ಬಳ್ಳಾರಿ ನಗರದ ದುರ್ಗಮ್ಮ ಗುಡಿ ಹತ್ತಿರದ ರೈಲ್ವೆ ಅಂಡರ್ ಪಾಸ್ ರಸ್ತೆ ಕಾಮಗಾರಿಯು, ಅಂದಾಜು ₹1.80 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಕೇಂದ್ರವು ʼರೆಡ್ ಇನ್ಪ್ರಾʼ ಗುತ್ತಿಗೆದಾರರ ಮೂಲಕ ರಸ್ತೆ ಅಭಿವೃದ್ಧಿ ಮಾಡಿಸಿದ್ದು, ಕಾಲುದಾರಿಯೂ ನಿರ್ಮಾಣವಾಗಿದೆ. ಆದರೆ ವಿದ್ಯುತ್ ವ್ಯವಸ್ಥೆಯಾಗದೆ ಸಂಚಾರಕ್ಕೆ ತೊಂದರೆಯಾಗುತ್ತಿದೆ.
“ರಸ್ತೆ ದುರಸ್ತಿಗೋಸ್ಕರ ವಾಹನಗಳ ಸಂಚಾರ ಬಂದ್ ಮಾಡಿರುವುದರಿಂದ ಇತರೆ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಆದರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತ್ರ ಇಂದು ಮುಗಿಯಲಿದೆ, ನಾಳೆ ಮುಗಿಯಲಿದೆಯೆಂದು ಸಬೂಬು ಹೇಳುತ್ತಿದ್ದಾರೆ. ನಾಳೆ, ನಾಳೆ ಎನ್ನುವ ಕಾರಣ ಕೊಡುವುದು ಯಾವಾಗ ನಿಲ್ಲುವುದೋ ದೇವರೇ ಬಲ್ಲ” ಎಂದು ಪಟ್ಟಣದ ನಾಗರಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಈ ಕುರಿತು ಈ ದಿನ.ಕಾಮ್‌ನೊಂದಿಗೆ ಸ್ಥಳೀಯರು ಮಾತನಾಡಿ, “ರಸ್ತೆಯ ಎರಡು ಬದಿಯಲ್ಲಿನ ಗೋಡೆಗೆ ವಿವಿಧ ವರ್ಣದ ಚಿತ್ತಾರ ಬಿಡಿಸಿರುವುದು ಸ್ವಾಗತಾರ್ಹ. ಆದರೆ ಆ ರಸ್ತೆಯನ್ನು ಬಂದ್ ಮಾಡಿ 2 ತಿಂಗಳು ಕಳೆದರೂ ಸಾರ್ವಜನರು ಓಡಾಡಲು ಅನುಕೂಲ ಮಾಡಿಕೊಟ್ಟಿಲ್ಲ. ಇದರಿಂದ ವಾಹನಸವಾರರಿಗೆ, ಪಾದಚಾರಿಗಳ ಸಂಚಾರಕ್ಕೆ ಪರದಾಡುವಂತಾಗಿದೆ. ಹಾಗಾಗಿ ಅಂಡರ್ ಪಾಸ್ ರಸ್ತೆಯನ್ನು ಕೂಡಲೇ ಸಂಚಾರ ಯೋಗ್ಯ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ಧಿ ಓದಿದ್ದಿರಾ? ಬಳ್ಳಾರಿ | ಉದ್ಯೋಗ, ಆರ್ಥಿಕ ಸಮಾನತೆ ನೀಡುವಲ್ಲಿ ಕೇಂದ್ರ ಬಜೆಟ್ ವಿಫಲ: ಡಿವೈಎಫ್‌ಐ ಆರೋಪ
ಸ್ಥಳೀಯ ನಿವಾಸಿ ವಿಜಯಕುಮಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸಾರ್ವಜನಿಕರಿಗೆ ಮುಕ್ತವಾಗಿ ಸಂಚರಿಸಲು ನಿರ್ಮಾಣ ರಸ್ತೆ ತೆರವು ಮಾಡುವುದರಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ. ಹೀಗೇ ಆದರೆ ನಗರದಲ್ಲಿ ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತದೆ. ಜನರು ಸಂಚರಿಸಲು ಪರದಾಡುವಂತಾಗುತ್ತದೆ. ಆದ್ದರಿಂದ, ಶಾಸಕರು, ಸಂಸದರು, ಸಚಿವರು ಸೇರಿದಂತೆ ಸ್ಥಳೀಯ ನಾಯಕರು ರಾಜಕಾರಣ ಹೊರಗಿಟ್ಟು ನಗರದ ಅಬಿವೃದ್ಧಿ ಕಡೆ ಚಿಂತಿಸಬೇಕು” ಎಂದು ಆಗ್ರಹಿಸಿದರು.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್