ತುಮಕೂರು | ಒಳಮೀಸಲಾತಿ : ಒಲವು-ನಿಲುವು ಕೃತಿ ಲೋಕಾರ್ಪಣೆ

Date:

Advertisements

ತುಮಕೂರು ನಗರದ ರವೀಂದ್ರ ಕಲಾ ನಿಕೇತನ ಸಭಾಂಗಣದಲ್ಲಿ ಭಾನುವಾರ ಪ್ರೊ. ಎಲ್. ಮಣಿಗಯ್ಯ ಅವರ ಒಳಮೀಸಲಾತಿ ಒಲವು, ನಿಲುವು ಕೃತಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಬಾಬು ಜಗಜೀವನರಾಮ್ ಅಧ್ಯಾಯನ ಕೇಂದ್ರದ ನಿರ್ದೇಶಕ ಪ್ರೊ. ಬಿ. ಗಂಗಾಧರ ಬಿಡುಗಡೆ ಮಾಡಿದರು.

ಯಾವುದೇ ಪೂರ್ವಗ್ರಹವಿಲ್ಲದೆ ಒಳಮೀಸಲಾತಿ ಒಲವು, ನಿಲುವು ಕೃತಿಯನ್ನು  ರಚಿಸಿರುವ ಮಣಿಗಯ್ಯ ಅವರು ವೈಜ್ಞಾನಿಕವಾಗಿ ದಲಿತರನ್ನು ವರ್ಗಿಕರಣ ಮಾಡುವ ಮೂಲಕ ವಸ್ತಾವದ ಸಂಗತಿ ಆಧಾರಿಸಿ ರಚಿತವಾಗಿರುವ ಈ ಕೃತಿಯಿಂದ ಓದುಗರಿಗೆ ದಲಿತರು ಹೇಗಿರಬೇಕು ಎಂಬ ಪ್ರಶ್ನೆ ಮೂಡಿಸುತ್ತದೆ. ಉದ್ದೇಶಪೂರ್ವಕವಾಗಿ ಕೆಲವರು ಒಳಮೀಸಲಾತಿ ವಿರೋಧಿಸುವ ಮೂಲಕ ಸಾಮಾಜಿಕವಾಗಿ ಬಿಡುಗಡೆ ಪಡೆಯಬೇಕಿದ್ದ ಸಮುದಾಗಳನ್ನು ಅಂಚಿಗೆ ತಳ್ಳುತ್ತಿದ್ದಾರೆ ಎಂದು ಪ್ರೊ. ಬಿ. ಗಂಗಾಧರ ಹೇಳಿದರು.

ತಮಕೂರು ವಿವಿ ವಿಜ್ಙಾನ ಕಾಲೇಜಿನ ಸಹಾಯಕ ಪ್ರಧ್ಯಾಪಕ ಡಾ. ನಾಗಭೂಷಣ್ ಬಗ್ಗನಡು ಮಾತನಾಡಿ ಒಳಮೀಸಲಾತಿ ಒಲವು ನಿಲುವು ಕೃತಿಯನ್ನು ಲೇಖಕರು ಸಮುದಾಯದ ಅಂತರ ಕಾಯ್ದುಕೊಂಡು ಬಲು ಎಚ್ಚರದಿಂದ ಕೃತಿ ರಚಿಸಿದ್ದಾರೆ. ಒಳಮೀಸಲಾತಿ, ಜಾತಿಶ್ರೇಣಿಕರಣ, ಸಾಮಾಜಿಕ ಆಯಾಮಗಳನ್ನು ಒಳಗೊಂಡಂತೆ ಸಸಮಕಾಲೀನ ರಾಜಕಾರಣದ ಬಗ್ಗೆಯೂ ಕೃತಿಯಲ್ಲಿ ಅವಲೋಕಿಸಿದ್ದಾರೆ ಎಂದು ಹೇಳಿದರು.

Advertisements

ಚಿಂತಕ ದೊರೆರಾಜ್ ಮಾತನಾಡಿ ಶೋಷಿತ ಸಮುದಾಯಗಳ ಒಟ್ಟುಗೂಡಿಸಿದಾಗ ಮಾತ್ರ ಶೋಷಣೆಗಳಿಂದ ಹೊರಬರಲು ಸಾಧ್ಯ. ಒಳಮೀಸಲಾತಿ ಒಪ್ಪಿಕಕೊಂಡು ಛಿದ್ರಿಕರಣದಿಂದ ಏಕೀಕರಣದಕಡೆ  ಹೋಗಬೇಕು. ದ್ವೇಷ, ಅಸೂಯೆ ಮೀರಿ ಬುದ್ಧ ಚಿಂತನೆ ಬೆಳಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಮ.ಲ.ನ ಮೂರ್ತಿ, ಲೇಖಕ ತುಂಬಾಡಿ ರಾಮಯ್ಯ, ಡಿಎಸ್ ಎಸ್ ಮುಖಂಡ ವೀರುಪಾಕ್ಷ ಡ್ಯಾಗೇರಹಳ್ಳಿ, ಓ. ನಾಗರಾಜ್, ಪ್ರೊ. ಮಣಿಗಯ್ಯ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X