ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಲಕ್ಕಂಪುರ ಗ್ರಾಮಸ್ಥರು ಸಮರ್ಪಕ ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ಹೊಸಕೆರೆ ಗ್ರಾಮ ಪಂಚಾಯಿತಿ ಮುಂಬಾಗ ಪ್ರತಿಭಟನೆ ನಡೆಸಿ, ತಾ.ಪಂ ಸಹಾಯಕ ನಿರ್ದೇಶಕ ಅರವಿಂದ್ ಮೂಲಕ ಕಾರ್ಯನಿರ್ವಹಣಾ ಅಧಿಕಾರಿಗೆ ಮನವಿ ಸಲ್ಲಿಸಿದರು.
ದಸಂಸ ತಾಲೂಕು ಅಧ್ಯಕ್ಷ ಸತೀಶ್ ಮಲೆಮಾಚಿಕೆರೆ ಮಾತನಾಡಿ, “ಲಕ್ಕಂಪುರ-ಹೊಸೂರು ಗ್ರಾಮದಲ್ಲಿ ದಲಿತರು ವಾಸಿಸುವ ಕೇರಿಯಲ್ಲಿ ಹಲವು ವರ್ಷಗಳಿಂದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಬಳಕೆ ನೀರು ಸರಾಗವಾಗಿ ಹೊರಗಡೆ ಹರಿಯದೆ, ಅನೈರ್ಮಲ್ಯಕ್ಕೆ ಕಾರಣವಾಗಿದೆ. ಕೆಲವರು ಕೊಳಚೆ ನೀರಿನ ಹರಿವಿಗೆ ಅಡ್ಡಲಾಗಿ ಮಣ್ಣುಹಾಕಿದ್ದು, ಇದರಿಂದ ಸಾಕಷ್ಟು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ನಿವಾಸಿಗಳು ಜೀವನ ಸಾಗಿಸುತ್ತಿದ್ದಾರೆ. ಗ್ರಾಮಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ಸಲ್ಲದು ಕೂಡಲೇ ಸಮರ್ಪಕ ಚರಂಡಿ ನಿರ್ಮಾಣಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಂಬೇಡ್ಕರ್ ಶಿಕ್ಷಣ, ಸಾಧನೆಯ ಬೆನ್ನಿಗೆ ನಿಂತ ರಮಾಬಾಯಿ, ಭಾರತರತ್ನ ಪ್ರಶಸ್ತಿಗೆ ಅರ್ಹರು
ಈ ಸಂದರ್ಭದಲ್ಲಿ ದಸಂಸ ಸಂಘಟನಾ ಸಂಚಾಲಕ ಹನುಮಂತಪ್ಪ ಕ್ಯಾಸೇನಹಳ್ಳಿ, ಭರಮಣ್ಣ ನಾಯಕ, ರಮೇಶ್, ರೇಣುಕ ಪ್ರಸಾದ್, ಹನುಮಂತಪ್ಪ, ರಮೇಶ್, ರಾಮಣ್ಣ, ಪಾಲಮ್ಮ, ಶಾರದಮ್ಮ, ಕರಿಯಮ್ಮ, ಅಂಜಿನಮ್ಮ, ಲಕ್ಷ್ಮಿ, ಪ್ರಕಾಶ್ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.
