ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ಬಡಗರಕೇರಿಯಲ್ಲಿ ಹುಲಿಯನ್ನು ಸರೆೆ ಹಿಡಿಯಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿಯ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗರಕೇರಿ ಗ್ರಾಮದಲ್ಲಿ ರೈತರೊಬ್ಬರ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ್ದು, 12 ಆಡುಗಳು ಮತ್ತು 7 ಕರುಗಳು ಮೃತಪಟ್ಟಿವೆ. ಅಲ್ಲದೆ ರಾತ್ರಿ ವೇಳೆ ಬಡಗರಕೇರಿ ಗ್ರಾಮದ ದಿನೇಶ್ ಎಂಬುವವರ ಮೇಕೆಗಳ ಮೇಲೆಯೂ ದಾಳಿ ಮಾಡಿದೆ.
ಹುಲಿ ಜಾನುವಾರುಗಳನ್ನು ಬೇಟೆಯಾಡಿದ್ದು, ಬಳಿಕ ಎಳೆದು ತಂದು ತೋಟದ ಹಾದಿಯಲ್ಲಿ ಬಿಟ್ಟಿರುವುದು ಕಂಡುಬಂದಿದೆ. ಹುಲಿ ದಾಳಿಯಿಂದ ಆಗಿರುವ ನಷ್ಟಕ್ಕೆ ಪರಿಹಾರವನ್ನು ವಿಸ್ತರಿಸಬೇಕು” ಎಂದು ದಿನೇಶ್ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದರು.
ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹುಲಿಯನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ಪ್ರಾರಂಭಿಸಿದರು.
“ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮ್ಮತ್ತಿರ ರಾಜೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಲಿಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಲಾರಿ ಹಾಯ್ದು ಬಾಲಕಿ ಸಾವು
“ಬಡಗರಕೇರಿ ಗ್ರಾಮದಲ್ಲಿ ಕಾಡು ಆನೆಗಳೂ ಕೂಡ ಕಾಣಿಸಿಕೊಂಡಿದ್ದು, ಶನಿವಾರ ಮುಖ್ಯ ರಸ್ತೆಯಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿವೆ. ಆನೆಗಳು ಮೃತ್ಯುಂಜಯ ದೇವಸ್ಥಾನದ ಬಳಿ ಬಿರುನಾಣಿ ಮುಖ್ಯರಸ್ತೆಯ ಕಡೆಗೆ ಚಲಿಸಿದ್ದು, ದಾರಿಯುದ್ದಕ್ಕೂ ಕಾಫಿ ತೋಟಗಳಿಗೆ ಹಾನಿಮಾಡಿವೆ. ನಂತರ ಆನೆಗಳು ತೇರಾಳು ಗ್ರಾಮದ ಕಡೆಗೆ ತೆರಳಿದವು” ಎಂದು ಹೇಳಿದರು.