ಜೋಳದ ಬೆಳೆಗೆ ಬೆಂಕಿ ತಗುಲಿದ್ದು, 5 ಎಕರೆ ಜಮೀನಿನ ಬೆಳೆನಾಶವಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಸಿಂಗಡದಿನ್ನಿ ಗ್ರಾಮದ ಹೊರವಲಯದ ಜಮೀನಿನಲ್ಲಿ ನಡೆದಿದೆ.
ಶರಣಪ್ಪ ಶಾಖಾಪುರ ಮತ್ತು ಚನ್ನಪ್ಪ ಎಂಬುವವರಿಗೆ ಸೇರಿದ ಬೆಳೆ ನಾಶವಾಗಿರುವುದು ತಿಳಿದುಬಂದಿದೆ.
ಸದರಿ ಜಮೀನಿನ ಪಕ್ಕದ ಜಮೀನುಗಳಲ್ಲಿ ಕಟಾವಿನ ನಂತರ ಉಳಿದಿದ್ದ ಕಸವನ್ನು ತೆಗೆಯಲು ಬೆಂಕಿ ಹಚ್ಚಲಾಗಿತ್ತು. ಗಾಳಿಯಿದ್ದ ಕಾರಣ ಬೆಂಕಿಯ ಕಿಡಿ ಬೆಳೆಯಿದ್ದ ಜಮೀನಿನ ತಗುಲಿದ್ದು, ಬೆಳೆನಾಶವಾಗಿದೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಹಿರಿಯ ಪತ್ರಕರ್ತ ಸಿರಾಜ್ ಬಿಸರಳ್ಳಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
“5 ಎಕರೆ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಜೋಳದ ಬೆಳೆನಾಶದಿಂದ ₹2.85 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಜೋಳದ ಬೆಳೆಗೆ ಬೆಂಕಿ ತಗುಲಿ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು” ಎಂದು ರೈತರು ಆಗ್ರಹಿಸಿದ್ದಾರೆ.