ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆಬ್ರವರಿ 1) 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ 36 ಔಷಧಿಗಳಿಗೆ ಸುಂಕ ವಿನಾಯಿತಿಯನ್ನು ಘೋಷಿಸಿದ್ದಾರೆ.
ಕ್ಯಾನ್ಸರ್ ಹಾಗೂ ಇತರೆ ಅಪರೂಪದ ಕಾಯಿಲೆಗಳಿಗೆ ನೀಡುವ ಅಗತ್ಯ ಔಷಧಿಗಳಿಗೆ ಸುಂಕ ವಿನಾಯಿತಿಯನ್ನು ನೀಡಲಾಗುತ್ತದೆ ಎಂದು ಸಚಿವ ನಿರ್ಮಲಾ ಸೀತಾರಾಮ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಜೆಟ್ | ‘ಮಧ್ಯಮ ವರ್ಗ’ವೇ ಟಾರ್ಗೆಟ್: 12 ಲಕ್ಷದವರೆಗೆ ತೆರಿಗೆ ವಿನಾಯಿತಿ ಘೋಷಿಸಿದ ಕೇಂದ್ರ ಸರ್ಕಾರ
ಅಗತ್ಯ ಔಷಧಿಗಳು ಮಾತ್ರವಲ್ಲದೆ ಹಡಗುಗಳ ನಿರ್ಮಾಣಕ್ಕಾಗಿ ಆಮದು ಮಾಡಿಕೊಳ್ಳುವ ವಸ್ತುಗಳಿಗೂ ಕೂಡಾ ಈಗಾಗಲೇ ನೀಡಲಾಗಿರುವ ಸುಂಕ ವಿನಾಯಿತಿಯನ್ನು ಇನ್ನೂ ಹತ್ತು ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದು ಕೂಡಾ ವಿತ್ತ ಸಚಿವೆ ಹೇಳಿದ್ದಾರೆ.
ಇದರೊಂದಿಗೆ ಇಂಟರಾಕ್ಟಿವ್ ಫ್ಲಾಟ್ ಪ್ಯಾನೆಲ್ ಡಿಸ್‌ಪ್ಲೇ (interactive flat panel displays) ಸುಂಕವನ್ನು ದ್ವಿಗುಣಗೊಳಿಸಲಾಗುವುದು ಎಂದು ಸಚಿವೆ ಘೋಷಿಸಿದ್ದಾರೆ. ಈ ಮೂಲಕ ಸುಂಕವು ಶೇಕಡ 20ಕ್ಕೆ ಹೆಚ್ಚಾಗಲಿದೆ.
