ಅಮೆರಿಕದಿಂದ ಭಾರತೀಯರನ್ನು ಹಿಂತಿರುಗಿಸುವ ಸಂದರ್ಭದಲ್ಲಿ ಅವರ ಕೈಗಳಿಗೆ ಬೇಡಿ ಹಾಕಿ ಅಪರಾಧಿಗಳಂತೆ ನಡೆದುಕೊಂಡಿರುವ ಅಮೇರಿಕಾದ ಧೋರಣೆ ತೀವ್ರವಾಗಿ ಖಂಡಿಸುವುದಾಗಿ ಸಂಸದ ಸಾಗರ ಖಂಡ್ರೆ ತಿಳಿಸಿದ್ದಾರೆ.
‘ಇದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಭಾರತ ಸರಕಾರವು ಈ ಸಂಕಷ್ಟದ ಸಂದರ್ಭದಲ್ಲಿ ತನ್ನ ಪ್ರಜೆಗಳ ಪರ ನಿಂತು, ಅವರ ಗೌರವ ಮತ್ತು ಹಕ್ಕುಗಳನ್ನು ರಕ್ಷಿಸಬೇಕು’ ಎಂದು ಆಗ್ರಹಿಸಿದರು.
ಈ ಅಮಾನುಷ ವರ್ತನೆಗೆ ಸಮರ್ಥನೆ ನೀಡುವ ಬದಲು, ತಕ್ಷಣವೇ ರಾಜತಾಂತ್ರಿಕ ಮಟ್ಟದಲ್ಲಿ ಬಲವಾದ ಹಸ್ತಕ್ಷೇಪ ಮಾಡಿ, ಭಾರತೀಯರ ಗೌರವವನ್ನು ಉಳಿಸಿಕೊಳ್ಳುವ ಕ್ರಮಕೈಗೊಳ್ಳಬೇಕು.ತಕ್ಷಣವೇ ಕೇಂದ್ರ ಸರಕಾರ ಪರಿಣಾಮಕಾರಿಯಾದ ಕ್ರಮವನ್ನು ತೆಗೆದುಕೊಳ್ಳುವಂತೆ ಗುರುವಾರ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.