ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಶಿಹಾಳ ಗ್ರಾಮದ ಬಸವಣ್ಣ ದೇವಸ್ಥಾನದ ಬಳಿ ಆಟೋ- ಕಾರು ನಡುವೆ ಡಿಕ್ಕಿ ಸಂಭವಿಸಿ ಆಟೋ ಪಲ್ಟಿಯಾಗಿ ನಾಲ್ವರು ಮಹಿಳೆಯರು ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡವರನ್ನು ಅಂಕನಾಳ ಗ್ರಾಮದ ಬಸ್ಸಮ್ಮ ಜುಮ್ಮನಗೌಡ(50), ಕಮಲದಿನ್ನಿ ಗ್ರಾಮದ ದ್ಯಾಮಮ್ಮ ಮುದ್ದಮ್ಮ(45), ಹುಲಿಹೈದರ್ ಗ್ರಾಮದ ಕನಮಮ್ಮ(35), ಅಮದಿಹಾಳ ಗ್ರಾಮದ ಸಂಗಮ್ಮ ( 65) ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಕ್ತಿನಗರ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಬಳಿ ನಿರ್ಮಾಣವಾಗುವುದೇ ಇಂದಿರಾ ಕ್ಯಾಂಟಿನ್
ಗಾಯಗೊಂಡವರನ್ನು ಲಿಂಗಸುಗೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ಗಾಯಗೊಂಡ ಬಸ್ಸಮ್ಮ ಹಾಗೂ ದ್ಯಾಮಮ್ಮ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುದಗಲ್‌ನಿಂದ ನಾಗರಾಳಗೆ ಹೋಗುತ್ತಿದ್ದ ಆಟೋಗೆ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿದೆ. ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
