ಕಾರ್ಯಕ್ರಮವೊಂದರಲ್ಲಿ ಹಿರಿಯ ಗಾಯಕ ಉದಿತ್ ನಾರಾಯಣ್ ಅವರು ಮಹಿಳಾ ಅಭಿಮಾನಿಗಳ ತುಟಿಗೆ ಮುತ್ತಿಟ್ಟಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಟೀಕೆ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರು ಗಾಯಕ ಉದಿತ್ ನಾರಾಯಣ್ ಈ ಹಿಂದೆ ಅಲ್ಕಾ ಯಾಗ್ನಿಕ್ ಮತ್ತು ಶ್ರೇಯಾ ಘೋಷಾಲ್ ಅವರಂತಹ ಮಹಿಳಾ ಗಾಯಕಿಯರ ಕೆನ್ನೆಗೆ ಮುತ್ತಿಟ್ಟಿದ್ದ ಸಂದರ್ಭದ ವಿಡಿಯೋಗಳನ್ನು ಕೂಡಾ ಹಂಚಿಕೊಂಡಿದ್ದಾರೆ. ಹಾಗೆಯೇ ಹಿರಿಯ ಗಾಯಕರನ್ನು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಗಾಯಕ ಟಿಎಂ ಕೃಷ್ಣಗೆ ‘ಎಂಎಸ್ ಸುಬ್ಬುಲಕ್ಷ್ಮಿ’ ಪ್ರಶಸ್ತಿ ನೀಡದಂತೆ ಮದ್ರಾಸ್ ಹೈಕೋರ್ಟ್ ನಿರ್ಬಂಧ
ವಿಡಿಯೋಗಳಲ್ಲಿ ಮಹಿಳಾ ಅಭಿಮಾನಿ ಸೆಲ್ಫಿ ತೆಗೆದ ಬಳಿಕ ಗಾಯಕ ಆಕೆಯ ಕೆನ್ನೆಗೆ ಮುತ್ತಿಟ್ಟಿರುವುದು ಕಾಣಬುದು. ಅದಾದ ಬಳಿಕ ಹಲವು ಮಹಿಳಾ ಅಭಿಮಾನಿಗಳು ಸೆಲ್ಫಿ ತೆಗೆಯುವಾಗ ಕೆನ್ನೆಗೆ ಮುತ್ತಿಟ್ಟಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನೊಂದು ಯುವತಿಯ ತಲೆ ಸವರಿ ಆಕೆಯ ತುಟಿಗೆ ಗಾಯಕ ಮುತ್ತಿಟ್ಟಿದ್ದು, ಯುವತಿ ಆಶ್ಚರ್ಯಚಕಿತಳಾಗಿರುವುದು ವಿಡಿಯೋದಲ್ಲಿ ಕಾಣಬಹುದು.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉದಿತ್ ನಾರಾಯಣ್ ಅವರು ಈ ಹಿಂದೆ ಒಪ್ಪಿಗೆ ಪಡೆಯದೆಯೇ ಗಾಯಕಿ ಅಲ್ಕಾ ಯಾಗ್ನಿಕ್ ಕೆನ್ನೆಗೆ ಮುತ್ತಿಟ್ಟ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಕೆಲವರು ಈ ವಿಡಿಯೋ ನೋಡಿ ಗಾಯಕನನ್ನು ಟೀಕಿಸಿದರೆ, ಇನ್ನೂ ಕೆಲವರು ಇದು ಎಐನಿಂದ ರಚಿತ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಉದಿತ್ ನಾರಾಯಣ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Renowned playback singer #UditNarayan found himself in a soup after his video from his concert went viral on social media.
— Hate Detector 🔍 (@HateDetectors) February 1, 2025
In a video, which surfaced like wildfire, singer Udit Narayan can be seen planting kisses on a bunch of female fans, who came forward to the stage to click… pic.twitter.com/UasLZyH8Nl
69 ವರ್ಷದ ಉದಿತ್ ನಾರಾಯಣ್ ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಗಾಯಕರಾಗಿದ್ದಾರೆ. ಇತರ ಭಾರತೀಯ ಭಾಷೆಗಳಲ್ಲಿಯೂ ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಉದಿತ್ ಅವರಿಗೆ, 2009ರಲ್ಲಿ ಪದ್ಮಶ್ರೀ ಮತ್ತು 2016ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.
