ಆರು ತಿಂಗಳ ಹಿಂದೆಯೇ ಪ್ರಾರಂಭವಾಗಿದ್ದ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕುಡಪಲ್ಲಿ ಗ್ರಾಮದ ಮಾಸ್ತಿಕಟ್ಟಿ ರಸ್ತೆಯಿಂದ ಕುಡಪಲ್ಲಿ ಕೂಲಿ ಸೇತುವೆವರೆಗಿನ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ರೈತರಿಗೆ ಮತ್ತು ಸಾರ್ವಜನಿಕರು ಓಡಾಡಲು ತೊಂದರೆ ಉಂಟಾಗಿದೆ.
1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ವಾಗುತ್ತಿದ್ದ ರಸ್ತೆ ಕಾಮಗಾರಿ ಸ್ಥಗಿತ ಆಗಿರುವುದರಿಂದ ತೊಂದರೆ ಉಂಟಾಗಿರುವ ವಿಷಯ ತಿಳಿದು ಶಾಸಕ ಯು ಬಿ ಬಣಕಾರ ಸ್ಥಳಕ್ಕೆ ಭೇಟ್ಟಿ ನೀಡಿ, ಎಂಜಿನಿಯರ್ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು. “ಸುಮಾರು 6ರಿಂದ 7 ತಿಂಗಳ ಹಿಂದೆಯೇ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದರೂ ಕಾಮಗಾರಿ ವಿಳಂಬಕ್ಕೆ ಕಾರಣವೇನು?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಫಲ್ಗುಣಿ ನದಿಗೆ ತ್ಯಾಜ್ಯ; ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ
“ಗುತ್ತಿಗೆದಾರರಿಗೆ ಕೊನೆಯ ನೊಟೀಸ್ ನೀಡಬೇಕು. ಅವರಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ, ಕಾಮಗಾರಿಯನ್ನು ಹೊಸ ಗುತ್ತಿಗೆದಾರರಿಗೆ ವಹಿಸಬೇಕು” ಎಂದು ಎಂಜಿನಿಯರ್‌ಗೆ ತಾಕೀತು ಮಾಡಿದರು.
ಎಂಜಿನಿಯರ್ ಶ್ರೀನಿವಾಸ್ ಮಾತನಾಡಿ, “ಈಗಾಗಲೆ ಗುತ್ತಿಗೆದಾರರಿಗೆ 3 ನೊಟೀಸ್‌ಗಳನ್ನು ಕಳುಹಿಸಲಾಗಿದೆ. ಈಗಲೂ ಸ್ಪಂದಿಸದಿದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದರು.