ತುಮಕೂರು | ಸೈಬರ್ ಸುರಕ್ಷತೆಗೆ ಪರಿಣಾಮಕಾರಿ ತಾಂತ್ರಿಕ ವ್ಯವಸ್ಥೆ ಬೇಕು : ಬಿ. ವಿ. ಅಶ್ವಿಜಾ

Date:

Advertisements

 ಬದಲಾಗುತ್ತಿರುವ ತಾಂತ್ರಿಕ ವ್ಯವಸ್ಥೆಗಳು ಮಾನವನಿಗೆ ಸಹಕಾರಿ, ಸಹಾಯವು  ಅಲ್ಲದೆ ಆರ್ಥಿಕವಾಗಿಯೂ ಅಪಾಯ ತಂದೊಡ್ಡುವಂತಹ  ವ್ಯವಸ್ಥೆಗೆ ದಾರಿ ಮಾಡಿ ಕೊಟ್ಟಿದ್ದು,  ಸಮಾಜದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಸುರಕ್ಷತೆಗೆ ಸುಧಾರಿತ ಮತ್ತು ಪರಿಣಾಮಕಾರಿಯಾದಂತಹ ತಾಂತ್ರಿಕ ವ್ಯವಸ್ಥೆ ರೂಪುಗೊಳ್ಳಬೇಕಾಗಿದೆ  ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ. ವಿ. ಅಶ್ವಿಜಾ  ತಿಳಿಸಿದರು.

ತುಮಕೂರು ನಗರ ಹೊರವಾಲಯದ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಂದು ವಾರಗಳ ಕಾಲ ಏರ್ಪಡಿಸಲಾಗಿದ್ದ ‘ಇ ಆಡಳಿತದ ಸುರಕ್ಷತೆ ಮತ್ತು ಸೈಬರ್ ಕ್ರೈಂ ವಸ್ತುಸ್ಥಿತಿ ಆಧುನಿಕ ಕೃತಕ ಬುದ್ಧಿಮತ್ತೆ ವಿಷಯ ಕುರಿತಾದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,  ಪ್ರಸ್ತುತ  ತಾಂತ್ರಿಕ ವ್ಯವಸ್ಥೆಗಳ ಅಡಿಯಲ್ಲಿ ತುಮಕೂರು ಮಹಾನಗರ ಪಾಲಿಕೆಯ ತುಮಕೂರು ನಗರ ಟ್ರಾಪಿಕ್ ಜಾಮ್ ಸಮಸ್ಯೆ, ಇತರೆ ವಿಷಯಗಳಿಂದ ಸುರಕ್ಷಿತವಾಗಿ ರಕ್ಷಣೆಯಲ್ಲಿದೆ ಎಂದರು.

1000992619

ಇಡೀ ರಾಜ್ಯದಲ್ಲಿ ತುಮಕೂರು ನಗರ ಅತಿ ವೇಗವಾಗಿ ಬೆಳೆಯುತ್ತಿದೆ. ಅನೇಕ ತಂತ್ರಜ್ಞಾನದ ವ್ಯವಸ್ಥೆಗಳು ಇಲ್ಲಿಗೆ ಅವಶ್ಯಕವಾಗಿದ್ದು ತುಮಕೂರು ನಗರ ಸ್ಮಾರ್ಟ್ ಸಿಟಿಯಾಗಿ ಅನೇಕ ಬದಲಾವಣೆಗಳನ್ನು ಕಂಡಿದೆ. 100 ಸ್ಮಾರ್ಟ್ ಸಿಟಿಗಳಲ್ಲಿ ತುಮಕೂರು ಐದನೇ ಸ್ಥಾನವನ್ನು ಪಡೆದು ಶಿಕ್ಷಣ, ವಸತಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿ ಬೈಜಿಕರಣ ವ್ಯವಸ್ಥೆಯಡಿ  ವಿಲೀನಗೊಳಿಸಲಾಗಿದ್ದು ವಿಶೇಷವಾಗಿ ತುಮಕೂರು ನಗರವನ್ನ ಕಮಾಂಡ್ ಸೆಂಟರ್ ನಲ್ಲಿ ನಿರ್ವಹಿಸುವ ವ್ಯವಸ್ಥೆ ಹೊಂದಿ ಆಯಾ ಕಟ್ಟಿನ ರಸ್ತೆ ಪ್ರದೇಶ, ವೃತ್ತಗಳು ಸೇರಿದಂತೆ ಇತರೆ ವ್ಯವಸ್ಥೆಗಳಿಂದ ತಾಂತ್ರಿಕವಾಗಿ ಕಣ್ಗಾವಲಿನಲ್ಲಿ ಕಾಯ್ದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

Advertisements

ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನದಿಂದಾಗಿ ಸೈಬರ್ ಕ್ರೈಂ ನಂತಹ ಅಪಾಯಗಳು ಜನಸಾಮಾನ್ಯರನ್ನು ಕಾಡುತ್ತಿದ್ದು, ತ್ವರಿತವಾಗಿ ಇದಕ್ಕೆ ಪರಿಣಾಮಕಾರಿಯಾದಂತಹ ಸುಧಾರಿತ ತಂತ್ರಜ್ಞಾನ ಅವಶ್ಯಕತೆಯಿದ್ದು ತಂತ್ರಜ್ಞರು ಇದಕ್ಕಾಗಿ ಹಲವಾರು ರೀತಿಯಲ್ಲಿ ಸಂಶೋಧನೆ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ,  ಅದೇ ರೀತಿಯಲ್ಲಿ ಸುಧಾರಿತ ತಾಂತ್ರಿಕ ವ್ಯವಸ್ಥೆಯಿಂದಾಗಿ ತುಮಕೂರು ನಗರವನ್ನು ಸುರಕ್ಷಿತ ನಗರ ವಾಗಿ ಮಾಡಲು ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

1000992620

ತುಮಕೂರು ನಗರವನ್ನು ಆಕರ್ಷಣೀಯ ಕ್ಷೇತ್ರವನ್ನಾಗಿ ಮಾರ್ಪಡಿಸಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರು ಅನೇಕ ರೀತಿಯ ಯೋಜನೆ ಮತ್ತು ಅನುದಾನಗಳನ್ನು ಕಲ್ಪಿಸಿದ್ದು ಅಮಾನಿ ಕೆರೆಯ ಐಲ್ಯಾಂಡ್ ಗೆ ಗಾಜಿನ ಸೇತುವೆ ನಿರ್ಮಾಣ, ಸುಸಜ್ಜಿತ ಅಧುನಿಕ ಶೈಲಿಯ ಖಾಸಗಿ ಬಸ್ ನಿಲ್ದಾಣ, ಸುಮಾರು ಮೂರು ಕೋಟಿಯಲ್ಲಿ  ತುಮಕೂರು ನಗರಕ್ಕೆ ಸುಸಜ್ಜಿತ ಚರಂಡಿ, ರಸ್ತೆ, ಯುಜಿಡಿ ಸಂಪರ್ಕ, ಪಾರ್ಕ್ ನಿರ್ಮಾಣ, ಅಕ್ಕ ತಂಗಿ ಕೆರೆಯಲ್ಲಿ ವಿಶೇಷ ಸಸ್ಯ ಕಾಶಿ ನಿರ್ಮಾಣ  ಸೇರಿದಂತೆ 10 ಹಲವು ಯೋಜನೆಗಳಿಂದ ತುಮಕೂರು ನಗರವನ್ನು ಬದಲಾವಣೆ ಮಾಡುತ್ತಿದ್ದು, ಅದೇ ರೀತಿಯಾಗಿ ಸಾರ್ವಜನಿಕರ ಸಂರಕ್ಷಣೆಗಾಗಿ ತಾಂತ್ರಿಕವಾಗಿ ಅನೇಕ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಸ್ತಾಕ್ಷ ಲ್ಯಾಬ್ ಪ್ರವೇಟ್ ಲಿಮಿಟೆಡ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಮಾತನಾಡಿ ತಾಂತ್ರಿಕತೆ ಬೆಳದಂತೆ ಅನೇಕ ಅಪಾಯಕಾರಿ ಸಮಸ್ಯೆಗಳು ಎದುರಾಗುತ್ತಿವೆ. ಹೊಸದಾಗಿ ಬಂದಿರುವ ಬೈಜಿಕ ತಂತ್ರಜ್ಞಾನದಿಂದಾಗಿ ಹ್ಯಾಕಿಂಗ್ ಸಮಸ್ಯೆ ಎದುರಾಗುತ್ತಿದ್ದು ಸಾರ್ವಜನಿಕರು ತಮ್ಮ ಸ್ಮಾರ್ಟ್ ಸಾಧನ ಸಲಕರಣೆಗಳನ್ನು ಸುರಕ್ಷಿತವಾಗಿಡಲು ಅನೇಕ ತಂತ್ರಜ್ಞಾನಗಳು ಬರುತ್ತಿದ್ದು, ಹ್ಯಾಕಿಂಗ್ ನಿಂದ ಮುಕ್ತಿ ಹೊಂದಬಹುದಾಗಿದೆ,  ಜನಸಾಮಾನ್ಯರಿಗೆ ಡಿಜಿಟಲ್ ಬಳಕೆ ಬಗ್ಗೆ ಹೆಚ್ಚು ಹೆಚ್ಚು ಜ್ಞಾನ ತಿಳಿಸಬೇಕಿದ್ದು ಇಂತಹ ಕಾರ್ಯಗಾರಗಳು ಚರ್ಚಾ ವಿಚಾರಗಳು ತುಂಬಾ ಅವಶ್ಯಕವಾಗಿದ್ದು ತಾಂತ್ರಿಕವಾಗಿ ಮುಂದೆ ಬರುವ ವಿದ್ಯಾರ್ಥಿಗಳು ಇದರ ಸಂಶೋಧನೆಗೆ ಮುಂದಾಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಸಂಜೀವ್ ಕುಮಾರ್,  ಕಂಪ್ಯೂಟರ್ ಸೈನ್ಸ್ ನ ಡಾ.ರೇಖಾ, ಅಸ್ತಾಕ್ಷ ಲ್ಯಾಬ್ ಲಿಮಿಟೆಡ್ ನ ಡಾ. ಗಿರೀಶ್, ವಾಸೀಮ್‌ವುದ್ದೀನ್, ರಾಜೇಶ್ ಎಚ್ ಎಮ್, ಸೇರಿದಂತೆ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ  ಬೋಧಕ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X