ಗುರುವಾರ ಸಂಜೆ ನಡೆದ ಇಂಗ್ಲೆಂಡ್-ಭಾರತ ಕ್ರಿಕೆಟ್ ತಂಡಗಳ ನಡುವಿನ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕು ವಿಕೆಟ್‌ಗಳ ನಷ್ಟದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ. ಆದಾಗ್ಯೂ, ಕೆ.ಎಲ್ ರಾಹುಲ್ ಅವರ ಆಟದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಟೀಮ್ ಗೇಮ್‌ನಲ್ಲಿ ತಂಡದ ಆಟದ ಮೇಲೆ ಗಮನ ಇರಬೇಕೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ 248 ರನ್‌ಗಳನ್ನು ದಾಖಲಿಸಿತ್ತು. ಟೀಮ್ ಇಂಡಿಯಾ ಗೆಲ್ಲಲು 249 ರನ್‌ಗಳ ಗುರಿ ನೀಡಿತ್ತು. ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿತ್ತು. 251 ರನ್ ಗಳಿಸಿ, ಗೆಲುವು ಸಾಧಿಸಿತು.
ಭಾರತ ತಂಡ ಗೆಲುವು ಸಾಧಿಸಲು ಕೇವಲ 28 ರನ್‌ಗಳ ಅಗತ್ಯವಿದ್ಧಾಗ ಕೆ.ಎಲ್ ರಾಹುಲ್ ಕ್ರೀಸ್‌ಗೆ ಇಳಿದರು. ಆ ವೇಳೆಗೆ, ಶುಭಮನ್ ಗಿಲ್ ಶತಕದ ಸನಿಹದಲ್ಲಿದ್ದರು. ರಾಹುಲ್ ಅವರ ಆಟದ ಶೈಲಿಯು ಗಿಲ್ ಶತಕ ಬಾರಿಸಲು ಅವಕಾಶ ಮಾಡಿಕೊಡಬೇಕೆಂಬ ಧೋರಣೆಯನ್ನು ಹೊಂದಿದೆ ಎಂಬ ರೀತಿಯಲ್ಲಿತ್ತು. 9 ಬಾಲ್‌ಗಳನ್ನು ಎದುರಿಸಿದ ರಾಹುಲ್, ಕೇವಲ 2 ರನ್ ಗಳಿಸಿ ಔಟಾದರು.
ಆದಾಗ್ಯೂ, 87 ರನ್ ಗಳಿಸಿದ್ದ ಗಿಲ್ ಕೂಡ ರಾಹುಲ್ ಔಟ್ ಆದ ಬೆನ್ನಲ್ಲೇ ಔಟ್ ಆದರು. ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರ ಆಟದ ಶೈಲಿಯ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಿಲ್ ಅವರಿಗೆ ಸ್ಟ್ರೈಕ್ ನೀಡುವ ಆತುರದಲ್ಲಿ ಕೆ.ಎಲ್ ರಾಹುಲ್ ಔಟಾಗಿದ್ದಾರೆ ಎಂದು ಹಲವರು ಭಾವಿಸಿದ್ದಾರೆ.
ಈ ವೇಳೆ, ಕಾಮೆಂಟರಿಯಲ್ಲಿದ್ದ ಸುನಿಲ್ ಗವಾಸ್ಕರ್, “ಕೆಎಲ್ ರಾಹುಲ್ ತಮ್ಮ ಆಟವನ್ನು ಪಂದ್ಯಕ್ಕಾಗಿ ಆಡಬೇಕು. ಸಹಜವಾಗಿ ಬ್ಯಾಟಿಂಗ್ ಮಾಡಬೇಕು. ತಮ್ಮ ಜೊತೆಗಾರ ಶತಕ ಗಳಿಸುವ ಅವಕಾಶವಿದೆ ಎಂಬ ಕಾರಣಕ್ಕಾಗಿ ಅವರು ಆತುರದಲ್ಲಿ ಆಟವಾಡಿದರು. ಆಟಗಾರರಿಗೆ ತಂಡ ಆದ್ಯತೆ ಆಗಿರಬೇಕು. ಶುಭ್ಮನ್ ಗಿಲ್ ಅವರಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪಂದ್ಯವು ತಂಡದ ಆಟ. ರಾಹುಲ್ ತಮ್ಮ ಜೊತೆಗಾರ ಶತಕ ಗಳಿಸಲು ಸಹಾಯ ಮಾಡುವ ಉದ್ದೇಶದಿಂದ ಚೆಂಡನ್ನು ಅರ್ಧ ಮನಸ್ಸಿನಿಂದ ಎದುರಿಸಿದರು. ಔಟ್ ಆದರು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.