ಪಕ್ಷದಲ್ಲಿ ಸ್ಥಾನಕ್ಕಾಗಿ ಕಚ್ಚಾಡುವುದು, ರಾಜ್ಯಾಧ್ಯಕ್ಷರ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದು ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ರಾಯಚೂರಿಗೆ ಏಮ್ಸ್ ಬೇಕು ಎಂಬ ಬೇಡಿಕೆಯೊಂದಿಗೆ ನಡೆಯುತ್ತಿರುವ ಸಾವಿರ ದಿನಗಳ ಬೃಹತ್ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಇತ್ತೀಚೆಗೆ ಪಕ್ಷದಲ್ಲಿರುವವರೇ ಒಬ್ಬರ ಮೇಲೊಬ್ಬರು ಹೇಳಿಕೆ ನೀಡುತ್ತಿರುವುದು ಜನತೆಯ ಮುಂದೆ ಹಾಸ್ಯಾಸ್ಪದವಾಗಿದೆ. ಕಾರ್ಯಕರ್ತರು ಬೇಸರಗೊಳ್ಳುತ್ತಿದ್ದಾರೆ. ಪಕ್ಷ ಕಟ್ಟಿದವರ ಬಗ್ಗೆಯೇ ಮನಬಂದಂತೆ ಹಗುರವಾಗಿ ಮಾತನಾಡುವುದನ್ನು ಮೊದಲು ಬಂದ್ ಮಾಡಬೇಕು. ಅದನ್ನ ಹೈಕಮಾಂಡ್ ನೋಡಿಕೊಳ್ಳಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಪರಾರಿ
ಪಕ್ಷದಲ್ಲಿನ ಆಂತರಿಕ ಸಂಘರ್ಷ ಬೇರೆ ಪಕ್ಷಗಳಿಗೆ ಲಾಭವಾಗಿ ಪರಿಣಮಿಸಬಾರದು. ಇಲ್ಲವಾದರೆ ಪಕ್ಷದಲ್ಲಿ ದೊಡ್ಡ ಸಮಸ್ಯೆ ಉದ್ಭವಿಸುತ್ತದೆ. ಒಗ್ಗಟ್ಟಿನಿಂದ ಪಕ್ಷ ಬಲಿಷ್ಠಪಡಿಸಬೇಕಿದೆ. ಪಕ್ಷ ಕಟ್ಟಿದವರನ್ನು ನಿಂದಿಸುವುದು ಸರಿಯಲ್ಲ. ಮೊದಲು ಇದೆಲ್ಲವೂ ನಿಲ್ಲಬೇಕು. ಆ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಕ್ರಮ ವಹಿಸುವಂತೆ ಒತ್ತಡ ಹೇರಲಾಗಿದೆ. ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಶಿಸ್ತು ಕಾಪಾಡಿಕೊಂಡು ನಡೆಯಬೇಕು” ಎಂದು ಹೇಳಿದರು.
