ಕೇಂದ್ರ ಬಜೆಟ್ 2025 ಗುಂಡೇಟಿನ ಗಾಯಕ್ಕೆ ಸಣ್ಣ ಬ್ಯಾಂಡೇಜ್ ಹಾಕಿದ್ದಂತಿದೆ ಎಂದು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಜಾಗತಿಕವಾಗಿ ಅನಿಶ್ಚಿತತೆ ಇರುವಾಗ ದೇಶದಲ್ಲಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ನಾವು ಒಂದು ಮಾದರಿಯಾದ ಬದಲಾವಣೆ ತರಬೇಕಾದ ಅವಶ್ಯಕತೆಯಿದೆ. ಆದರೆ ಬಿಜೆಪಿ ಸರ್ಕಾರದ ಪರಿಕಲ್ಪನೆಗಳು ದಿವಾಳಿಯಾಗಿದೆ” ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ನೇತಾಜಿ ಸಾವಿನ ಬಗ್ಗೆ ಪೋಸ್ಟ್; ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲು
ಹಲವು ವಿಪಕ್ಷ ನಾಯಕರುಗಳು ಕೇಂದ್ರ ಬಜೆಟ್ ಅನ್ನು ಟೀಕಿಸಿದ್ದಾರೆ. “ಖಾಸಗಿ ಹೂಡಿಕೆ ಮಂದಗತಿ, ಜಿಎಸ್‌ಟಿ ಅವ್ಯವಸ್ಥೆ ಮೊದಲಾದವುಗಳು ಅನಾರೋಗ್ಯ ಪೀಡಿತ ಆರ್ಥಿಕತೆಗೆ ಪರಿಹಾರವಲ್ಲ” ಎಂದು ಹೇಳಿತ್ತು.
A band-aid for bullet wounds!
— Rahul Gandhi (@RahulGandhi) February 1, 2025
Amid global uncertainty, solving our economic crisis demanded a paradigm shift.
But this government is bankrupt of ideas.
ಹಾಗೆಯೇ, “ನರೇಂದ್ರ ಮೋದಿ ಸರ್ಕಾರವು ಎನ್‌ಡಿಎ ಮಿತ್ರ ನಿತೀಶ್ ಕುಮಾರ್ ಆಡಳಿತದಲ್ಲಿರುವ ಬಿಹಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವಂತೆ ಕಾಣುತ್ತಿದೆ. ಅದೇ ಮೈತ್ರಿಕೂಟದ ಮತ್ತೊಂದು ಆಧಾರಸ್ತಂಭವಾದ ಆಂಧ್ರಪ್ರದೇಶವನ್ನು ಕ್ರೂರವಾಗಿ ನಿರ್ಲಕ್ಷಿಸುತ್ತಿದೆ” ಎಂದು ಆರೋಪಿಸಿತ್ತು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, “ಆರ್ಥಿಕತೆಯು ನಾಲ್ಕು ಸಂಬಂಧಿತ ಬಿಕ್ಕಟ್ಟುಗಳಿಂದ ಬಳಲುತ್ತಿದೆ. ನಿಂತ ನೈಜ ವೇತನ, ಸಾಮೂಹಿಕ ಬಳಕೆಯಲ್ಲಿ ಕೊರತೆ, ಖಾಸಗಿ ಹೂಡಿಕೆಯ ದರದಲ್ಲಿ ಮಂದಗತಿ, ಸಂಕೀರ್ಣ ಜಿಎಸ್‌ಟಿ ವ್ಯವಸ್ಥೆ” ಎಂದು ಹೇಳಿದ್ದರು.
ಇದನ್ನು ಓದಿದ್ದೀರಾ? ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ
“ಈ ಕಾಯಿಲೆಗಳನ್ನು ಪರಿಹರಿಸಲು ಬಜೆಟ್ ಏನನ್ನೂ ಮಾಡಿಲ್ಲ. ಆದಾಯ ತೆರಿಗೆ ಪಾವತಿದಾರರಿಗೆ ಮಾತ್ರ ಪರಿಹಾರವಿದೆ. ಇದು ಆರ್ಥಿಕತೆಯ ಮೇಲೆ ನಿಜವಾದ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ” ಎಂದು ಅಭಿಪ್ರಾಯಿಸಿದ್ದಾರೆ.
2025-26ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಿದಾಗ ಬಿಹಾರವೇ ಹೆಚ್ಚು ಬಾರಿ ಪ್ರಸ್ತಾಪವಾಗಿದೆ. ಕೇಂದ್ರ ಸಚಿವೆ ಬಿಹಾರಕ್ಕೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಮಖಾನಾ ಮಂಡಳಿ ಸ್ಥಾಪನೆ, ಪಶ್ಚಿಮ ಕೋಸಿ ಕಾಲುವೆಗೆ ಆರ್ಥಿಕ ನೆರವು ಮತ್ತು ಐಐಟಿ ಪಾಟ್ನಾದ ಸಾಮರ್ಥ್ಯವನ್ನು ಹೆಚ್ಚಿಸಲು ಬೆಂಬಲ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಲಾಗಿದೆ. ಇತರೆ ರಾಜ್ಯಗಳನ್ನು ಕಡೆಗಣಿಸಿರುವುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
