ಥಾಣೆ ಹತ್ಯೆ ಪ್ರಕರಣ | ಎಚ್‌ಐವಿ ಸೋಂಕಿತನಾಗಿದ್ದ ಹಂತಕ; ಮಹಿಳೆಯದು ಆತ್ಮಹತ್ಯೆ ಎಂದು ಹೇಳಿಕೆ!

Date:

Advertisements

ದೆಹಲಿಯ ಶ್ರದ್ದಾ ವಾಕರ್ ಹತ್ಯೆ ಪ್ರಕರಣದ ರೀತಿಯಲ್ಲಿಯೇ ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳೆಯೊಬ್ಬರನ್ನು ಬರ್ಬರವಾಗಿ ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡಿದ ಆರೋಪಿಯ ಬಗ್ಗೆ ಹಲವು ಆಘಾತಕಾರಿ ಮಾಹಿತಿ ಬೆಳಕಿಗೆ ಬರುತ್ತಿವೆ.

ಥಾಣೆ ಅಪಾರ್ಟ್‌ಮೆಂಟ್‌ನಲ್ಲಿ ಸರಸ್ವತಿ ವೈದ್ಯ ಅವರನ್ನು ಕೊಲೆ ಮಾಡಿದ ಆರೋಪಿ ಮನೋಜ್ ರಮೇಶ್ ಸಾನೆ(56)ಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ವಿಚಾರಣೆ ವೇಳೆ ತಾನು 2008ರಿಂದ ಎಚ್‌ಐವಿ-ಪಾಸಿಟಿವ್ ನಿಂದ ಬಳಲುತ್ತಿದ್ದು, ಅಂದಿನಿಂದ ತಾನು ಔಷಧಿ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ. ಈ ಹಿಂದೆ ಆತ ಅಪಘಾತಕ್ಕೆ ಒಳಗಾದಾಗ ಚಿಕಿತ್ಸೆಯ ಸಮಯದಲ್ಲಿ ಸೋಂಕಿತ ರಕ್ತವನ್ನು ಬಳಸಿದ್ದರಿಂದ ಎಚ್‌ಐವಿ ರೋಗಕ್ಕೆ ತುತ್ತಾಗಿದ್ದ. ಅಲ್ಲದೆ 32 ವರ್ಷದ ಸರಸ್ವತಿ ವೈದ್ಯಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರಲಿಲ್ಲ. ಅವಳು “ತನ್ನ ಮಗಳಂತೆ” ಎಂದು ಆರೋಪಿ ತಿಳಿಸಿದ್ದಾನೆ.

ಸರಸ್ವತಿ ವೈದ್ಯ ತುಂಬಾ ಅನುಮಾನಿಸುವ ಸ್ವಭಾವದವಳಾಗಿದ್ದಳು. ಸಾನೆ ತಡವಾಗಿ ಮನೆಗೆ ಹಿಂದಿರುಗಿದಾಗಲೆಲ್ಲಾ ವಿಶ್ವಾಸದ್ರೋಹ ಮಾಡುತ್ತಿದ್ದಾನೆ ಎಂದು ಶಂಕಿಸುತ್ತಿದ್ದಳು. ಆಕೆ 10 ನೇ ತರಗತಿಯ ಎಸ್‌ಎಸ್‌ಸಿ ಪರೀಕ್ಷೆಗೆ ಹಾಜರಾಗಲು ಯೋಜಿಸುತ್ತಿದ್ದಳು. ಹೀಗಾಗಿ ಸಾನೆ ಅವಳಿಗೆ ಗಣಿತ ಕಲಿಸುತ್ತಿದ್ದನು. ಏಳನೇ ಮಹಡಿಯ ಫ್ಲಾಟ್‌ನ ಗೋಡೆಯೊಂದರ ಮೇಲೆ ಗಣಿತದ ಸಮೀಕರಣಗಳನ್ನು ಬರೆದಿರುವ ಬೋರ್ಡ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

Advertisements

ಆರೋಪಿಯು ಸರಸ್ವತಿಯನ್ನು ಭೇಟಿಯಾದಾಗ ಆಕೆ ಪಡಿತರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆಯ ಬಳಿ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಸರ್ಟಿಫಿಕೇಟ್ ಇರುವುದು ಇದೀಗ ಬೆಳಕಿಗೆ ಬಂದಿದೆ. ಸರ್ಟಿಫಿಕೇಟ್ ಇದ್ದರೂ ಯೋಗ್ಯವಾದ ಕೆಲಸ ಸಿಗದ ಕಾರಣ ಸಾನೆ 10 ವರ್ಷಗಳಿಂದ ಪಿಡಿಎಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಮನೋಜ್ ಸಾನೆ ಆಕೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದು ತಾನು ಕೊಲೆ ಮಾಡಿಲ್ಲ ಎಂದು ಹೇಳಿದ್ದಾನೆ.

ಈ ಸುದ್ದಿ ಓದಿದ್ದೀರಾ? ಸಹಜೀವನ ಸಂಗಾತಿಯನ್ನು ತುಂಡುತುಂಡಾಗಿ ಕತ್ತರಿಸಿ ಕುಕ್ಕರಲ್ಲಿ ಬೇಯಿಸಿದ!

ಆರೋಪಿಯು ಕೆಲವು ದಿನಗಳ ಹಿಂದೆ ಸುಮಾರು ಸಮಯದಿಂದ ಮಲಗಿದ್ದಳು. ತುಂಬ ಹೊತ್ತು ಆಕೆ ಎದ್ದೇಳಲಿಲ್ಲ. ನಂತರ ತಾನು ಆಕೆಯ ನಾಡಿಮಿಡಿತವನ್ನು ಪರೀಕ್ಷಿಸಿದಾಗ ಅವಳು ಸತ್ತಿರುವುದನ್ನು ತಿಳಿದ ಬಳಿಕ ಪೊಲೀಸರ ಕ್ರಮಕ್ಕೆ ಹೆದರಿ ದೇಹವನ್ನು ಕಾಣದಂತೆ ಈ ರೀತಿ ಮಾಡಿರುವುದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

ಆರೋಪಿ ರಮೇಶ್ ಸಾನೆಯು ಸರಸ್ವತಿ ವೈದ್ಯಳ ದೇಹವನ್ನು ಮರ ಕತ್ತರಿಸುವ ಯಂತ್ರದಿಂದ ಸಣ್ಣ ಭಾಗಗಳಾಗಿ ಕತ್ತರಿಸಿ ಅದರ ಭಾಗಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಕುದಿಸಿ ಗ್ಯಾಸ್‌ನಲ್ಲಿ ಹುರಿದು ಅವುಗಳನ್ನು ಸುಲಭವಾಗಿ ವಿಲೇವಾರಿ ಮಾಡಿದ್ದಾನೆ. ಗುರುವಾರ ಪೊಲೀಸರು ಅಡುಗೆಮನೆಯಲ್ಲಿ ಮೂರು ಬಕೆಟ್‌ಗಳಲ್ಲಿ ರಕ್ತ ತುಂಬಿರುವುದನ್ನು ಪತ್ತೆ ಮಾಡಿದ್ದಾರೆ. ಬಕೆಟ್‌ಗಳಲ್ಲಿ ದೇಹದ ಸಣ್ಣ ತುಂಡುಗಳಿದ್ದವು ಎನ್ನಲಾಗಿದೆ.

ಅಡುಗೆ ಮನೆಯಿಂದ ಸಂಗ್ರಹಿಸಲಾದ ದೇಹದ ಭಾಗಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಸರ್ ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಯಂತ್ ಬಜ್ಬಲೆ ಹೇಳಿರುವುದಾಗಿ ಐಇ ವರದಿ ತಿಳಿಸಿದೆ.

ಪೊಲೀಸರು ವೈದ್ಯಕೀಯ ತಜ್ಞರ ಸಹಾಯವನ್ನು ಪಡೆಯುತ್ತಿದ್ದಾರೆ ಮತ್ತು ದೇಹದ ಯಾವ ಭಾಗಗಳು ಎಲ್ಲಿ ಕಾಣೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸ್ಥಳೀಯ ಪೊಲೀಸರು, ಸಾನೆಯನ್ನು ಥಾಣೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜೂನ್ 16 ರವರೆಗೆ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X