ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ವಹಣೆಯಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ 2025-26ನೇ ಸಾಲಿಗಾಗಿ 6ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೇ.75 ಮತ್ತು ಇತರೆ ವರ್ಗದವರಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ.
ಅಲ್ಪಸಂಖ್ಯಾತರ ವರ್ಗದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ಹಾಗೂ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷ ಮಿತಿಯೊಳಗಿರಬೇಕು. ಹಿಂದುಳಿದ ವರ್ಗಗಳ 2ಎ, 3ಎ ಮತ್ತು 3ಬಿ ಅಭ್ಯರ್ಥಿಗಳು ಹಾಗೂ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹2.50ಲಕ್ಷ ಮಿತಿಯಲ್ಲಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ₹2.50 ಲಕ್ಷ ಮಿತಿಯೊಳಗಿರಬೇಕು
ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನವಾಗಿದ್ದು, ಪೋಷಕರು ಅಥವಾ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಸೇವಾಸಿಂಧು ಪೋರ್ಟಲ್‌ನಲ್ಲಿ ವೆಬ್ ಸೈಟ್ https://sevasind-huservices.karnataka.gov. in dom.karnataka. ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು 5ನೇ gov.in/koppal/publicನಲ್ಲಿ ಅಥವಾ ನೇರವಾಗಿ ಹತ್ತಿರದ ವಸತಿ ಶಾಲೆ, ಮಾಹಿತಿ ಕೇಂದ್ರ ಕಚೇರಿಗಳಲ್ಲಿ ಎಲ್ಲ ದಾಖಲೆಗಳೊಂದಿಗೆ ಕೊನೆಯ ದಿನಾಂಕದೊಳಗಾಗಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಕುಕನೂರು, ತಳಕಲ್, ಕುದರಿಮೋತಿ, ಚಿಕ್ಕ-ಕನಕಲ್, ಹಿರೇಬೆಣ-ಕಲ್-1, ಹಿರೇ-ಬೆಣಕಲ್-2, ಹಿರೇಬನ್ನಿಗೋಳ(ಕುಷ್ಟಗಿ), ಹಿಟ್ನಾಳ, ಮುಧೋಳ, ಹುಲಿಹೈದರ್‌ದಲ್ಲಿರುವ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಹಿರೇಸಿಂದೋಗಿಯ ಅಲ್ಪಸಂಖ್ಯಾತ ನವೋದಯ ಮಾದರಿ ವಸತಿ ಶಾಲೆ, ಯಲ್ಬುರ್ಗ, ಕುಷ್ಟಗಿ ಹಾಗೂ ಗಂಗಾವತಿ ತಾಲೂಕು ಅಲ್ಪಸಂಖ್ಯಾತ ಹಾಗೂ ಜಿಲ್ಲಾ ಅಲ್ಪಸಂಖ್ಯಾತ ಮಾಹಿತಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು.
ಭರ್ತಿ ಮಾಡಿದ ಅರ್ಜಿಯೊಂದಿಗೆ ಕಂದಾಯ ಇಲಾಖೆಯ ತಹಶೀಲ್ದಾರ್ ನೀಡಿದ ಜಾತಿ ಮತ್ತು ಆದಾಯ ದೃಢೀಕರಣ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ 4 ಭಾವಚಿತ್ರಗಳೊಂದಿಗೆ ನಿಗದಿಪಡಿಸಿದ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಅಪೂರ್ಣವಾದ ಮತ್ತು ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ : ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತ ಕಚೇರಿ ಹಾಗೂ ತಾಲೂಕು ಅಲ್ಪಸಂಖ್ಯಾತ ಮಾಹಿತಿ ಕೇಂದ್ರದ ದೂ.ಸಂ:-2, 08539-225070, 8088892549, ತಾಲೂಕು ಅಲ್ಪಸಂಖ್ಯಾತ ಮಾಹಿತಿ ಕೇಂದ್ರಗಳಾದ ಗಂಗಾವತಿ ಮೊ.ಸಂ: -9972524670. ಕುಷ್ಟಗಿ ಮೊ.ಸಂ: 8861610578 ಹಾಗೂ ಯಲಬುರ್ಗಾ ಮೊ.ಸಂ: 9620522537ಕ್ಕೆ ನವೋದಯ ಮಾದರಿಯ ವಸತಿ ಶಾಲೆ ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಮೀರ್ ಅಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.