ಬೆಂಗಳೂರು | ಗುಂಡು ಹಾರಿಸಿ ವಿದ್ಯಾರ್ಥಿನಿಯನ್ನು ಕೊಂದಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

Date:

Advertisements

ವಿದ್ಯಾರ್ಥಿನಿ ಮೇಲೆ ಕಂಟ್ರಿಮೇಡ್ ಪಿಸ್ತೂಲ್​ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಅಪರಾಧಿಗೆ ಬೆಂಗಳೂರು ನಗರದ ಮ್ಯಾಜಿಸ್ಟ್ಟೇಟ್ ನ್ಯಾಯಾಲಯವು ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ.

ಭಾರತೀಯ ನ್ಯಾಯ ಸಂಹಿತೆ(ಐಪಿಸಿ) ಕೊಲೆ, ಕೊಲೆಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಬಂಧಿತನಾಗಿದ್ದ ಅಪರಾಧಿ ಮಹೇಶ್ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಮೀನಾಕುಮಾರಿ ಎಸ್ ರಾಜವಂಶಿ ವಾದ ಮಂಡಿಸಿದ್ದರು. ನ್ಯಾಯಧೀಶೆ ಗೀತಾ ಕೆ ಬಿ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದ್ದಾರೆ.

ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದೋಷಿಯೆಂದು ತೀರ್ಪು ನೀಡಿದ್ದು, ಅಪರಾಧಿಗೆ ಒಟ್ಟು ₹3.50 ಲಕ್ಷ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ ಕಠಿಣ ಕಾರಾಗೃಹ ಶಿಕ್ಷೆ, ವಸೂಲಿಯಾದ ದಂಡ ಮೊತ್ತದಲ್ಲಿ ಹತ್ಯೆಯಾದ ವಿದ್ಯಾರ್ಥಿನಿ ಗೌತಮಿ ಕುಟುಂಬಕ್ಕೆ ₹2 ಲಕ್ಷ ಹಾಗೂ ಗುಂಡೇಟು ತಿಂದಿದ್ದ ಶಿರೀಷಾಳಿಗೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ₹2 ಲಕ್ಷ ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

Advertisements

ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ಪಿಯು ಕಾಲೇಜಿನಲ್ಲಿ ಮಹೇಶ್‌ ಎಂಬಾತ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ. ಕಾಲೇಜು ಆವರಣದಲ್ಲಿರುವ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿಯೂ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಗುಂಡೇಟು ತಿಂದಿದ್ದ ದ್ವಿತೀಯ ಪಿಯು ಗೌತಮಿ ಹಾಗೂ ಪ್ರಥಮ ಪಿಯು ಓದುತ್ತಿದ್ದ ಶಿರೀಷಾ ಈ ಹಾಸ್ಟೆಲ್​ನಲ್ಲಿ ತಂಗಿದ್ದರು. 2015ರ ಮಾರ್ಚ್ 31ರಂದು ರಾತ್ರಿ 10ರ ಸುಮಾರಿಗೆ ಹಾಸ್ಟೆಲ್​ಗೆ ನುಗ್ಗಿದ ಮಹೇಶ್, ಪಿಸ್ತೂಲ್​ನಿಂದ ಗೌತಮಿ ತಲೆಗೆ ಹಾಗೂ ಶಿರಿಷಾ ಮುಖದ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ.

ದುರ್ಘಟನೆಯಲ್ಲಿ ಗೌತಮಿ ಸಾವನ್ನಪ್ಪಿದ್ದರೆ, ಶಿರೀಷಾ ಗಂಭೀರವಾಗಿ ಗಾಯಗೊಂಡಿದ್ದಳು. ಕೊಲೆ-ಕೊಲೆಯತ್ನ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಕಾಡುಗೋಡಿ ಠಾಣೆಯ ಇನ್‌ಸ್ಪೆಕ್ಟರ್​ ಎಂ ಎಂ ಪ್ರಶಾಂತ್(ಪ್ರಸ್ತುತ ಸಿಐಡಿ ಸೈಬರ್ ವಿಭಾಗದ ಡಿವೈಎಸ್‌ಪಿ) ಅವರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಹತ್ಯೆಗೆ ಕಾರಣ : “ಹಾಸ್ಟೆಲ್​ನಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುವಾಗ ಮಹೇಶ್ ಅಕ್ರಮವಾಗಿ ವಿದ್ಯಾರ್ಥಿನಿಯರ ವಸತಿನಿಲಯದ ಮುಂದೆ ಓಡಾಡುತ್ತಿದ್ದ. ಇದಕ್ಕೆ ಗೌತಮಿ ಆಕ್ಷೇಪಿಸಿ ಬೈದು ವಾಪಸ್ ಕಳುಹಿಸಿದ್ದರು. ಅಲ್ಲದೇ ಕೃತ್ಯ ಎಸಗುವ ಒಂದು ತಿಂಗಳ ಹಿಂದೆ ಸಿಇಟಿ ಪರೀಕ್ಷೆಗಾಗಿ ಗೌತಮಿ ಕಾಲೇಜು ಆವರಣದಲ್ಲಿ ಅರ್ಜಿ ಭರ್ತಿ ಮಾಡುವಾಗ ಅಪರಾಧಿ ಅರ್ಜಿ ಭರ್ತಿ ಮಾಡಿಕೊಡಲೇ ಎಂದು ಕೇಳಿದ್ದ. ಇದಕ್ಕೆ ಗೌತಮಿಯು ನೀನು ಕಾಲೇಜು ಅಟೆಂಡರ್ ಆಗಿದ್ದು, ನೀನೇನು ಅರ್ಜಿ ಭರ್ತಿ ಮಾಡಿಕೊಡುತ್ತೀಯಾ? ನಿನ್ನ ಕೆಲಸ ನೋಡು ಎಂದು ಹೇಳಿದ್ದಳು. ಎರಡು ಬಾರಿ ತನ್ನನ್ನು ಹೀಯಾಳಿಸಿರುವುದಾಗಿ ಭಾವಿಸಿದ ಆರೋಪಿ ಸಂಚು ರೂಪಿಸಿ ತನ್ನ ಬಳಿಯಿದ್ದ ಪಿಸ್ತೂಲ್​ನಿಂದ ಶೂಟ್ ಮಾಡಿ ಹತ್ಯೆ ಮಾಡಿರುವುದು ವಿಚಾರಣೆಯಲ್ಲಿ ತಿಳಿದುಬಂದಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಜನರಿಗೆ ವಿಜ್ಞಾನದ ಆವಿಷ್ಕಾರ ಬೇಕು ಆದರೆ, ವೈಜ್ಞಾನಿಕ ಚಿಂತನೆ ಬೇಡವಾಗಿದೆ: ಪ್ರೊ. ನರೇಂದ್ರ ನಾಯಕ್

ದ್ವಿತೀಯ ಪಿಯುಸಿವರೆಗೂ ವ್ಯಾಸಂಗ ಮಾಡಿದ್ದ ಮಹೇಶ್, ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಪ್ರವೃತ್ತಿ ಬೆಳೆಸಿಕೊಂಡಿದ್ದ. ಖಾಸಗಿ ಆಂಗ್ಲ ಪತ್ರಿಕೆಯೊಂದರಲ್ಲಿ ದೆಹಲಿ ಪೊಲೀಸರು ಬಿಹಾರದಲ್ಲಿ ನಡೆಯುತ್ತಿದ್ದ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಜಾಲದಲ್ಲಿ ತೊಡಗಿದ್ದ ಆರೋಪಿಗಳ ಬಂಧನದ ಬಗ್ಗೆ ಸುದ್ದಿ ಓದಿ, ಪಿಸ್ತೂಲ್ ಖರೀದಿ ವ್ಯಾಮೋಹ ಬೆಳೆಸಿಕೊಂಡಿದ್ದ. ಪಿಸ್ತೂಲ್ ಖರೀದಿಗಾಗಿಯೇ ಬೆಂಗಳೂರಿನಿಂದ ಬಿಹಾರದ ಮುನ್ಗರ್ ಎಂಬ ಪ್ರದೇಶಕ್ಕೆ ತೆರಳಿದ್ದ. ಅಕ್ರಮ ಪಿಸ್ತೂಲ್ ಮಾರಾಟಗಾರರನ್ನು ಸಂಪರ್ಕಿಸಿ ₹15,000ದ ಪಿಸ್ತೂಲ್ ಖರೀದಿಸಿ ನಗರಕ್ಕೆ ವಾಪಸ್ ಆಗಿದ್ದ. ಕಾಲೇಜಿನಲ್ಲಿ ವಿದ್ಯಾರ್ಥಿನಿಯು ಎರಡು ಬಾರಿ ಅವಮಾನ ಮಾಡಿರುವುದನ್ನು ಸಹಿಸದೇ ಸಂಚು ರೂಪಿಸಿ ಪಿಸ್ತೂಲ್​ನಿಂದ ಗುಂಡು ಹಾರಿಸಿ ಸಾಯಿಸಿದ್ದ” ಎಂದು ಪೊಲೀಸರು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X