ದೆಹಲಿಯಲ್ಲಿ ಎಎಪಿ ಸೋಲಿಗೆ ಅರವಿಂದ್ ಕೇಜ್ರಿವಾಲ್ ಅವರೆ ಕಾರಣ, ಎಎಪಿ ನಾಯಕರು ಭ್ರಷ್ಟಾಚಾರ-ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿಂದಲೇ ಪಕ್ಷ ಸೋತಿದೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
2013ರಲ್ಲಿ ಅಣ್ಣಾ ಹಜಾರೆ ‘ಭ್ರಷ್ಟಚಾರ ವಿರೋಧಿ ಆಂದೋಲನ’ ಆರಂಭಿಸಿದ್ದರು. ಅವರೊಂದಿಗೆ ಅರವಿಂದ್ ಕೇಜ್ರಿವಾಲ್ ಕೂಡ ಸಕ್ರಿಯರಾಗಿದ್ದರು. ಆಂದೋಲನದಿಂದ ದೇಶಾದ್ಯಂತ ಗುರುತಿಸಿಕೊಂಡ ಕೇಜ್ರಿವಾಲ್ ಎಎಪಿ ಕಟ್ಟಿದ್ದರು. ಆದಾಗ್ಯೂ, 2014ರ ಲೋಕಸಭಾ ಚುನಾವಣೆ ಆ ನಂತರದಲ್ಲಿ ಅಣ್ಣಾ ಹಜಾರೆ ಕಾಣೆಯಾಗಿದ್ದರು. ಇದೀಗ, ಎಎಪಿ ಸೋಲು ಖಚಿತವಾಗುತ್ತಿದ್ದಂತೆ ಮತ್ತೆ ಮಾಧ್ಯಮಗಳ ಮುಂದೆ ಬಂದಿರುವ ಹಜಾರೆ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಚುನಾವಣೆಯಲ್ಲಿ ಅಭ್ಯರ್ಥಿಗಳು ಬಲವಾದ ವ್ಯಕ್ತಿತ್ವ, ಒಳ್ಳೆಯ ಆಲೋಚನೆಗಳು ಹಾಗೂ ಸ್ವಚ್ಛ ಇಮೇಜ್ ಹೊಂದಿರಬೇಕು. ಆದರೆ, ಎಎಪಿ ನಾಯಕರಿಗೆ ಅದು ಇರಲಿಲ್ಲ. ಮದ್ಯ ಮತ್ತು ಹಗರಣಗಳಲ್ಲಿ ಎಎಪಿ ನಾಯಕರು ಸಿಲುಕಿಕೊಂಡಿದ್ದರು. ಈ ಆರೋಪಗಳು ಕೇಜ್ರಿವಾಲ್ ಇಮೇಜ್‌ಅನ್ನು ಅಳಿಸಿಹಾಕಿದೆ” ಎಂದು ಹಜಾರೆ ಹೇಳಿದ್ದಾರೆ.
ಬಿಜೆಪಿಗೆ ಲಾಭವಾಗುವುದಿದ್ದರೆ ಅಣ್ಣಾ ಹಾಜರ್!