ಕಳೆದ ಎಂಟು ವರ್ಷಗಳ ಹಿಂದೆ ಉದ್ಘಾಟನೆಯಾಗಿದ್ದ ಡಾ. ಬಿ ಆರ್ ಅಂಬೇಡ್ಕರ್ ಭವನವು ಕಳಪೆ ಕಾಮಗಾರಿಯಿಂದ ಕೂಡಿದ್ದು, ಭವನದ ಗೋಪುರವು ಕುಸಿದು ಬಿದ್ದಿರುವ ಘಟನೆ ಗದಗ ಪಟ್ಟಣದಲ್ಲಿ ನಡೆದಿದೆ.
ನಗರಸಭೆ ವ್ಯಾಪ್ತಿಯಲ್ಲಿ ಬರುವ ಟಿಪ್ಪು ಸುಲ್ತಾನ್ ವೃತ್ತದ ಹತ್ತಿರದಲ್ಲಿ ಇರುವ ಡಾ. ಬಿ ಆರ್ ಅಂಬೇಡ್ಕರ್ ಭವನದ ಮೇಲಿರುವ ಗೋಪುರ ಕಳಪೆ ಕಾಮಗಾರಿಯಿಂದ ಕೂಡಿದ್ದು ದಿಡೀರನೆ ನಿನ್ನೆ ಮಧ್ಯರಾತ್ರಿ ಕುಸಿದು ಬಿದ್ದಿದೆ.
ಈ ಕುರಿತು ದಲಿತ ಬಹುಜನ ಚಳುವಳಿ ಮುಖಂಡ ರಮೇಶ ಕೋಳೂರು ಮಾತನಾಡಿ, “2016ನೇ ಸಾಲಿನಲ್ಲಿ ಈ ಅಂಬೇಡ್ಕರ್ ಭವನವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಸರಕಾರಗಳ ಆಳ್ವಿಕೆಯಲ್ಲಿ ನಿರ್ಮಾಣ ಆಗಿದ್ದು, ಕಳಪೆ ಕಾಮಗಾರಿ ಆಗಿದ್ದು ನಾಚಿಕೆಗೇಡಿನ ಸಂಗತಿ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗದವರಿಗೆ ಒಳಪಡುವ ಎಲ್ಲ ಕಾಮಗಾರಿಗಳು ಕಳಪೆ ಮಟ್ಟದ್ದಾಗಿವೆ. ಎಂದು ಹೇಳುದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಪ್ರಾಥಮಿಕ ಹಂತದ ಶಿಕ್ಷಣದಲ್ಲಿಯೇ ಸಹಕಾರಿ ಆಂದೋಲನದ ಮಾಹಿತಿ ತಿಳಿಸಬೇಕು: ಸಚಿವ ಕೆ ಎನ್ ರಾಜಣ್ಣ
“ಯಾವುದೇ ಸರಕಾರ ಇದ್ದರೂ ಸಹ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದರೂ ಬಿಲ್ ಪಾಸ್ ಆಗುತ್ತಿವೆ. ಕಾರಣ ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಗುತ್ತಿಗೆದಾರರ ನಡುವಿನ ಹೊಂದಾಣಿಕೆ ಆಗಿದೆ. ಈ ಕೂಡಲೇ ಅಂಬೇಡ್ಕರ್ ಭವನದ ಗೋಪುರದ ಕಳಪೆ ಕಾಮಗಾರಿ ಕುರಿತು ತನಿಖೆ ನಡೆಸಿ, ಸತ್ಯಾ ಸತ್ಯತೆಗಳು ಬಹಿರಂಗಪಡಿಸಬೇಕು” ಎಂದು ರಮೇಶ ಕೋಳೂರ ಆಗ್ರಹಿಸಿದ್ದಾರೆ.
