(ಮುಂದುವರಿದ ಭಾಗ) ರಾಜಕಾರಣ ಪ್ರವೇಶ: ದಲಿತ ಚಳವಳಿ ಆರಂಭವಾದದ್ದೇ ಕಾಂಗ್ರೆಸ್ ವಿರೋಧದ ಮೂಲಕ. ದೇವನೂರ ಮಾಹಾದೇವ, ಬಿ. ಕೃಷ್ಣಪ್ಪ ಸೇರಿದಂತೆ ಬಹುತೇಕ ನಾವೆಲ್ಲ ಸಮಾಜವಾದಿ ಹಿನ್ನೆಲೆಯವರು. ರಾಮಮನೋಹರ ಲೋಹಿಯಾರಿಂದ ಪ್ರಭಾವಿತರಾದವರು. ನಂತರ ಅಂಬೇಡ್ಕರ್ ವಿಚಾರಧಾರೆಗೆ ಹೊರಳಿದ್ದವರು. ಸಿದ್ಧಲಿಂಗಯ್ಯ ಮಾರ್ಕ್ಸ್‌ವಾದಿ ಹಿನ್ನೆಲೆಯವರು. ಕೋಲಾರ ಮತ್ತು ರಾಯಚೂರಿನ ಕೆಲವರು ನಕ್ಸಲ್ ಚಳವಳಿಯಿಂದಲೂ ಪ್ರಭಾವಿತರಾದವರು. ಎಲ್ಲರೂ ಒಂದಲ್ಲ ಒಂದು ರೀತಿ ಕಾಂಗ್ರೆಸ್ ವಿರೋಧಿ ರಾಜಕೀಯ ಚಿಂತನೆಯವರು. ‘ದಸಂಸ’ವನ್ನು ರಾಜಕೀಯೇತರ ಸಾಂಸ್ಕೃತಿಕ ಸಂಘಟನೆ ಎಂದು ಘೋಷಿಸಿಕೊಂಡಿದ್ದರೂ ಅದರ ಮುಂಚೂಣಿ ನಾಯಕರೆಲ್ಲ ರಾಜಕೀಯ ಚಿಂತನೆಯ…

ಇಂದೂಧರ ಹೊನ್ನಾಪುರ
ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನರಾದ ಇಂದೂಧರ ಹೊನ್ನಾಪುರ ಅವರು ಕರ್ನಾಟಕ ದಲಿತ ಚಳವಳಿಯನ್ನು ಕಟ್ಟಿದವರಲ್ಲಿ ಒಬ್ಬರು. ದಲಿತ ಚಳವಳಿಯ ಭಾಗವಾಗಿದ್ದ 'ಪಂಚಮ' ಪತ್ರಿಕೆಯನ್ನು ಮುನ್ನಡೆಸಿದರು. 'ಪ್ರಜಾವಾಣಿ'ಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ 'ಸಂವಾದ' ಮಾಸಿಕದ ಸಂಪಾದಕರಾಗಿದ್ದಾರೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿವೆ.