ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇ ಇಂಡಿ ವ್ಯಾಪ್ತಿಯ ಹೆಸ್ಕಾಂ ಲೈನ್ ಮ್ಯಾನ್ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಕೂಡಲೇ ಅವರನ್ನು ವರ್ಗಾವಣೆ ಮಾಡಿ, ಬೇರೆ ಲೈನ್ ಮ್ಯಾನ್ ನೇಮಕ ಮಾಡಬೇಕೆಂದು ಆಗ್ರಹಿಸಿ ರೈತ ಮುಖಂಡರು ಹೆಸ್ಕಾಂ ಎಇಇಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರಶಾಂತ ಲಾಳಸಂಗಿ ಮಾತನಾಡಿ, “ಹಿರೇ ಇಂಡಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೈನ್ ಮ್ಯಾನ್ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರು ಸಮಸ್ಯೆ ಕುರಿತು ಅವರಿಗೆ ಮೊಬೈಲ್ ಕರೆ ಮಾಡಿದರೆ ಕರೆ ಸ್ವೀರಿಸುವುದಿಲ್ಲ. ರೈತರ ಸಮಸ್ಯೆಗಳನ್ನು ಆಲಿಸುವುದಲ್ಲ. ವಿದ್ಯುತ್ ತಂತಿ ಕಡಿದು ಬಿದ್ದಿದ್ದರೂ ದುರಸ್ತಿ ಮಾಡುತ್ತಿಲ್ಲ. ಈ ಎಲ್ಲ ಆರೋಪಗಳಿರು ಕಾರಣ ಕೂಡಲೇ ಅವರನ್ನು ಬದಲಾವಣೆ ಮಾಡಬೇಕು. ಇಲ್ಲವಾದರೆ ಹೆಸ್ಕಾಂ ಕಚೇರಿ ಎದುರು ಧರಣಿ ಕುಳಿತುಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದರು.
ವಿಭಾಗದ ಅಧಿಕಾರಿ ಸಂಗಮೇಶ ಇಮ್ಮನದ್ ಮನವಿ ಸ್ವೀಕರಿಸಿ ಮಾತನಾಡಿ, “ತಮ್ಮ ಮನವಿಯನ್ನು ಎಇಇ ಸಾಹೇಬರ ಗಮನಕ್ಕೆ ತಂದು ಕೂಡಲೇ ಹಿರೇ ಇಂಡಿ ಭಾಗದ ಲೈನ್ ಮ್ಯಾನ್ ಅವರನ್ನು ಬದಲಾವಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಭರವಸೆ ನೀಡಿದರು.
ಇದನ್ನೂ ಓದಿ : ವಿಜಯಪುರ | ಬೇಸಿಗೆ ಬೇಗೆ ನೀಗಲು ಕೆರೆಗಳಿಗೆ ನೀರು: ಶಾಸಕ ಯಶವಂತರಾಯಗೌಡ
ಅಶೋಕ ಆಕಲಾದಿ, ಅನೀಲ ತಾಂಬೆ, ಶ್ರೀಮಂತ ತಾಂಬೆ, ಮಂಜು ದೇವರ, ದಶರಥ ಇಂಗಳೆ ಹಾಗೂ ಕಲ್ಲಪ್ಪ ಇದ್ದರು.