ಮೈಸೂರು | ಫೆ.14ರಂದು ಉಚಿತ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

Date:

Advertisements

ಮೈಸೂರು ನಗದರ ವಿಶ್ವೇಶ್ವರನಗರ ಇಂಡಸ್ಟ್ರಿಯಲ್ ಸಬರ್ಬ್ ವ್ಯಾಪ್ತಿಯ ಮಹರ್ಷಿ ಪಬ್ಲಿಕ್‌ ಶಾಲೆಯಲ್ಲಿ ಫೆಬ್ರವರಿ 14ರಂದು ಉಚಿತವಾಗಿ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮ ನಡೆಯುವ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಪೋಸ್ಟರ್‌ ಬಿಡುಗಡೆ ಮಾಡಿದರು.

ಪೋಸ್ಟರ್‌ ಬಿಡುಗಡೆಗೊಳಿಸಿದ ಪ್ರತಾಪ್‌ ಸಿಂಹ ಮಾತನಾಡಿ, “ಪ್ರತಿಯೊಬ್ಬ ನಾಗರಿಕನಿಗೂ ಜೀವಿಸಲು ಮನೆ, ಆಹಾರ, ಬಟ್ಟೆ ಸೇರಿದಂತೆ ಇತರೆ ಮೂಲಭೂತ ವ್ಯವಸ್ಥೆಗಳ ಅಗತ್ಯವಿದೆ. ಅಲ್ಲದೆ ಹುಟ್ಟಿದ ಮಗುವಿಗೂ ಕೂಡಾ ಅನ್ನ, ಅಕ್ಷರ, ಆರೋಗ್ಯ ಪ್ರಮುಖ‌ ಅವಶ್ಯವಾಗಿದೆ. ಹಾಗಾಗಿ, ಮಗುವಿಗೆ ಮಾತನಾಡುವ ಭಾಷೆ ಮತ್ತು ವಿದ್ಯೆ ಕಲಿಸುವ ಪ್ರಾರಂಭ ಹಂತದಲ್ಲಿ ಅಕ್ಷರಾಭ್ಯಾಸ ಮಾಡಿಸುವುದು ಪೋಷಕರ ಮೂಲ ಕರ್ತವ್ಯ” ಎಂದು ತಿಳಿಸಿದರು.

“ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ತಾಯಿಯೇ ಮೊದಲ ಗುರು. ಮಗುವಿಗೆ ಅಕ್ಷರಭ್ಯಾಸ ಎನ್ನುವುದು ಜ್ಞಾನ ದೇಗುಲದ ಪ್ರಮುಖ ಘಟ್ಟ. ಅಕ್ಷರಾಭ್ಯಾಸದಲ್ಲಿ ಹೆಚ್ಚು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಕರೆ ನೀಡಿದರು.

Advertisements

ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, “ಉಚಿತ ಸಾಮೂಹಿಕ ಅಕ್ಷರಾಭ್ಯಾಸ ಹಾಗೂ ಸರಸ್ವತಿ ಪೂಜೆ ಫೆ.14ರ ಬುಧವಾರ ಬೆಳಿಗ್ಗೆ 8ರಿಂದ 10-30ರವರೆಗೂ ನಡೆಯಲಿದೆ. ಎಲ್ಲ ಜನಾಂಗದವರೂ ಸದುಪಯೋಗಪಡಿಸಿಕೊಳ್ಳಬೇಕು” ಎಂದು ಕೋರಿದರು. ‌

ಈ ಸುದ್ದಿ ಓದಿದ್ದೀರಾ? ಹಾವೇರಿ | ಗೃಹ ಲಕ್ಷ್ಮೀ ಹಣ ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ದೇಣಿಗೆ ನೀಡಿದ ಆಶಾ ಕಾರ್ಯಕರ್ತೆ

ಅಕ್ಷರಾಭ್ಯಾಸನವನ್ನು ಮಾಡಲಿಚ್ಚಿಸುವ ಮಕ್ಕಳ ಪೋಷಕರು ದೂರವಾಣಿ 9880752727 ಅಥವಾ 7829067769 ಮೊಬೈಲ್‌ ಸಂಖ್ಯೆಗೆ ನೋಂದಾಯಿಸಿಕೊಳ್ಳಬಹುದು. ಫೆಬ್ರವರಿ 13 ನೋಂದಣಿಗೆ ಕಡೆಯದಿನವಾಗಿದೆ.

ಅಕ್ಷರಾಭ್ಯಾಸ ಮಾಡಿಸುವವರ ಗಮನಕ್ಕೆ: “ಸ್ಲೇಟ್-ಬಳಪ ಇತ್ಯಾದಿ ಅಗತ್ಯ ಸಲಕರಣೆಗಳನ್ನು ನಮ್ಮ ಟ್ರಸ್ಟ್‌ನಿಂದಲೇ ಉಚಿತವಾಗಿ ನೀಡಲಾಗುವುದು. ಪ್ರತ್ಯೇಕವಾಗಿ ತರುವ ಅಗತ್ಯವಿರುವುದಿಲ್ಲ” ಎಂದು ತಿಳಿಸಿದರು.

ಮಹರ್ಷಿ ಪಬ್ಲಿಕ್ ಶಾಲೆಯ ಸಿಇಓ ತೇಜಸ್ ಶಂಕರ್, ಬಿಜೆಪಿ ಮುಖಂಡ ಆರ್ ಪರಮೇಶ್ ಗೌಡ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X