ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಉಂಟಾಗಿರುವ ಕಾಲ್ತುಳಿತಕ್ಕೆ ಸಿಲುಕಿ ಸಾವಿಗೀಡಾದ ನಾಲ್ವರು ಹಾಗೂ ಗಾಯಗೊಂಡ ನಾಲ್ವರನ್ನು ವಿಮಾನ(ಏರ್ ಲಿಫ್ಟ್)ದ ಮೂಲಕ ಬೆಳಗಾವಿಗೆ ಕರೆತರಲು ಬೆಳಗಾವಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
ಮೃತಪಟ್ಟವರು ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ, ಮಹಾದೇವಿ ಬಾವನೂರ, ಅರುಣ್ ಕೋಪರ್ಡೆ ಹಾಗೂ ಗಾಯಗೊಂಡ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಕೋರ್ಪಡೆ ಇತರ ಇಬ್ಬರನ್ನೂ ಕರೆತರಲಾಗುತ್ತಿದೆ.
ಮೃತದೇಹಗಳು ಆ್ಯಂಬುಲೆನ್ಸ್ ಮೂಲಕ ಗುರುವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣ ತಲುಪಿವೆ. ಇನ್ನೊಂದು ಆ್ಯಂಬುಲೆನ್ಸ್‌ನಲ್ಲಿ ಗಾಯಾಳುಗಳೂ ದೆಹಲಿ ತಲುಪಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಗ್ನಿ ಅವಘಡ ಪ್ರಾತ್ಯಕ್ಷಿಕೆಯ ಅಣಕು ಪ್ರದರ್ಶನ
ಮಧ್ಯಾಹ್ನ 3ಕ್ಕೆ ವಿಮಾನ ದೆಹಲಿಯಿಂದ ಹೊರಡಲಿದ್ದು, ಸಂಜೆ 5.30ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ತಲುಪುವ ಸಾಧ್ಯತೆ ಇದೆಯೆಂದು ಜಿಲ್ಲಾಡಳಿತದ ಮೂಲಗಳಿಂದ ತಿಳಿದುಬಂದಿದೆ.
ಈ ಕೆಲಸಕ್ಕೆ ನೇಮಿಸಿದ ಮೂವರು ನೋಡಲ್ ಅಧಿಕಾರಿಗಳು ಬುಧವಾರ ಸಂಜೆಯೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ‘ಏರ್ ಲಿಫ್ಟ್’ ಮಾಡಲು ಕ್ರಮ ವಹಿಸಿದ್ದಾರೆಂಬುದು ಖಚಿತವಾಗಿದೆ.