ಯುಜಿಸಿ ಕರಡು ನಿಯಮ ತಿರಸ್ಕರಿಸುವ ನಿರ್ಣಯ ರಾಜಕೀಯ ಪ್ರತಿಕ್ರಿಯೆಯಾಗದಿರಲಿ: ಪಾಫ್ರೆ ಅಭಿಮತ

Date:

Advertisements

ಕರ್ನಾಟಕದಲ್ಲಿ ನಡೆದ ವಿವಿಧ ರಾಜ್ಯಗಳ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ, ಭಾರತದ ವಿಕೇಂದ್ರೀಕರಣ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿರುವ ಹಾಗು ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿ ಇದ್ದಾಗ್ಯೂ, ಏಕ ಪಕ್ಷೀಯವಾಗಿ ಶಿಕ್ಷಣದ ಕೇಂದ್ರೀಕರಣಕ್ಕೆ ಮುಂದಾಗಿರುವ ಯುಜಿಸಿ ಕರಡು ನಿಯಮಗಳನ್ನು(2025) ತಿರಸ್ಕರಿಸಲು ಸಮಾವೇಶ ಕೈಗೊಂಡ ಒಮ್ಮತದ ನಿರ್ಣಯವನ್ನು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಸ್ವಾಗತಿಸಿದೆ.

ಪಾಫ್ರೆ ಪ್ರಧಾನ ಸಂಚಾಲಕರಾದ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ಈ ಕುರಿತು ಪ್ರಕಟಣೆ ಹೊರಡಿಸಿದ್ದು, “ಯುಜಿಸಿ ಕರಡು ನಿಯಮಗಳನ್ನು ತಿರಸ್ಕರಿಸಲು ಒಮ್ಮತದ ನಿರ್ಣಯ ಮಾಡಿರುವುದು ರಾಜಕೀಯ ಕೆಸರೆರಚಾಟವಾಗಬಾರದು. ಈ ನಿರ್ಣಯ ಕೇವಲ ರಾಜಕೀಯ ಪ್ರತಿಕ್ರಿಯೆಯಾಗದೆ, ಉನ್ನತ ಶಿಕ್ಷಣವನ್ನು ವಿಕೇಂದ್ರಿತ ನೆಲೆಯಲ್ಲಿ ಬಲಪಡಿಸಲು ರಾಜ್ಯ ಸರ್ಕಾರಗಳು ತಮ್ಮ ಬದ್ಧತೆಯನ್ನು ಮೆರೆಯಬೇಕಾದ ಅಗತ್ಯತೆಯೂ ಇದೆ” ಎಂದಿದ್ದಾರೆ.

“2020ರಲ್ಲಿ ಅಸಂವಿಧಾನಿಕ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಿದಾಗ, ದೇಶಾದ್ಯಂತ ದೊಡ್ಡ ಮಟ್ಟದ ಪ್ರತಿರೋಧ ಹಾಗೂ ಪ್ರತಿಭಟನೆಯ ಮೂಲಕ ಅದನ್ನು ಸಾರಸಗಟಾಗಿ ತಿರಸ್ಕರಿಸಲಾಗಿತ್ತು. ರಾಷ್ಟ್ರೀಯ ಶಿಕ್ಷಣ ನೀತಿ (2020) ತಿರಸ್ಕರಿಸಲು ಬಲವಾದ ಕಾರಣಗಳೆಂದರೆ , ಅದೊಂದು ಅಸಂವಿಧಾನಿಕ, ಅಪ್ರಜಾಸತ್ತಾತ್ಮಕ ಹಾಗೂ ಶಿಕ್ಷಣವನ್ನು ಕೇಂದ್ರಿಕರಣ, ಖಾಸಗೀಕರಣ, ಕಾರ್ಪೊರೇಟರೀಕಾರಣ ಮತ್ತು ಕೋಮುವಾದೀಕರಣಗೊಳಿಸುವ ಪ್ರಯತ್ನವಾಗಿತ್ತು. ಜನ ತಿರಸ್ಕರಿಸಿದ ಈ ನೀತಿಯನ್ನು ಮತ್ತೊಮ್ಮೆ ಹಿಂಬಾಗಿಲಿನಿಂದ ರಾಜ್ಯ ಸರ್ಕಾರಗಳ ಮೇಲೆ ಹೇರುವ ದೊಡ್ಡ ರಾಜಕೀಯ ಹುನ್ನಾರವನ್ನು ಈ ಸಮಾವೇಶ ಬಯಲುಗೊಳಿಸಿದೆ” ಎಂದಿದ್ದಾರೆ.

Advertisements

“ಈ ಸಮಾವೇಶದ ಮುಂದಿನ ಭಾಗವಾಗಿ, ಸಮಾವೇಶಗೊಂಡಿದ್ದ ರಾಜ್ಯಗಳು, ಸಮವರ್ತಿ ಪಟ್ಟಿಯ ನಮೂದು 25 ರ ಅನ್ವಯ, ಶಾಲಾ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣದ ಎಲ್ಲಾ ಹಂತಗಳ ಶಿಕ್ಷಣದ ಜವಾಬ್ದಾರಿ ರಾಜ್ಯ ಸರ್ಕಾರಗಳು ವಿಷಯವೂ ಅಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಇದನ್ನು ಆಧರಿಸಿ , ಒಕ್ಕೂಟ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಕೇಂದ್ರ ಹಾಗು ರಾಜ್ಯಸರ್ಕಾರಗಳ ಜವಾಬ್ದಾರಿಯನ್ನು ಅಧ್ಯಯನ ಮಾಡಿ ವಿಕೇಂದ್ರಿತ ನೆಲೆಯಲ್ಲಿ ಅದನ್ನು ಉತ್ತಮ ಪಡಿಸಲು ಯಾವ ಬಗೆಯ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಒಂದು ಉನ್ನತ ಸಮಿತಿಯನ್ನು ರಚಿಸಬೇಕು” ಎಂದು ಪಾಫ್ರೆ ಒತ್ತಾಯಿಸಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಂಭಮೇಳದ ಕಾಲ್ತುಳಿತದಲ್ಲಿ ಗತಿಸಿದವರ ಮನೆಗಳಿಗೇಕೆ ಧಾವಿಸಲಿಲ್ಲ ಬಿಜೆಪಿ ಹಿಂಡು?

“ಈ ಸಮಿತಿಯು, ಇತ್ತೀಚಿನ ನ್ಯಾಯಮೂರ್ತಿ ಮದನ್ ಮೋಹನ್ ಪುಂಚಿ ನೇತೃತ್ವದ ಆಯೋಗದ (2007-2010) ವರದಿಯ ಶಿಫರಾಸ್ಸುಗಳ ಜೊತೆಗೆ, ಈ ಹಿಂದೆ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ರಚನಾತ್ಮಕ ಸಂಬಂಧ ಹೇಗಿರಬೇಕೆಂದು ಅಧ್ಯಯನ ಮಾಡಿದ ಆಯೋಗಗಳ ವರದಿಯನ್ನು ಆಧರಿಸಿ, ಸಂವಿಧಾನದ ನೆಲೆಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಜಂಟಿಯಾಗಿ ಮತ್ತು ಸ್ವತಂತ್ರವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಒಂದು ಸ್ಪಷ್ಟ ಮಾರ್ಗಸೂಚಿಯನ್ನು ತಯಾರಿಸಿ, ಅದನ್ನು ಎಲ್ಲಾ ರಾಜ್ಯಗಳ ಜೊತೆ ಸಮಾಲೋಚಿಸುವ ಮೂಲಕ ಅಂತಿಮಗೊಳಿಸಿ ಕೇಂದ್ರ ಸರ್ಕಾರಕ್ಕೆ ಎಲ್ಲ ರಾಜ್ಯಗಳ ಪರವಾಗಿ ಸಲ್ಲಿಸಬೇಕಿದೆ” ಎಂದು ಹೇಳಿದ್ದಾರೆ.

“ಕೇಂದ್ರ ಸರ್ಕಾರದ ಶಾಸನಬದ್ಧ ಸಂಸ್ಥೆಗಳಾದ ಎನ್‌ಸಿಇಆರ್‌ಟಿ (NCERT), ಯುಜಿಸಿ (UGC), ಎನ್‌ಸಿಟಿಇ (NCTE) , ಸಿಬಿಎಸ್‌ಇ (CBSE), ನಾಕ್‌ (NAAC), ಎಐಸಿಟಿಇ (AICTE), ಎನ್‌ಐಒಎಸ್‌ (NIOS) ಮುಂತಾದ ರಾಷ್ಟ್ರೀಯ ಸಂಸ್ಥೆ ಗಳು ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಮೂಲ ಆಶಯಗಳಿಗೆ ಧಕ್ಕೆಯಾಗದಂತೆ ನೀತಿ, ನಿಯಮ ಮತ್ತು ಕಾನೂನುಗಳನ್ನು ರೂಪಿಸಲು ಸಹಾಯವಾಗುತ್ತದೆ. ಇಂಥಹ ಸ್ಪಷ್ಟ ಮಾರ್ಗಸೂಚಿ ಇಲ್ಲವಾದಲ್ಲಿ , ಈ ಬಗೆಯ ಸಮಾವೇಶಗಳು ಕೇವಲ ಕೇಂದ್ರ ಹಾಗು ರಾಜ್ಯಸರ್ಕಾರಗಳ ನಡುವೆ ರಾಜಕೀಯ ಕೆಸರೆರಚಾಟದ ಸಮಾವೇಶಗಳಾಗುತ್ತವೆಯೇ ಹೊರತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗುವುದಿಲ್ಲ” ಎಂದಿದ್ದಾರೆ.

“ಈ ಬಗೆಯ ಸಂಘರ್ಷಗಳು ಸ್ವಾತಂತ್ರ್ಯಾ ನಂತರ ನಡೆದುಕೊಂಡೇ ಬಂದಿವೆ. ಇದಕ್ಕೆ ಪೂರ್ಣ ವಿರಾಮ ಹಾಕುವ ಮೂಲಕ , ಪೂರ್ವ-ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಪಡಿಸಲು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜಂಟಿ ಹಾಗು ಸ್ವತಂತ್ರ ರಚನಾತ್ಮಕ ಪಾತ್ರ ಏನಾಗಿರಬೇಕೆಂದು ತೀರ್ಮಾನಿಸುವ ಕಾಲ ಸನ್ನಿಹಿತವಾಗಿದೆ” ಎಂದು ಪಾಫ್ರೆ ಅಭಿಪ್ರಾಯಪಟ್ಟಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X