ರಾಜ್ಯ ಖೋ ಖೋ ಸಂಸ್ಥೆಯ ಸಮಸ್ಯೆಗಳು, ರಾಜ್ಯದಕ್ರೀಡಾ ನೀತಿ ಹಾಗೂ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸರ್ವಾಧಿಕಾರಿ ಧೋರಣೆ ಖಂಡಿಸಿ ಜಿಲ್ಲಾ ಖೋ ಖೋ ಸಂಸ್ಥೆಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ನೇತೃತ್ವದಲ್ಲಿ ಕ್ರೀಡಾಪಟುಗಳು ಸೋಮವಾರ ತುಮಕೂರು ನಗರದ ಜಿಲ್ಲಾಧಿಕಾರಿಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಹಾಗೂ ರಾಜ್ಯ ಒಲಂಪಿಕ್ ಅಸೋಸಿಯೇಷನ್‌ನ ಸರ್ವಾಧಿಕಾರಿ ಧೋರಣೆ ವಿರುದ್ಧ ಘೋಷಣೆಕೂಗುತ್ತಾ ಕ್ರೀಡಾಪಟುಗಳು ಹಾಗೂ ಮುಖಂಡರು ಸ್ವತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದರು.ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಖೋ ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ರಾಜಕೀಯ ಪ್ರಭಾವದಿಂದ ಭಾರತೀಯ ಒಲಂಪಿಕ್ ಅಸೋಸಿಯೇಷನ್ ನಿಯಮಗಳನ್ನು ಗಾಳಿಗೆ ತೂರಿ ಯಾವುದನ್ನೂ ಪಾಲಿಸದೆ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಾವಳಿಗಳನ್ನು ಬದಲಾಯಿಸಿಕೊಂಡು ರಾಜ್ಯ ಅಸೋಸಿಯೇಷನ್ ಅನ್ನು ಬಳಸಿಕೊಂಡಿದ್ದಾರೆ.ಇವರು ಸತತ 24 ವರ್ಷದಿಂದ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ.
ಅನಂತರಾಜು ಎಂಬುವವರು 22 ವರ್ಷಗಳಿಂದ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.ರಾಜಕೀಯ ಸಂಬಂಧ ಇಟ್ಟುಕೊಳ್ಳದೆ ಕ್ರೀಡಾ ಸಂಸ್ಥೆಯನ್ನು ನಡೆಸಿಕೊಂಡು ಹೋಗಬೇಕೆಂಬ ನಿಯಮವಿದ್ದರೂ ಅಧ್ಯಕ್ಷ ಗೋವಿಂದರಾಜು ಅವರುಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ತಮ್ಮ ಸರ್ವಾಧಿಕಾರವನ್ನು ಮುಂದುವರೆಸಿದ್ದಾರೆ ಎಂದು ಹೇಳಿದರು.
ಕಳೆದ 40 ವರ್ಷಗಳಲ್ಲಿ ರಾಜ್ಯದ ಖೋ ಖೋ ತಂಡಗಳು ರಾಷ್ಟ್ರ ಮಟ್ಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಉಳಿಸಿಕೊಂಡು ಬಂದಿವೆ. ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ನಮ್ಮ ಖೋ ಖೋ ತಂಡಗಳು ಕೀರ್ತಿತಂದಿವೆ. ಆದರೆ ಸರ್ಕಾರದ ಮಟ್ಟದಲ್ಲಿ ಈ ಕ್ರೀಡಾಪಟುಗಳಿಗೆ ಯಾವುದೇ ವಿಶೇಷ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಬಾರಿಯ ವಿಶ್ವಮಟ್ಟದ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಮತ್ತು ಪುರುಷ ಖೋ ಖೋ ತಂಡಗಳು ಪ್ರಶಸ್ತಿ ಗೆದ್ದಿವೆ.ಈ ತಂಡದಲ್ಲಿ ನಮ್ಮರಾಜ್ಯದ ಚೈತ್ರ ಮತ್ತು ಗೌತಮ್ ವಿಜೇತ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ನಮ್ಮರಾಜ್ಯದ ಕಳಪೆ ಕ್ರೀಡಾ ನೀತಿಯಿಂದಾಗಿ ಆ ಕ್ರೀಡಾಪಟುಗಳಿಗೆ ಸರಿಯಾದ ಗೌರವ ನೀಡದೆ ಅವಮಾನ ಮಾಡಿದ್ದು ಕ್ರೀಡಾಭಿಮಾನಿಗಳಿಗೆ ಭಾರಿ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಖೋ ಖೋಆಟಗಾರರಿಗೆ ಹೊರ ರಾಜ್ಯಗಳು ನೀಡುವಂತೆ ಎ ಗ್ರೇಡ್ ಮತ್ತು ಬಿ ಗ್ರೇಡ್ ಸರ್ಕಾರಿ ಹುದ್ದೆ ನೀಡಬೇಕು.ಪ್ರತಿಯೊಬ್ಬರಿಗೂ ಕನಿಷ್ಟ 50 ಲಕ್ಷರೂ.ನೆರವು ನೀಡುವ ನಿಯಮರೂಪಿಸಬೇಕು.ರಾಜ್ಯಕ್ರೀಡಾ ಸಂಸ್ಥೆಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ಮನವಿ ಪಡೆದು ನೇರವಾಗಿಅನುದಾನ ನೀಡುವ ಪದ್ದತಿ ಜಾರಿಗೊಳಿಸಬೇಕು. ಈಗ ಇರುವಂತೆರಾಜ್ಯಒಲAಪಿಕ್ ಅಸೋಸಿಯೇಷನ್ ಮೂಲಕ ಅನುದಾನ ಕೇಳುವ ಪದ್ದತಿ ರದ್ದುಗೊಳಿಸಬೇಕು ಎಂದು ಲೋಕೇಶ್ವರ್ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯಒಲಂಪಿಕ್ ಅಸೋಸಿಯೇಷನ್‌ಗೆ ಈಗಾಗಲೇ ನೀಡಿರುವಅನುದಾನದುರುಪಯೋಗಆಗಿರುವ ಬಗ್ಗೆ ಆರೋಪಗಳಿವೆ. ಈ ಬಗ್ಗೆ ತನಿಖೆ ನಡೆಸಬೇಕು. ಹಾಲಿ ಅಧ್ಯಕ್ಷರಾಗಿ ಸರ್ವಾಧಿಕಾರಿತನ ಮುಂದುವರೆಸಿರುವ ಗೋವಿಂದರಾಜುಅವರುಅಧ್ಯಕ್ಷ ಸ್ಥಾನ ತೊರೆಯಬೇಕು.ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರೋತ್ಸಾಹ, ಸೌಕರ್ಯ ನೀಡಬೇಕು.ನಮ್ಮ ಖೋ ಖೋ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲುಎಲ್ಲಾರೀತಿಯಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಖೋ ಖೋ ಸಂಸ್ಥೆ ಅಧ್ಯಕ್ಷ ಶಂಕರ್‌ಕುಮಾರ್ ಮಾತನಾಡಿ, ಹಲವಾರು ವರ್ಷಗಳಿಂದ ರಾಜ್ಯದ ಖೋ ಖೋಆಟಗಾರರುಗಮನಾರ್ಹ ಸಾಧನೆ ಮಾಡುತ್ತಾ ಬಂದಿದ್ದಾರೆ. ಗ್ರಾಮೀಣ ಪ್ರದೇಶದ ಹೆಚ್ಚು ಮಂದಿ ಈ ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.ಸರ್ಕಾರಇಂತಹವರಿಗೆಉತ್ತೇಜನ ನೀಡಬೇಕು.ಆದರೆ ರಾಜ್ಯ ಒಲಂಪಿಕ್ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಜ್ಯದ ಕ್ರೀಡಾಕ್ಷೇತ್ರವನ್ನು ಕಡೆಗಣಿಸಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಪ್ರಧಾನ ಕಾಯದರ್ಶಿ ಎಂ.ಹೆಚ್.ರಾಜು, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ಎ.ಎನ್.ಪ್ರಭಾಕರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಮುಖಂಡರಾದ ಆರ್.ಎನ್.ವೆಂಕಟಾಚಲ, ಕೆ.ಪಿ.ಮಹೇಶ್, ಕನ್ನಡ ಪ್ರಕಾಶ್, ಶ್ರೀನಿವಾಸಮೂರ್ತಿ, ಪ್ರಶಾಂತ್, ಜಿ.ವಿ.ಉಮೇಶ್, ವಿಜಯಕುಮಾರ್, ಅರುಣ್‌ಕುಮಾರ್, ಮೀಸೆ ಸತೀಶ್, ರಾಮಚಂದ್ರರಾವ್, ಶಬ್ಬೀರ್‌ಅಹ್ಮದ್, ಜಿಮ್ ನಟರಾಜ್, ನಂದಿನಾಥ್ ಮೊದಲಾದವರು ಭಾಗವಹಿಸಿದ್ದರು.