ಶಕ್ತಿ ದೇವತೆಗಳ ಮುಂದೆ ಪ್ರಾಣಿ ಬಲಿ ಮಾಡಿ, ಅದರ ರಕ್ತವನ್ನು ಮೈಸೂರಿನ ಆರ್ಟಿಐ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗಳಿಗೆ ಅರ್ಪಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಶ್ರೀರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ನಲ್ಲಿ ಈ ಘಟನೆ ಸೆರೆಯಾಗಿದೆ. ಇತ್ತೀಚೆಗೆ ಮಸಾಜ್ ಪರ್ಲಾರ್ ಒಂದಕ್ಕೆ ಅಕ್ರಮವಾಗಿ ನುಗಿ ದಾಂಧಲೆ ನಡೆಸಿದ್ದ ಆರೋಪದ ಮೇಲೆ ಪ್ರಸಾದ್ ಅತ್ತಾವರ್ ಬಂಧನವಾಗಿತ್ತು. ಆ ವೇಳೆ ಪೊಲೀಸರು ಬಂಧಿತ ಆರೋಪಿಯ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದರು. ಮೋಬೈಲ್ ಪರಿಶೀಲನೆ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ರಕ್ತದ ಅಭಿಷೇಕ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಮಡದಿಗೆ ಹಿನ್ನಡೆಯಾಗಿ, ಸ್ನೇಹಮಯಿ ಕೃಷ್ಣನಿಗೆ ಹೋರಾಟದಲ್ಲಿ ಬಲ ತುಂಬುವ ಉದ್ದೇಶದಿಂದ ಈ ಕೃತ್ಯ ಮಾಡಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಈ ಸಂಬಂದ ಪ್ರಸಾದ್ ಅತ್ತಾವರ್ ಮತ್ತು ಅನಂತ್ ಭಟ್ ವಿರುದ್ಧ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಮತ್ತೋಮದು ಎಫ್ಐಆರ್ ದಾಖಲಾಗಿದೆ. ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಫೋಟೋಗೆ ರಕ್ತಾಭಿಷೇಕ ಮಾಡುತ್ತಿರುವ ವಿಡಿಯೋ ಪೊಲೀಸರ ವಶದಲ್ಲಿದೆ.

ಈ ಸುದ್ದಿ ಓದಿದ್ದೀರಾ? ಚೆಕ್ ಬೌನ್ಸ್ | ಸ್ನೇಹಮಯಿ ಕೃಷ್ಣ ಮೋಸ ಸಾಬೀತು, ಕಾಂಗ್ರೆಸ್ ನಾಯಕರು ಹೇಳುವುದೇನು?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಅಕ್ರಮ ಬಯಲಿಗೆಳೆದು, ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ಹಲವು ರಾಜಕಾರಣಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಈಗ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿದ್ದಾರೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಮೈಸೂರಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.