ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಫೆ. 3 ಮತ್ತು 4ನೇಯ ತಾರೀಖಿಗೆ 17ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು, ಈ ಕುರಿತು ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು.
ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಸಾಹಿತಿ ಎಮ್ ಸಿ ಸಿದ್ದರಾಮಯ್ಯ ಮಾತನಾಡಿ, ಪ್ರಬಂಧ ಸಾಹಿತ್ಯದಲ್ಲಿ ಉತ್ತಮ ಕೊಡುಗೆಯನ್ನು ನೀಡಿರುವ ಎಸ್ ಆರ್ ಗುಂಜಾಳ’ರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಬಹಳಷ್ಟು ಖುಷಿತಂದಿದೆ. ಸಾಹಿತ್ಯ ಪರಿಷತ್ತು ಕನ್ನಡದ ಸಾಕ್ಷಿಪ್ರಜ್ಞೆಯಾಗಿ ಬೆಳೆದಿದೆ. ಸಾಹಿತ್ಯ ಕ್ಷೇತ್ರವು ಸ್ವಾಯತ್ತತೆ ಕಾಪಾಡಿಕೊಂಡಷ್ಟು ದೇಶದ ಹೆಚ್ಚು ಸಾಧ್ಯ. ಈ ಸಮ್ಮೇಳನದಲ್ಲಿ ಬಹುತೇಕವಾಗಿ ಎಲ್ಲರನ್ನೂ ಒಳಗೊಂಡಿದ್ದಾರೆ. ಎಲ್ಲಾ ರೀತಿಯ ವಿಷಯಗಳನ್ನು ಚರ್ಚೆ ಮತ್ತು ಸಂವಾದಕ್ಕೆ ತೆಗೆದುಕೊಂಡಿದ್ದಾರೆ. ವಿಶೇಷವಾಗಿ ಬಸವಣ್ಣ ಸಾಂಸ್ಕೃತಿಕ ನಾಯಕ ಎನ್ನುವ ವಿಚಾರವನ್ನು ಅಳವಡಿಸಿದ್ದಾರೆ ಎಂದು ಸಂತಸಪಟ್ಟರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗರಾಜ್ ಅಂಗಡಿ ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕಾಗಿ 5 ಲಕ್ಷ ರೂ. ಕೇಂದ್ರ ಪರಿಷತ್ತು ನೀಡುತ್ತಿದೆ. ನಾವು ಜನರಿಂದ ಯಾವುದೇ ಹಣವನ್ನು ಸಂಗ್ರಹಿಸಿಲ್ಲ. ಮಹಾನಗರ ಪಾಲಿಕೆಯಿಂದ 1 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ. ಸಮ್ಮೇಳನಕ್ಕೆ ಆಹ್ವಾನಿಸುವುದರಲ್ಲಿ ನಾವು ಯಾರನ್ನೂ ಕೈಬಿಟ್ಟಿಲ್ಲ. ಎಲ್ಲರನ್ನೂ ಒಳಗೊಂಡು ಕಾರ್ಯಕ್ರಮವನ್ನು ರೂಪಿಸಲಾಗಿದೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಲಾಗಿದೆ ಎಂದರು.
ಈ ವರದಿ ಓದಿದ್ದೀರಾ? ಹುಬ್ಬಳ್ಳಿ | ಅಕ್ರಮ ಗಾಂಜಾ ಮಾರಾಟ : ನಾಲ್ವರ ಬಂಧನ
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ, ಶಂಕರ್ ಹಲಗತ್ತಿ, ಸಹ ಕಾರ್ಯದರ್ಶಿ ಶಂಕರ್ ಕುಂಬಿ ಮತ್ತು ಇನ್ನಿತರರು ವೇದಿಕೆ ಮೇಲಿದ್ದರು.