ಹುಮನಾಬಾದ್ ತಾಲ್ಲೂಕಿನಲ್ಲಿ ʼಕಾರ್ಯʼ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಮೂಢ ಸಂಪ್ರದಾಯ ಆಚರಣೆ ತಡೆಯುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಪದಾಧಿಕಾರಿಗಳು ಶುಕ್ರವಾರ ಹುಮನಾಬಾದ್ ತಹಸೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಸಂಘಟನೆಯ ತಾಲ್ಲೂಕಾಧ್ಯಕ್ಷ ಗಣಪತಿ ಅಷ್ಟೂರೆ ಮಾತನಾಡಿ, ʼತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮೂಢ ಸಂಪ್ರದಾಯ ಆಚರಣೆ ಮಾಡುವ ಮೂಲಕ ಪ್ರಾಣಿಗಳನ್ನು ಬಲಿ ಕೊಟ್ಟು ಮತ್ತೆ ಅನಿಷ್ಟ ಪದ್ಧತಿಗಳ ಅಸ್ತಿತ್ವಕ್ಕೆ ತರುತ್ತಿರುವುದು ಖಂಡನಿಯವಾಗಿದ್ದು, ಇವುಗಳ ಕಡಿವಾಣಕ್ಕೆ ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡು ಸಂಪೂರ್ಣ ಬಂದ್ ಮಾಡಿಸಬೇಕು. ಇಲ್ಲದಿದ್ದರೆ ತಾಲ್ಲೂಕು ಆಡಳಿತ ವಿರುದ್ಧ ರಸ್ತೆ ತಡೆದು ಉಗ್ರ ಹೋರಾಟ ನಡೆಸಲಾಗುವುದುʼ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಔರಾದ್ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಬಿ.ಎಂ.ಅಮರವಾಡಿ ನೇಮಕ
ಸಂಘಟನೆ ಜಿಲ್ಲಾಧ್ಯಕ್ಷ ವೈಜಿನಾಥ ಸಿಂಧೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಕುಮಾರ ಭೋಲಾ, ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಕಟ್ಟಿಮನಿ ಸೇರಿದಂತೆ ಪ್ರಮುಖರಾದ ಶಿವಕುಮಾರ ಸಾಗರ್, ಸಿದ್ದಾರ್ಥ ಜಾನವೀರ್, ಆನಂತ ಮಾಳಗೆ, ವಿಶಾಲ ಸಿಂಧನಕೇರಾ, ಗೌತಮ ಜಾನವೀರ್, ವಿಠಲ್ ಶಿವನಾಯಕ, ಸಿದ್ಧಾರ್ಥ ಡಾಂಗೆ, ರಾಹುಲ್ ಚಿಟಗುಪ್ಪಕರ್, ಅರ್ಜುನ್ ಡಾಂಗೆ, ಮನೋಜ ಜಾನವೀರ್, ಯುವರಾಜ ಐಹೊಳೆ, ಆಕಾಶ ಸಿಂಧೆ, ಗೌತಮ ಮೊಳಕೇರಾ, ಸಾಗರ ಬೋತಗಿಕ್, ರಾಹುಲ್ ಬೋತಗಿಕರ್, ಅಜಯ ವಳಖಿಂಡಿಕರ್, ಆದರ್ಶ ಅಷ್ಟೋರೆ, ದಶರಥ ದಂಡೆಕರ್ ಮತ್ತಿತರಿದ್ದರು.