ಗಂಗಾಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ವೇಳೆ ಕ್ರೆನ್ ಬಕೆಟ್ ಕಳಚಿ, ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಘಟನೆ ನಡೆದಿದೆ.
ಶೇಷಗಿರಿ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನದ ಕಳಸಾರೋಹಣ ಸಂದರ್ಭದಲ್ಲಿ ಅವಘಡ ನಡೆದಿದೆ. ಕ್ರೇನ್ ಬಕೆಟ್ ಕಳಚಿದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊರ್ವನಿಗೆ ಗಾಯವಾಗಿದೆ.
ಮಂಜು ಪಾಟೀಲ್ (42) ಮೃತರು ಎಂದು ತಿಳಿದು ಬಂದಿದೆ. ಮಂಜು ಬಡಿಗೇರ್ ಎಂಬವರು ಗಾಯಗೊಂಡಿದ್ದು, ಹಾನಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಭಜನೆ ಗಾಯಕ ಗೋವಿಂದ ಚವ್ಹಾಣಗೆ ಬಂಜಾರ ಅಕಾಡೆಮಿ ವಾರ್ಷಿಕ ಪ್ರಶಸ್ತಿ
ಕ್ರೇನ್ನ ಮೂಲಕ ಕಳಸ ಸ್ಥಾಪನೆ ಕಾರ್ಯ ನಡೆದಾಗ ಕ್ರೇನ್ ಬಕೆಟ್ ಮುರಿದು ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
