ಮೈಸೂರು | ರೈತ ಸಾಲಗಾರನಲ್ಲ; ಸರ್ಕಾರವೇ ರೈತನಿಗೆ ಬಾಕಿದಾರ: ವಿಶ್ವ ರೈತಚೇತನ ಪ್ರೊ. ಎಂಡಿಎನ್ ನೆನಪು

Date:

Advertisements

“ಯಾರ್ರೀ ಅವ್ನು ಚಾವ್ಟಿ ಹಿಡ್ದ್ ರೈತರ್ನ ಪೀಡ್ಸೋನು, ಡೆಪ್ಯೂಟಿ ಕಮಿಶನ್ರೆ! ಯಾರ್ರೀ ಚಾವ್ಟಿ ಕೊಟ್ಟಿದ್ದು? ಸಂಬಳ ಕೊಡೋರ್ ನಾವ್, ಬಟ್ಟೆ ಕೊಟ್ಟೋರ್ ನಾವ್.. ಐದ್ ನಿಂಸ ಕೊಡ್ತೀನಿ, ಚಾವ್ಟಿ ಕೀಳ್ನಿಲ್ಲ ಅಂದ್ರೆ ನಮ್ ರೈತ್ರು ಕೀಳ್ತರೆ. ಬಾರ್ ಕೋಲ್ ನನ್ ರೂಲ್ ಆಫ್ ಲಾ” ಎಂದ ರೈತ ಮಹಾಚೇತನ ಪ್ರೊ ನಂಜುಂಡಸ್ವಾಮಿ ಅವರ 89ನೇ ವರ್ಷದ ನೆನಪು.

ಮಹಾಂತ ದೇವರು ನಂಜುಂಡಸ್ವಾಮಿ ಅಕ್ಕರೆಯ ಪ್ರೊ. ಎಂಡಿಎನ್ 1936 ಫೆ.13ರಂದು ಮೈಸೂರು ಜಿಲ್ಲೆಯ ತಿರಮಕೂಡಲು ನರಸೀಪುರ ತಾಲೂಕಿನ ಮದ್ರಹಳ್ಳಿ ಗ್ರಾಮದಲ್ಲಿ ಎಂ ಎನ್ ಮಹಾಂತ ಹಾಗೂ ರಾಜಮ್ಮಣ್ಣಿ ಎಂಬ ರೈತ ದಂಪತಿಗಳಿಗೆ ಐದನೇ ಮಗನಾಗಿ ಜನಿಸಿದರು.’ರೈತ ಸಾಲಗಾರನಲ್ಲ, ಸರ್ಕಾರವೇ ರೈತನಿಗೆ ಬಾಕಿದಾರ’ ಎಂದವರು ವಿಶ್ವಚೇತನ ಎಂಡಿಎನ್.

ವೈದ್ಯರಾಗಬೇಕು ಅನ್ನುವುದು ಕುಟುಂಬದ ಬಯಕೆ, ಸೀಟು ಸಿಗದ ಕಾರಣ ಕಾನೂನು ಪದವಿ ಅಧ್ಯಯನ. ಆದರೇನು! ಕೈಬೀಸಿ ಕರೆದಿದ್ದು ರೈತ ಹೋರಾಟ. ಅಪ್ಪಟ ಗಾಂಧಿವಾದಿಯಾದ ಪ್ರೊಫೆಸರ್ ಅವರ ಸಾಂಗತ್ಯಕ್ಕೆ ಹೊರಳಿದ್ದು ಸಮಾಜವಾದಿ ನಾಯಕರಾದ ರಾಮ ಮನೋಹರ ಲೋಹಿಯಾ ಹಾಗೂ ಶಾಂತವೇರಿ ಗೋಪಾಲಗೌಡ. ಅವರ ನಿಕಟವರ್ತಿಯಾಗಿ ಕೆಲಸಾರಂಭ ಮಾಡಿದರು.

Advertisements

ಜೆಪಿ ಚಳುವಳಿಯ ಆರಂಭಿಕ ದಿನಗಳಲ್ಲಿ 1975ರ ಅವಧಿಗೆ ಕರ್ನಾಟಕದಲ್ಲಿ ನೇತೃತ್ವ ವಹಿಸಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಮತ್ತು ಪೂರ್ಣಚಂದ್ರ ತೇಜಸ್ವಿಯವರ ಒಡನಾಡಿಯಾಗಿ ನವ ನಿರ್ಮಾಣ ಕ್ರಾಂತಿ ನಿರ್ಮಿಸಿದರು. ಹೀಗೆ ಅಂದುಕೊಂಡಿದ್ದನ್ನು ಮೀರಿ ಬೆಳದ ಪ್ರೊ ಎಂಡಿಎನ್, ಕಡೆಗೆ ಮುಖ ಮಾಡಿದ್ದು ರೈತ ಹೋರಾಟಗಾರರಾಗಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ಮೂಲಕ.

1989ರಲ್ಲಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿ ಸದನದಲ್ಲಿ ರೈತಪರ ಅಬ್ಬರಿಸಿದ ಪರಿ ಇಂದಿಗೂ ನಿದರ್ಶನ. ಅಂದು ಎಂಡಿಎನ್ ಸದನದಲ್ಲಿ ಇದ್ದಾರೆ ಅಂದ್ರೆ ಅಧಿಕಾರಿಗಳಿಂದ ಹಿಡಿದು ಮುಖ್ಯಮಂತ್ರಿಗಳಾದಿಯಾಗಿ ಸಭೆಯಲ್ಲಿ ಇರಲೇಬೇಕು.. ಒಂದು ರೀತಿಯ ನಡುಕ.

ಅಂದಿನ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗ್ಗಡೆಯವರ ಜೊತೆ ಸಭೆ ನಡೆಯುವಾಗ ಅಧಿಕಾರಿಗಳು ಸಭಾ ನಡವಳಿ ಬರೆದುಕೊಳ್ಳಲು ಮುಂದಾಗುತ್ತಾರೆ. ಆಗ ಪ್ರೊ ಎಂಡಿಎನ್ ಅವರು ‘ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮವರು ಬರೆದುಕೊಳ್ಳುವುದು ಅಲ್ಲಿರಲಿ. ಪೆನ್ನು, ಪುಸ್ತಕ ಹಿಡಿದು ನೀವು ಬರೆದುಕೊಳ್ಳಿ. ಅವರು ಬರೀತಾರೆ ಅಷ್ಟೇ ಕೆಲಸ ಆಗಲ್ಲ, ಬರವಣಿಗೆಯಲ್ಲಿ ಉಳಿಯುತ್ತೆ. ನೋಡಿ ರೈತರ ಕಷ್ಟ ನೀವ್ ಬರ್ಕೊಳಿ, ನೀವೇ ಸರಿಪಡಿಸಬೇಕು’ ಅಂದ ಧೀಮಂತ ನಾಯಕ.

‘ರೈತರಿಗೆ ಸಬ್ಸಿಡಿ ಬೇಡಾ, ವೈಜ್ಞಾನಿಕ ಬೆಲೆ ನಿಗದಿ ಮಾಡಿ’ ಎಂದು ಮೊದಲಿಗೆ ಸದನದಲ್ಲಿ ರಣ ಕಹಳೆ ಮೊಳಗಿಸಿದ್ದು ಎಂಡಿಎನ್. ಮಾತು ಎಷ್ಟರ ಮಟ್ಟಿಗೆ ಮೊನಚಾಗಿತ್ತು ಅನ್ನುವುದಕ್ಕೆ ಅವರ ಮಾತಿನ ಸಾರಾಂಶ ಇಂತಿದೆ.. “ರೈತರ ಕಷ್ಟ, ಕಾರ್ಪಣ್ಯ ಮನವರಿಕೆ ಮಾಡಿದರೂ ಜಡ್ಡುಗಟ್ಟಿದ ಸರ್ಕಾರಕ್ಕೆ ನಿಲುವುಗಳು ತಟ್ಟಲಾರವೇನೋ! ನಿಮ್ಮದು ಸರ್ಕಾರವಾ ಇಲ್ಲ ಮುನ್ಸಿಪಾಲ್ಟಿಯ? ಅತ್ವಾ ರಾಜ್ಯ ಸರ್ಕಾರನೇನ? ಅಂತ ಛೇಡಿಸಿದ್ದರು.

ಗಾಂಭೀರ್ಯದ ವ್ಯಕ್ತಿತ್ವ, ಕುರುಚಲು ಗಡ್ಡ, ಮಾತಿಗೆ ನಿಂತರೆ ಪಟಾಕಿಯಂತೆ ಸಿಡಿಯುವ ಗುಣದ ಪ್ರೊಫೆಸರ್ ಸದನದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಂಗಾರಪ್ಪ ಅವರಿಗೆ, “ಮುಖ್ಯಮಂತ್ರಿಗಳೇ ಸರ್ಕಾರ ಉಳಿದಿರೋದು ಹೆಬ್ಬೆಟ್ಟು ರೈತನಿಂದ. ರೈತ ದೇಶ ಉಳಿಸಿದ್ದಾನೆ. ಕಲಿತವರಿಂದ ದೇಶ ಉದ್ದಾರ ಆಗಿಲ್ಲ. ಹಾಳಾಗಿದ್ದೆ ಹೆಚ್ಚು. ನಮ್ ಮಾತ್ ಕೇಳಿ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ತೀರ ಅಯೋಮಯ ಪರಿಸ್ಥಿತಿ. ನಿಮಗೆ ಆಗೋದನ್ನ ನೀವ್ ಮಾಡಿ, ಒಂದ್ ವೇಳೆ ನಮ್ ಸರ್ಕಾರ ಬಂದ್ರೆ ನಾವ್ ಮಾಡ್ತಿವಾ ಇಲ್ವಾ ನೀವೇ ನೋಡಿ” ಎಂದಿದ್ದರು ಎಂಡಿಎನ್.

ಮುಂದಿದ್ದ ಬಂಗಾರಪ್ಪ ಅವರಿಗೆ ಕಸಿವಿಸಿ ಏನು ಹೇಳಬೇಕು,‌ ಏನು ಮಾತಾಡಬೇಕು ತಿಳಿಯದೆ ವಿಷಯದಿಂದ ಪಲ್ಲಟ ಆಗುವಂತ ಇಕ್ಕಟ್ಟಿಗೆ ತಂದಂತ ವಾಗ್ಮಿ. ರೈತರ ಹೋರಾಟಕ್ಕೆ ಒಂದು ಕರೆ ಕೊಟ್ಟರೆ ಲಕ್ಷಾಂತರ ಜನ ತಂಡೋಪ ತಂಡವಾಗಿ ಬಂದು ಸೇರುತಿದ್ದಿದ್ದು ಇದೆ ಪ್ರೊ ನಂಜುಂಡಸ್ವಾಮಿ ಅವರ ನೇತೃತ್ವದ ಹೋರಾಟಕ್ಕೆ.

ರೈತ ಹೋರಾಟಗಳಲ್ಲಿ ಹೇಳುತ್ತಿದ್ದ ಒಂದು ಮಾತು ಅಂದ್ರೆ.. ʼನೀವ್ ಏನ್ ಹೇಳ್ತೀರಾ ಬಿಡ್ತೀರಾ ಗೊತ್ತಿಲ್ಲ ಆದ್ರೆ, ಗಾಂಧಿ ಹಾಗೂ ಲೋಹಿಯ ಎಂದಿಗೂ ನೆನಪಲ್ಲಿ ಇರಬೇಕು. ಹೋರಾಟದ ದಿಕ್ಕು ದೆಸೆ ಅಂದ್ರೆ ಅದಕ್ಕೆ ಮತ್ತೊಂದು ಹೆಸರೇ ಇವರು ಅಂದಿದ್ದರು.

ಒಕ್ಕಲುತನ ನನ್ ಕುಲ್ ಕಸ್ಬು, ಬೇರೆ ಕೆಲ್ಸ ಸಿಗ್ಲಿಲ್ಲ ಉಳ್ಮೆ ಮಾಡ್ತೀನಿ ನಾನ್ ರೈತ. ದೇಶಕ್ಕೆ ಅನ್ನ ಕೊಡುವ ಅನ್ನದಾತ. ಎಲ್ಲ”ಬಗರ್ ಹುಕುಂ ಅಂತಾರೆ ಅಲ್ಲಪ್ಪಾ, ಅದು ಸಾಚಾ ಹುಕುಂ” ನಾನು ನನ್ನ ಕುಟುಂಬ ಇಲ್ಲೇ ಹುಟ್ಟಿದ್ವಿ. ನಮ್ ಹಕ್ಕದು ಅಂತೇಳಿದ್ದು ಪ್ರೊ ಎಂಡಿಎನ್. ರೈತ ಹೋರಾಟಕ್ಕೆ ಹೊಸ ಬಾಷ್ಯ ಬರೆದ ಶ್ರೀಯುತರ ಹೋರಾಟದ ದಿಕ್ಕು ವಿಶ್ವಕ್ಕೆ ಮಾದರಿ. ಕೇವಲ ರಾಜ್ಯ, ದೇಶವಲ್ಲ ವಿಶ್ವವೆ ಮೆಚ್ಚಿದ ನಾಯಕ ಅವರು.

ವಿಶ್ವಚೇತನ ಪ್ರೊ. ನಂಜುಂಡಸ್ವಾಮಿ ಅವರ 89ರ ನೆನಪಿನ ಅಂಗವಾಗಿ ಇದೆ ಫೆ.13 ರಂದು ಮೈಸೂರಿನ ಟೌನ್ ಹಾಲ್ ಆವರಣದಲ್ಲಿ 12 ಗಂಟೆಗೆ ‘ಜಿಲ್ಲಾ ರೈತ ಸಮಾವೇಶ ನಡೆಯಲಿದೆ’. ಬೆಳಗ್ಗೆ 11 ಗಂಟೆಗೆ ಗನ್ ಹೌಸ್ ಬಳಿಯಿಂದ ಮೆರವಣಿಗೆ ಹೊರಡಲಿದ್ದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಲಿದ್ದಾರೆ.

11-45ರ ಸುಮಾರಿಗೆ ಟೌನ್ ಹಾಲ್ ಮುಂಭಾಗದಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಗೌರವಾರ್ಪಣೆ. ಮಧ್ಯಾಹ್ನ 2 ಗಂಟೆಗೆ ಸಮಾವೇಶದ ಹಕ್ಕೊತ್ತಾಯವನ್ನು ಸರ್ಕಾರದ ಪ್ರತಿನಿಧಿಯಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪ ಸ್ವೀಕರಿಸಲಿದ್ದಾರೆ. ಬಳಿಕ ರೈತ ಪರ ಬಜೆಟ್ ಹಕ್ಕೊತ್ತಾಯವನ್ನು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಸ್ವೀಕರಿಸಲಿದ್ದಾರೆ.

ಧ್ವಜಾರೋಹಣ ಯದುಶೈಲ ಸಂಪತ್ ನಡೆಸಿಕೊಡಲಿದ್ದು, ಸಮಾವೇಶದ ಉದ್ಘಾಟನೆ ಮಾಜಿ ಶಾಸಕ, ಸಮಾಜವಾದಿ ಚಿಂತಕರಾದ ಡಾ ಸುನೀಲಂ ನೆರವೇರಿಸಲಿದ್ದಾರೆ. ಹೊಸೂರು ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಬಿ ಆರ್ ಪಾಟೀಲ್,
ಜಾಗೃತ ಕರ್ನಾಟಕ ಸಂಚಾಲಕ ಹಾಗೂ ಈದಿನ.ಕಾಮ್ ಮಾಧ್ಯಮದ ಡಾ ಹೆಚ್ ವಿ ವಾಸು, ಕೃಷಿ ವಿಜ್ಞಾನಿ ಹಾಗೂ ಕರ್ನಾಟಕದ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ ಪ್ರಕಾಶ್ ಕಮ್ಮರಡಿ ಇರಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಶ್ರೀರಂಗಪಟ್ಟಣದಲ್ಲಿ ಇಂದಿನಿಂದ 78ನೇ ‘ಸರ್ವೋದಯ ಮೇಳ ‘

ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ “ಕುಟುಂಬಕ್ಕೊಬ್ಬ ಸದಸ್ಯ-ಊರಿಗೊಬ್ಬ ಕಾರ್ಯಕರ್ತ” ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ರೈತಪರ ಬಜೆಟ್ ಹಕ್ಕು ಮಂಡನೆ ಕಿರುಹೊತ್ತಿಗೆಯನ್ನು ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಬಿಡುಗಡೆ ಮಾಡುವವರಿದ್ದಾರೆ. ಕಾರ್ಯಾಧ್ಯಕ್ಷ ಜೆ ಎಂ ವೀರಸಂಗಯ್ಯ, ‘ಹೊಸತನದೊಂದಿಗೆ ಹಳ್ಳಿ-ಹಳ್ಳಿಗಳಿಗೆ ರೈತ ಸಂಘ’ ಕಿರುಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X