ಮೆಟ್ರೋದಲ್ಲಿನ ಪ್ರಯಾಣ ದರವನ್ನು ಏರಿಕೆ ಮಾಡಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಭಾನುವಾರದಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.
ಬೆಂಗಳೂರಿನ ‘ನಮ್ಮ ಮೆಟ್ರೋ’ ಪ್ರಯಾಣ ದರ ಪರಿಶೀಲನೆಗಾಗಿ ಮೆಟ್ರೋ ಕಾಯ್ದೆ-2002ರ ಸೆಕ್ಷನ್ 34ರ ಅಡಿಯಲ್ಲಿ ಕಳೆದ ವರ್ಷ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯಿ ವರದಿ ಸಲ್ಲಿಸಿದ್ದು, ದರ ಏರಿಕೆಗೆ ಶಿಫಾರಸು ಮಾಡಿದೆ. ಅದರಂತೆ, ಟಿಕೆಟ್ ದರ ಹೆಚ್ಚಿಸಲಾಗುತ್ತದೆ ಎಂದು ಬಿಎಂಆರ್ಸಿಲ್ ಹೇಳಿದೆ.
ಪರಿಷ್ಕೃತ ದರದಂತೆ, 0-2 ಕಿ.ಮೀ ವರೆಗಿನ ಪ್ರಯಾಣ ದರವು 10 ರೂ., 2-4 ಕಿ.ಮೀ ವರೆಗಿನ ಪ್ರಯಾಣಕ್ಕೆ 20 ರೂ., 4-6 ಕಿ.ಮೀ ವರೆಗಿನ ಪ್ರಯಾಣ ದರವು 30 ರೂ., 6-8 ಕಿ.ಮೀ ವರೆಗಿನ ಪ್ರಯಾಣಕ್ಕೆ 40 ರೂ., 8-10 ಕಿ.ಮೀ ವರೆಗಿನ ಪ್ರಯಾಣ ದರವು 50 ರೂ., 10-15 ಕಿ.ಮೀ ವರೆಗಿನ ಪ್ರಯಾಣ 60 ರೂ., 15-20 ಕಿ.ಮೀ ವರೆಗಿನ ಪ್ರಯಾಣ ದರವು 70 ರೂ., 20-25 ಕಿ.ಮೀ ವರೆಗಿನ ಪ್ರಯಾಣಕ್ಕೆ 80 ರೂ., 25-30 ಕಿ.ಮೀ ವರೆಗಿನ ಪ್ರಯಾಣ ದರವು 90 ರೂ. ಹಾಗೂ 30 ಕಿ.ಮೀ.ಗಿಂತಹ ಹೆಚ್ಚಿನ ಪ್ರಯಾಣವು 90 ರೂ. ಇರಲಿದೆ.

ಜೊತೆಗೆ, ಸ್ಮಾರ್ಟ್ ಕಾರ್ಡ್ಗಳಲ್ಲಿ ಇರಬೇಕಾದ ಕನಿಷ್ಠ ಮೊತ್ತವನ್ನು 50 ರೂ. ಇಂದ 90 ರೂ.ಗೆ ಏರಿಕೆ ಮಾಡಲಾಗಿದೆ. ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣಿಸುವವರಿಗೆ ಗರಿಷ್ಠ 5 ರೂ. ರಿಯಾಯತಿ ಇರಲಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.