ದೆಹಲಿಯ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಅಂತಿಮ ಹಂತದಲ್ಲಿದ್ದು, ಬಿಜೆಪಿ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಲ್ಲದೇ, 27 ವರ್ಷಗಳ ಬಳಿಕ ದೇಶದ ರಾಜಧಾನಿಯಲ್ಲಿ ಅಧಿಕಾರಕ್ಕೆ ಬರುವಲ್ಲಿ ಸಫಲವಾಗಿದೆ.
ಈಗಾಗಲೇ ಬಹುತೇಕ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 48 ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ. ಮೂರನೇ ಬಾರಿಗೆ ಗೆದ್ದು ಸರ್ಕಾರ ರಚಿಸುವ ನಿರೀಕ್ಷೆಯಲ್ಲಿದ್ದ ಆಡಳಿತಾರೂಢ ಎಎಪಿ 22 ಸ್ಥಾನಗಳೊಂದಿಗೆ ಹೀನಾಯ ಸೋಲು ಕಂಡಿದೆ. ಚುನಾವಣೆಯಲ್ಲಿ ಎಎಪಿಯನ್ನು ಮುನ್ನಡೆಸುತ್ತಿದ್ದ ಘಟಾನುಘಟಿ ನಾಯಕರಾದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವಾರು ಪ್ರಮುಖ ನಾಯಕರು ಸೋಲುಂಡಿದ್ದಾರೆ.
Mission Completed 🔥🔥🔥
— Ashish Singh (@AshishSinghKiJi) February 8, 2025
We are not fighting Election of Delhi assembly election 🔥
We preparation upcoming Punjab Election 🔥
Congress going to set game in Punjab 👌✌️ pic.twitter.com/z4vhXZhWLq
ಆಮ್ ಆದ್ಮಿ ಪಕ್ಷ, ಅರವಿಂದ್ ಕೇಜ್ರಿವಾಲ್‌ಗೆ ಅವರು ಸೋಲು ಕಂಡಿರುವುದನ್ನು ಬಿಜೆಪಿ ಕಾರ್ಯಕರ್ತರಿಗಿಂತಲೂ ಕಾಂಗ್ರೆಸ್ ಕಾರ್ಯಕರ್ತರು ಸೋಷಿಯಲ್ ಮೀಡಿಯಾಗಳಲ್ಲಿ ಸಂಭ್ರಮಿಸುತ್ತಿದ್ದಾರೆ.
We took revenge for your insult Sheela Dikshit ji
— Swati Dixit ಸ್ವಾತಿ (@vibewidyou) February 8, 2025
We Love you n Miss You ♥️#DelhiElectionResults pic.twitter.com/djCeLbgOux
ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಅಧಿಕಾರಕ್ಕೆ ಬಂದಿದ್ದ ಕೇಜ್ರಿವಾಲ್ ತನ್ನಷ್ಟಕ್ಕೇ ತಾನೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅವರಿಗೆ ದೆಹಲಿಯ ಜನತೆ ವರ್ಷಗಳ ಬಳಿಕ ಸರಿಯಾದ ಪಾಠ ಕಳಿಸಿದ್ದಾರೆ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಜೊತೆಗೆ, ಶೀಲಾ ದೀಕ್ಷಿತ್ ಅವರನ್ನು ನವದೆಹಲಿಯಿಂದ ಕ್ಷೇತ್ರದಿಂದ ಸೋಲಿಸಿದ್ದಕ್ಕೆ ಇದು ಜನರೇ ನೀಡಿರುವ ಪ್ರತೀಕಾರ ಎಂದು ಉಲ್ಲೇಖಿಸುತ್ತಿದ್ದಾರೆ.
> KEJRIWAL LOST ✅
— Ankit Mayank (@mr_mayank) February 8, 2025
> AAP DEFEATED ✅
> END OF AAP ✅
Thank you Rahul Gandhi. Thank you Sandeep Dikshit.
This is the real & biggest tribute to Sheila Dikshit Ji ❤️🙏#DelhiElectionResults pic.twitter.com/MHZhju42NM
‘ಮನಸ್ಸಿಗೆ ಬಂದಂತೆ ಕಿತ್ತಾಡಿ, ಒಬ್ಬರನ್ನೊಬ್ಬರು ಮುಗಿಸಿ’ ಎಂದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ
ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಎಎಪಿ ದೆಹಲಿ ಚುನಾವಣೆಯಲ್ಲಿ ಪರಸ್ಪರ ವಿರೋಧಿಗಳಾಗಿ ಸ್ಪರ್ಧೆ ಮಾಡಿರುವುದು ಬಿಜೆಪಿಯ ಮುನ್ನಡೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದೇ ವಿಷಯವನ್ನು ಪರೋಕ್ಷವಾಗಿ ಉಲ್ಲೇಖಿಸಿ ಎರಡೂ ಪಕ್ಷಗಳ ವಿರುದ್ದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ವಾಗ್ದಾಳಿ ನಡೆಸಿದ್ದಾರೆ.
Aur lado aapas mein!!! https://t.co/f3wbM1DYxk pic.twitter.com/8Yu9WK4k0c
— Omar Abdullah (@OmarAbdullah) February 8, 2025
ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಉಮರ್ ಅಬ್ದುಲ್ಲಾ, “ನೀವು ಪರಸ್ಪರ ಜಗಳವಾಡುತ್ತಿರಿ” ಎಂದಿದ್ದಾರೆ. “ಔರ್ ಲಡೋ, ಜೀ ಭರ್ ಕೆ ಲಡೋ, ಸಮಾಪ್ತ್ ಕರ್ ದೋ ಏಕ್ ದೂಸ್ರೆ ಕೋ” (ಇನ್ನೂ ಸ್ವಲ್ಪ ಜಗಳವಾಡಿ, ಮನಸ್ಸಿಗೆ ಬಂದಂತೆ ಕಿತ್ತಾಡಿ, ಒಬ್ಬರನ್ನೊಬ್ಬರು ಮುಗಿಸಿ) ಎಂದು ಮುನಿಯೊಬ್ಬರು ಹೇಳಲಾಗುವ ಜಿಫ್ (GIF)ಒಂದನ್ನು ಒಮರ್ ಅಬ್ದುಲ್ಲಾ ಬರೆದುಕೊಂಡಿದ್ದಾರೆ. ಈ ಮೂಲಕ ಎಎಪಿ, ಕಾಂಗ್ರೆಸ್‌ನ ಕಿತ್ತಾಟದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
Sukoon ka naam suna hai😎 pic.twitter.com/Wegp0hI4IC
— Mohit Chauhan (@mohitlaws) February 8, 2025
#DelhiElectionResults pic.twitter.com/gNZSeHDdYK
— The DeshBhakt 🇮🇳 (@TheDeshBhakt) February 8, 2025
Delhi. #DelhiElections2025 pic.twitter.com/GT3dWG2tTY
— Satish Acharya (@satishacharya) February 8, 2025
