ಬೆಳಗಾವಿ ನಗರದ ಬಿ.ಎಸ್.ಯಡಿಯೂರಪ್ಪ ಮಾರ್ಗದಲ್ಲಿ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ
ಸುಳೇಭಾವಿ ಗ್ರಾಮದ ಮಂಜುನಾಥ ವಿಠ್ಠಲ ಹೊಸಕೋಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಿಂಗಪ್ಪ ರಮೇಶ ಹೊಸಮನಿ ಎಂಬ ವ್ಯಕ್ತಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಲ್ಲಿನಿಂದ ಜಜ್ಜಿ ಪತ್ನಿಯ ಹತ್ಯೆಗೈದ ಪತಿ
ಬುಧವಾರ ಸಂತೆ ಹಿನ್ನೆಲೆಯಲ್ಲಿ ಶಹಾಪುರಕ್ಕೆ ಹೋಗಿ ನೇಯ್ದ ಸೀರೆಗಳನ್ನು ಕೊಟ್ಟು ಸಂಬಳ ತೆಗೆದುಕೊಂಡು ಬರುತ್ತಿದ್ದ ವೇಳೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಮಂಜುನಾಥ ಮೃತಪಟ್ಟಿದ್ದು, ಹೆಲ್ಮಟ್ ಧರಿಸಿದ್ದರೆ ಯುವಕ ಬದುಕುಳಿಯುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.