ಚಿಂತಾಮಣಿ ತಾಲೂಕಿನ ಮುರುಗಮಲ್ಲ ಹೋಬಳಿ ಪೆದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಯರ್ರಪ್ಪ ಶುಕ್ರವಾರ ಅವಿರೋಧ ಆಯ್ಕೆಯಾದರು.
ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಚುನಾವಣಾಧಿಕಾರಿ ಸುರೇಶ್ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಬೆಂಬಲಿತ ಅಭ್ಯರ್ಥಿ ಯರ್ರಪ್ಪ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಯರ್ರಪ್ಪ ರೆಡ್ಡಿ, ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪಂಚಾಯತಿಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಜಾತಿ ದೌರ್ಜನ್ಯ ಪ್ರಕರಣ: ಶಿಕ್ಷೆಯ ಪ್ರಮಾಣ ಕುಸಿತ; ದಲಿತ ಕಳಕಳಿಯ ವಕೀಲರ ನೇಮಕವಾಗಲಿ
ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ನರಸಿಂಹ ಮೂರ್ತಿ, ಸದಸ್ಯರಾದ ಜೈರಾಮ್ ರೆಡ್ಡಿ, ಗೋಪಮ್ಮ, ಗಾಯಿತ್ರಮ್ಮ, ಟಿ ಕೆ ಪ್ರಮೀಳಾ, ಶ್ವೇತ, ರತ್ನಮ್ಮ, ಸುಭದ್ರಮ್ಮ, ರತ್ನಮ್ಮ, ಭಾಸ್ಕರ್, ಅಭಿಲಾಷ್ ಮತ್ತು ಮುಖಂಡರಾದ ಗಂಡ್ರಗಾನಹಳ್ಳಿ ಶ್ರೀರಾಮ್ ರೆಡ್ಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ್ ರೆಡ್ಡಿ , ಪೆದ್ದೂರ್ ರಮೇಶ್, ಸೋಮಶೇಖರ್ ರೆಡ್ಡಿ, ನಲಪ್ ರೆಡ್ಡಿ, ಶಿವಶಂಕರೆಡ್ಡಿ, ಪಟೇಲ್ ಶ್ರೀರಾಮ್ ರೆಡ್ಡಿ, ಟಿ.ರಾಮಕೃಷ್ಣ ರೆಡ್ಡಿ, ವೀರನಾರಾಯಣಗೌಡ, ಜಿಎನ್ ನಾಗರಾಜ್ ರೆಡ್ಡಿ, ಬಿ ಎನ್ ಶ್ರೀ ರಾಮರೆಡ್ಡಿ, ಪುರುಷೋತ್ತಮ್ ರೆಡ್ಡಿ, ಪಟೇಲ್ ಶ್ರೀನಿವಾಸ ರೆಡ್ಡಿ, ಬಾಬುರೆಡ್ಡಿ, ರಮೇಶ್, ಶಿವಾರೆಡ್ಡಿ, ಜನಾರ್ಧನ್ ರೆಡ್ಡಿ, ಮಣಿಗನಾಹಳ್ಳಿ ರಾಮು ಮೂರ್ತಿ, ವೆಂಕಟರಾಮರೆಡ್ಡಿ, ಪ್ರವೀಣ್ ಸೇರಿದಂತೆ ಮತ್ತಿತರರು ಇದ್ದರು.