರಾ?
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೃತ್ ಎನ್ ಎಸ್ ಮತ್ತು ಆರ್ ಆರ್ ಪ್ರೊಜೆಕ್ಟ್ ವಿಶೇಷ ಜಿಲ್ಲಾಧಿಕಾರಿ ಹರ್ಷ ಶೆಟ್ಟಿ ಅವರನ್ನು ನಿಯೋಜಿಸಲಾಗಿದ್ದು, ಇಬ್ಬರೂ ತಕ್ಷಣ ಅಲ್ಲಿಗೆ ತೆರಳಿ ಉತ್ತರ ಪ್ರದೇಶ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ಮೃತದೇಹಗಳನ್ನು ಬೆಳಗಾವಿಗೆ ತರುವ ವ್ಯವಸ್ಥೆ ಮಾಡಲು ಜಿಲ್ಲಾದಿಕಾರಿಗಳು ಸೂಚಿಸಿದ್ದಾರೆ