32 ವರ್ಷಗಳ ಬಳಿಕ ಮತ್ತೆ ಒಂದೇ ಚಿತ್ರದಲ್ಲಿ ನಟಿಸುತ್ತಿರುವ ರಜನಿ – ಬಿಗ್ ಬಿ

Date:

Advertisements

ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಭಾರತೀಯ ಚಿತ್ರರಂಗದ ಸೂಪರ್‌ ಸ್ಟಾರ್‌ಗಳು. ಇಬ್ಬರೂ ನಾಯಕ ನಟರಿಗೆ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಈ ಹಿಂದೆ ಮೂರು ದಶಕಗಳ ಹಿಂದೆ ಇವರಿಬ್ಬರು ಒಟ್ಟಿಗೆ ನಟಿಸಿದ್ದ ಚಿತ್ರಗಳು ಸೂಪರ್‌ ಹಿಟ್‌ ಆಗಿದ್ದವು. ನಂತರದ ವರ್ಷಗಳಲ್ಲಿ ಇಬ್ಬರೂ ತಮ್ಮದೇ ಭಾಷೆಯ ಚಿತ್ರಗಳಲ್ಲಿ ಕಾರ್ಯನಿರತರಾಗಿದ್ದರು. ಅಲ್ಲದೆ ಸಂಭಾವನೆ ಹಾಗೂ ಬಜೆಟ್‌ ದೃಷ್ಟಿಯಿಂದ ಇಬ್ಬರಿಗೂ ಹೊಂದಾಣಿಕೆಯಾಗುವಂತಹ ಸಿನಿಮಾ ನಿರ್ಮಿಸಲು ನಿರ್ಮಾಪಕರಾಗಲಿ ಹಾಗೂ ನಿರ್ಮಾಣ ಸಂಸ್ಥೆಯಾಗಲಿ ಗಟ್ಟಿತನ ತೋರಿರಲಿಲ್ಲ. 32 ವರ್ಷಗಳ ನಂತರ ಈಗ ಇಬ್ಬರೂ ಒಟ್ಟಿಗೆ ನಟಿಸುವ ಸುಸಮಯ ಒದಗಿಬಂದಿದೆ.       

ಹಿಂದೆ ಈ ಇಬ್ಬರು ತಾರೆಯರು ಅಂಧಾ ಕಾನೂನ್, ಗಿರಾಫ್ತಾರ್ ಮತ್ತು ಹಮ್ ಚಿತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದವು. ಆಗ ರಜನಿ ಹಾಗೂ ಬಚ್ಚನ್ ಅಭಿನಯಕ್ಕೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. 1991 ರಲ್ಲಿ ಬಿಡುಗಡೆಯಾದ ‘ಹಮ್‌’ ಚಿತ್ರ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ನಟಿಸಿದ ಕೊನೆಯ ಚಿತ್ರವಾಗಿತ್ತು. ಇವರಿಬ್ಬರು ಈಗ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೋದಿ ಗೋಡ್ಸೆ ಭಕ್ತರನ್ನು ಹೊರಹಾಕಲಿ, ಇಲ್ಲವೇ ಗಾಂಧಿ ನಮನದ ಸೋಗನ್ನು ಕೊನೆಗೊಳಿಸಲಿ: ಕಾಂಗ್ರೆಸ್

Advertisements

ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಾಹಸಕ್ಕೆ ಕೈ ಹಾಕಿದೆ. ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್, ಪೊನ್ನಿಯಿನ್ ಸೆಲ್ವನ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಸಂಸ್ಥೆ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್ ಇಬ್ಬರನ್ನೂ ಒಂದೇ ಸಿನಿಮಾದಲ್ಲಿ ನಟಿಸುವಂತೆ ಮಾಡುತ್ತಿದೆ. ಇಬ್ಬರೂ ಜೊತೆಯಾಗಿ ನಟಿಸುವ ಹಾಗೂ ಬಹಳ ಅದ್ಧೂರಿಯಾಗಿ ಮೂಡಿ ಬರಲಿರುವ ಈ ಚಿತ್ರದ ಚಿತ್ರೀಕರಣ ಮುಂದಿನ ತಿಂಗಳ ಅಂತ್ಯದಲ್ಲಿ ಆರಂಭವಾಗಲಿದೆ.

ರಜನಿ – ಬಚ್ಚನ್ ನಟಿಸಲಿರುವ ಈ ಸಿನಿಮಾವನ್ನು ಜೈಭೀಮ್ ಖ್ಯಾತಿಯ ಟಿ ಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಜೈ ಭೀಮ್ ಮೂಲಕ ಭಾರತೀಯ ಸಿನಿಮಾ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಜ್ಞಾನವೇಲ್ ಅವರು ರಜನಿ ಹಾಗೂ ಬಚ್ಚನ್‌ನಂತಹ ಸೂಪರ್ ಸ್ಟಾರ್‌ಗಳ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದುಅದ್ದೂರಿ ಚಿತ್ರದ ಮೇಲೆ ದೇಶದ ಸಿನಿ ರಸಿಕರ ನಿರೀಕ್ಷೆ ಹೆಚ್ಚಿದೆ.

ರಜನಿಯ 170ನೇ ಚಿತ್ರ ತಲೈವರ್‌ ಅನ್ನೂ ಕೂಡ ಲೈಕಾ ಸಂಸ್ಥೆ ನಿರ್ಮಿಸುತ್ತಿದೆ. ಸದ್ಯ ನೆಲ್ಸನ್‌ ನಿರ್ದೇಶನದ ಜೈಲರ್‌ ಸಿನಿಮಾದಲ್ಲಿ ರಜನಿಕಾಂತ್‌ ನಟಿಸುತ್ತಿದ್ದು, ಇದೇ ಚಿತ್ರದಲ್ಲಿ ಕನ್ನಡದ ಶಿವರಾಜ್‌ಕುಮಾರ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಲಾಲ್‌ ಸಲಾಮ್‌ ಚಿತ್ರದಲ್ಲಿಯೂ ರಜನಿಕಾಂತ್‌ ಅಭಿನಯಿಸುತ್ತಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X