ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಮತ್ತು ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯಿಂದ 2025-26 ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ ಪೂರ್ವಭಾವಿಯಾಗಿ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಕಾಸ ಸೌಧ) ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ (ಶಾಸಕರ ಭವನ) ಅವರೊಂದಿಗೆ ಸಭೆ ನಡೆಸಿ ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ 50 ವರ್ಷಗಳು ಸಂದ ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವದ ನೆನಪಿಗಾಗಿ ರಾಜ್ಯ ಸರ್ಕಾರ ವಿಶೇಷ ಅನುದಾನವನ್ನು ರಾಜ್ಯದ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ 5 ಸಾವಿರ ಕೋಟಿ ಹಣವನ್ನು ಪಡೆಯಲು ತಾವು ವಸತಿ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ನೀಡಬೇಕೆಂದು ಸಲಹೆ ಸೂಚನೆಗಳನ್ನು ನೀಡುವ ಮೂಲಕ ಕೆಲವು ಹಕ್ಕೋತ್ತಾಯಗಳನ್ನು ಸಲ್ಲಿಸಲಾಯಿಯಿತು.

2816 ಕೊಳಗೇರಿಗಳ ಮೂಲ ಸೌಕರ್ಯ ಅಭಿವೃದ್ಧಿಗೆ 4 ಸಾವಿರ ಕೋಟಿ ನೀಡಿ ಸ್ಲಂಗಳಲ್ಲಿ ವಸತಿ, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ಒಳಚರಂಡಿ, ಶೌಚಾಲಯ, ಸಮುದಾಯ ಭವನಗಳು, ಶಾಲಾ ಕಟ್ಟಡಗಳ ಅಭಿವೃದ್ಧಿ, ಒಳಗೊಂಡ ಬೇಂಚ್ ಮಾರ್ಕ್ಸ್ ಸೌಲಭ್ಯಗಳನ್ನು ಒದಗಿಸಲು ಒನ್ ಟೈಮ್ ಗ್ರ‍್ಯಾಂಟ್‌ನ್ನು ಘೋಷಿಸಬೇಕು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮತ್ತು ಮೇಲ್ಪಾಟು ಕಾಯಿದೆ- ಕಲಂ-3 ಅಂತಿಮದಲ್ಲಿ ಘೋಷಣೆಯಾಗಿರುವ ರಾಜ್ಯಾದ್ಯಂತ 704 ಖಾಸಗೀ ಮಾಲೀಕತ್ವದ ಕೊಳಚೆ ಪ್ರದೇಶಗಳನ್ನು ಕಲಂ-17ರಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲು 500 ಕೋಟಿ ರೂಗಳನ್ನು ನೀಡಬೇಕು.ಹಾಗೆಯೇ ರಾಜ್ಯದ 50 ಸ್ಲಂಗಳನ್ನು ಮಾದರಿ ಕೊಳಚೆ ಪ್ರದೇಶಗಳಾಗಿ ಅಭಿವೃದ್ಧಿಗೊಳಿಸಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸ್ಲಂಜನರ ಶೈಕ್ಷಣಿಕ ಮಾರ್ಗದರ್ಶನ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ನೀಡುವ 50 ಇನ್‌ಕ್ಯೂಬೇಷನ್ ಸೆಂಟರ್‌ಗಳನ್ನು ಸ್ಥಾಪಿಸಲು 250 ಕೋಟಿ ರೂಗಳನ್ನು ನೀಡಬೇಕು ಮತ್ತು ಹಿಂದೆ ನಿರ್ಮಿಸಿರುವ ಮಂಡಳಿಯ ವಸತಿ ಸಮುಚ್ಛಯಗಳ ಶಿತೀಲಾವಸ್ಥೆಯಿಂದ ಸ್ಲಂ ನಿವಾಸಿಗಳು ಜೀವವನ್ನು ಕೈಯಲ್ಲಿಟ್ಟುಕೊಂಡು ಬದುಕುತ್ತಿದ್ದು ನವೀಕರಣಕ್ಕಾಗಿ 250 ಕೋಟಿ ಅನುದಾನವನ್ನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸ್ಲಂ ನಿವಾಸಿಗಳ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಘೋಷಿಸಬೇಕು. 2017 – 18 ರ ಬಜೆಟ್ ಭಾಷಣದಲ್ಲಿ ಘೋಷಿಸಿರುವ ‘’ನಗರ ಲ್ಯಾಂಡ್ ಬ್ಯಾಂಕ್” ಯೋಜನೆಯನ್ನು ಕಾರ್ಯಗತಗೊಳಿಸಿ ನಗರದಲ್ಲಿರುವ ನಿವೇಶನ ರಹಿತರಿಗೆ ವಸತಿ ಸೌಲಭ್ಯ ದೊರಕಿಸಲು ಮತ್ತು ಚಿತ್ರದುರ್ಗ ಘೋಷಣೆಯನ್ವಯ ಬಡವರಿಗೆ ಎಸ್‌ಸಿ/ಎಸ್‌ಟಿಗಳಿಗೆ ಸ್ವಂತ ಮನೆಯನ್ನು ಉಚಿತವಾಗಿ ನೀಡಲು ಸರ್ಕಾರ ಮುಂದಾಗಬೇಕು. ಸಾಮಾಜಿಕ ಅಸಮಾನತೆಯ ಭಾಗವಾದ ಸ್ಲಂಜನರ ಆರ್ಥಿಕ ಅಭಿವೃದ್ಧಿಗೆ ‘’ನಗರ ಉದ್ಯೋಗ ಖಾತ್ರಿ” ಯೋಜನೆಯನ್ನು ಘೋಷಿಸಬೇಕು ಮತ್ತು ವಸತಿ ವಿಷಯ ಸಂವಿಧಾನದ ರಾಜ್ಯ ಪಟ್ಟಿಯಲ್ಲಿರುವುದರಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯ ಬದಲಾಗಿ “ಮುಖ್ಯಮಂತ್ರಿಗಳ ಶ್ರಮ ನಿವಾಸ್” ಯೋಜನೆ ಎಂದು ಘೋಷಿಸಬೇಕು. ಸ್ಲಂ ಅಭಿರುದ್ದಿ ಕಾಯಿದೆ ತಿದ್ದುಪಡಿ ಅಗತ್ಯವಿದು ಭವಿಷ್ಯದ ನಗರೀಕರಕ್ಕೆ ಪೂರಕವಾಗಿ ತಿದ್ದುಪಡಿ ಮಾಡಲು ತಜ್ಞರ ಸಮಿತಿ ರಚನೆಯಾಗಬೇಕು ಎಂಬ ಬೇಡೀಕೆಗಳನ್ನು ಇಟ್ಟಿದ್ದಾರೆ.

ರಾಜ್ಯದ ಘೋಷಣೆಯಾದ 2,816 ಘೋಷಣೆಯಾದ ಜನಸಂಖ್ಯೆಯನ್ನು ಪುನರ್ ಸಮೀಕ್ಷೆಗೆ ಅನುದಾನ ಮೀಸಲಿಡಬೇಕು.ಮತ್ತು ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಸ್ಲಂಗಳು 50 ವರ್ಷಗಳ ಹಳೆಯದಾಗಿದ್ದರಿಂದ ಮತ್ತು ಕುಟುಂಬಗಳು ಹೆಚ್ಚುವರಿ ಯಾಗಿರುವುದರಿಂದ ಸ್ಲಂಗಳಲ್ಲಿ ಜನಸಂದ್ರತೆಯಲ್ಲಿ ವಾಸಿಸಲು ಕಷ್ಟಕರವಾಗಿದೆ.ಅದರಿಂದ ಘೋಷಣೆಯಾದ ಹಳೆ ಸ್ಲಂಗಳಿಗೆ ಹೆಚ್ಚುವರಿಯಾಗಿ ಪ್ರತಿ ನಗರಕ್ಕೆ ಐವತ್ತು ಎಕರೆ ಭೂಮಿಗೆ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ.
ಜನವರಿ 16 ರಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ರಾಜ್ಯದಲ್ಲಿ ಬಾಕಿ ಉಳಿದಿರುವ 61, 894 ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲು ತುರ್ತು ಕ್ರಮ ಕೈಗೊಂಡು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ವಸತಿ ಯೋಜನೆಯ ಫಲಾನುಭವಿ ಶುಲ್ಕವನ್ನು 25 ಸಾವಿರ ರೂಗಳಿಗೆ ಇಳಿಕೆ ಮಾಡಲು ಪ್ರಸಕ್ತ ಬಜೆಟ್‌ನಲ್ಲಿ ಘೋಷಣೆ ಮಾಡಬೇಕೆಂದು ಹಕ್ಕೋತ್ತಾಯಿಸಲಾಗಿದೆ ಎಂದು ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಸಂಚಾಲಕರುಗಳಾದ ಎ.ನರಸಿಂಹಮೂರ್ತಿ, ಇಮ್ತಿಯಾಜ್, ರಾಜ್ಯ ಸಂಘಟನಾ ಸಂಚಾಲಕರಾದ ಜನಾರ್ದನ್, ವಿವಿಧ ಜಿಲ್ಲಾ ಸಂಚಾಲಕರಾದ ರೇಣುಕಾ ಸರಡಗಿ, ಮಂಜುಬಾಯಿ, ಅರುಣ, ರೇಣುಕಾ ಯಲಮ್ಮ, ಸುಧಾ, ಹನುಮಂತ, ವೆಂಕಮ್ಮ ಉಪಸ್ಥಿತರಿದ್ದರು.