ಮುಲ್ಲಾ ಎಂಬದು ಶ್ರೇಷ್ಠ ಪದ. ಸಮಾಜದಲ್ಲಿ ಉನ್ನತ ಗೌರವ ಹೊಂದಿರುವ ಎಂದರ್ಥ. ಮುಲ್ಲಾ ಸಮಾಜವು ಪ್ರತಿಯೊಂದು ಸಮಾಜದೊಂದಿಗೆ ಉತ್ತಮ ಒಡನಾಟ ಹೊಂದುವುದರೊಟ್ಟಿಗೆ ಸಮಾಜದ ಏಳಿಗೆಗೆ ಒಗ್ಗಟ್ಟಾಗಬೇಕು ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕಿರ್ ಸನದಿ ತಿಳಿಸಿದರು.
ವಿಜಯಪುರ ನಗರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ನಡೆದ ಕರ್ನಾಟಕ ಮುಲ್ಲಾ ಅಸೋಸಿಯೇಷನ್ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮುಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಶಾಸಕ ವಿಠ್ಠಲ ಕಟಕದೊಂಡ ದೋಂಡಿಬ ಹಾಗೂ ರಾಜುಗೌಡ ಪಾಟೀಲರು ಅಸೋಸಿಯೇಷನ್ ಲೋಗೋ ಬಿಡುಗಡೆಗೊಳಿಸಿ ಮಾತನಾಡಿ, “ಗ್ರಾಮೀಣ ಭಾಗದ ಮುಲ್ಲಾ ಸಮುದಾಯಕ್ಕೆ ಗೌರವವಿದೆ. ಊರಿನ ಪ್ರತಿಯೊಂದು ಕಾರ್ಯಕ್ರಮಕ್ಕೆ ಈ ಸಮಾಜದವರು ಕೈಜೋಡಿಸುತ್ತಾರೆ. ಮುಲ್ಲಾ ಸಮುದಾಯದ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಲಾಗುವುದು” ಎಂದು ಭರವಸೆ ನೀಡಿದರು.
ಧಾರ್ಮಿಕ ಮುಖಂಡ ಮೊಹಮ್ಮದ್ ತನ್ವೀರ್ ಪೀರಾ ಆಸ್ಮಿ ಸಾನಿಧ್ಯ ವಹಿಸಿ ಮಾತನಾಡಿ, “ಮುಲ್ಲಾ ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿಯಾಗಿ ಬೆಳೆಯಲು ಪ್ರತಿಯೊಬ್ಬರೂ ಒಗ್ಗಟ್ಟಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಜೀತ ಕಾರ್ಮಿಕ ಪದ್ದತಿ ಆಚರಣೆ ಶಿಕ್ಷಾರ್ಹ ಅಪರಾಧ: ಪಿಡಿಒ ಆರ್ ಪ್ರಭಾ
ಗುಳೇದ ಗುಡ್ಡದ ಆಸಿಫ್ ಖಾದ್ರಿ ಸಾಹೇಬ್, ಮನಗೂಳಿಯ ಡಾ. ಫಿರೋಜ ಹುಸೇನ್ ಆಶೀರ್ವವಚನ ನೀಡಿದರು. ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮುಲ್ಲಾ ಬಾಂಧವರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ರಾಜು ಆಲಗೂರ, ಎಸ್ ಎಂ ಪಾಟೀಲ ಗಣಿಹಾರ, ಎಂ ಸಿ ಮುಲ್ಲಾ, ಶ್ರೀನಾಥ ಪೂಜಾರಿ, ಮಹಿಬೂಬು ಮುಲ್ಲಾ ಬಳಬಟ್ಟಿ, ಇಮ್ತಿಯಾಜ ಮುಲ್ಲಾ ಇದ್ದರು.