ಚಿಕ್ಕಮಗಳೂರು ನಗರಾದ್ಯಂತ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಸಾಕಷ್ಟು ಸಾವು ನೋವು ಸಂಭವಿಸುತ್ತಿದೆ. ನಗರ ಭಾಗಗಳಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಕ್ರಮವಹಿಸಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಸಲ್ಲಿಸಿತು.
ನಗರದ ಹೃದಯ ಭಾಗವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗಾಂಧಿ ಪಾರ್ಕ್, ನಗರಸಭೆ ಮತ್ತು ಟೌನ್ ಮಹಿಳಾ ಸಮಾಜದ ವೃತ್ತ ಜನಸಂದಣಿಯ ಪ್ರದೇಶವಾಗಿದ್ದು, ಇಲ್ಲಿ ಬಹಳಷ್ಟು ಅಪಘಾತಗಳು ಆಗುತ್ತಿವೆ. ವಾಹನಗಳ ವೇಗ ನಿಯಂತ್ರಣಕ್ಕಾಗಿ ರಸ್ತೆ ಹಂಪ್‌ಗಳನ್ನು ನಿರ್ಮಿಸಿ ಎಂದು ಕರವೇ ಜಿಲ್ಲಾ ವಕ್ತಾರ ಸೋಮಶೇಖರ್ ಅಧಿಕಾರಿಗಳಿಗೆ ಒತ್ತಾಯಿಸಿದರು.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು l ಎರಡು ಗುಂಪುಗಳ ಮಧ್ಯೆ ಗಲಾಟೆ; ಪ್ರಕರಣ ದಾಖಲು
ಈ ವೇಳೆ ಸಾರ್ವಜನಿಕರು, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು, ಹಾಗೂ ಸಂಘಟಕರು ಇದ್ದರು.
