ತನ್ನ ಪತ್ನಿಯ ತಂಗಿಯನ್ನೇ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲು 40,000 ರೂಪಾಯಿ ಸಾಲ ಮಾಡಿ ಇದಕ್ಕಾಗಿ ಇಬ್ಬರು ಗುತ್ತಿಗೆ ಹಂತಕರನ್ನು ನೇಮಿಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.
ಜನವರಿ 21 ರಂದು ಉತ್ತರ ಪ್ರದೇಶದ ಮೀರತ್‌ನ ನಾನು ಕಾಲುವೆ ಬಳಿ ಈ ಘಟನೆ ನಡೆದಿದ್ದು, ಪೊಲೀಸರ ಪ್ರಕಾರ, ಸಂತ್ರಸ್ತೆಯನ್ನು ಕತ್ತು ಹಿಸುಕಿ ಸಾಯಿಸುವ ಮೊದಲು ಆಕೆಯ ಅಕ್ಕನ ಗಂಡ ಮತ್ತು ಇತರ ಇಬ್ಬರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಆಶಿಶ್ ಎಂಬಾತ ತನ್ನ ಪತ್ನಿಯ ತಂಗಿಯೊಂದಿಗೆ ಸಂಬಂಧ ಹೊಂದಿದ್ದ. ಆಕೆ ತನ್ನನ್ನು ಬೆದರಿಕೆ ಮಾಡುತ್ತಿದ್ದಳು ಎಂದು ಆರೋಪಿಸಿ ಕೊಲೆಗೆ ಯೋಜನೆ ರೂಪಿಸಿದ್ದ. ಆಸ್ಪತ್ರೆಯಲ್ಲಿ ಕೆಲಸಗಾರರಾಗಿದ್ದ ಶುಭಂ ಮತ್ತು ಇನ್ನೊಬ್ಬ ಸಹವರ್ತಿ ದೀಪಕ್ ಎನ್ನುವ ಇಬ್ಬರ ಸಹಾಯ ಕೋರಿದ್ದ. 30,000 ರೂ.ಪಡೆದು ಆಕೆಯನ್ನು ಕೊಲೆ ಮಾಡಲು ಒಪ್ಪಿಕೊಂಡಿದ್ದರು ಎಂದು ಮುಜಾಫರ್‌ನಗರ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಬನ್ಸಾಲ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸುಳ್ಳು ಜಾಹೀರಾತು | ಪತಂಜಲಿ ರಾಮದೇವ್ ವಿರುದ್ಧ ಬಂಧನ ವಾರೆಂಟ್ ಜಾರಿ
ಪ್ರಮುಖ ಆರೋಪಿ ಆಶಿಶ್ 40,000 ರೂಪಾಯಿ ಸಾಲವನ್ನು ಮಾಡಿ, ಮುಂಗಡವಾಗಿ 10,000 ರೂ. ಮತ್ತು ಕೊಲೆಯ ನಂತರ
20,000 ರೂಪಾಯಿಗಳನ್ನು ಪಾವತಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಆಶಿಶ್, ಶುಭಂ ಮತ್ತು ದೀಪಕ್ ಮಹಿಳೆಯನ್ನು ಸ್ಕೂಟರ್‌ನಲ್ಲಿ ಕಾಲುವೆ ಬಳಿ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿ, ಸ್ಕಾರ್ಫ್‌ನಿಂದ ಕತ್ತು ಹಿಸುಕಿ ಹತ್ಯೆ ಮಾಡಿ ಮೃತ ದೇಹವನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದಾರೆ.
ಸಂತ್ರಸ್ತೆಯ ಕುಟುಂಬ ಜನವರಿ 23 ರಂದು ಪುತ್ರಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದು, ತನಿಖೆಯ ಸಮಯದಲ್ಲಿ, ಆಶಿಶ್,
ಶುಭಂ ಮತ್ತು ದೀಪಕ್ ಅವರೊಂದಿಗೆ ಆಕೆ ಕೊನೆಯದಾಗಿ ಕಾಣಿಸಿಕೊಂಡಿದ್ದಾಳೆ ಎಂದು ಪೊಲೀಸರು ಕಂಡುಕೊಂಡರು.
ಅಧಿಕಾರಿಗಳು ಆಶಿಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದ ಇತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಫೋರೆನ್ಸಿಕ್ ತಂಡಗಳು ಯುವತಿಯ ಅವಶೇಷಗಳು, ಸುಟ್ಟ ಬಟ್ಟೆಗಳು, ಉಂಗುರ ಮತ್ತು ಇತರ ವಸ್ತುಗಳನ್ನು ಸ್ಥಳದಿಂದ
ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಬಳಸಿದ ಮತ್ತು ಬಳಸದ ಕಾಂಡೋಮ್ ಸಹ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
