ಕೇರಳ, ಕರಾವಳಿ ಭಾಗಗಳಿಗೆ ಮುಂಗಾರು ಪ್ರವೇಶಿಸಿದ ಕಾರಣ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾನುವಾರ ಗುಡುಗು ಸಹಿತ ಮಳೆ ಸುರಿಯಿತು.
ಮಂಗಳೂರು ನಗರ, ಬಂಟ್ಬಾಳ, ಉಳ್ಳಾಲ, ಬೆಳ್ತಂಗಡಿ, ಸುಳ್ಯ, ಪುತ್ತೂರು, ಕಡಬ, ಸುಬ್ರಹ್ಮಣ್ಯ ಭಾಗದ ಹಲವಡೆ ಭಾರೀ ಮಳೆ ಸುರಿಯಿತು. ಮಂಗಳೂರಿನ ಕಾವೂರಿನಲ್ಲಿ ಬಿಜಿಎಸ್ ಶಾಲೆಯ ಹಿಂಭಾಗ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಉರುಳಿ ಬಿದ್ದಿದ್ದು, ಮೂರು ಮಂದಿಗೆ ಗಾಯಗಳಾಗಿವೆ.
ಭಾರೀ ಮಳೆಯಿಂದಾಗಿ ಬೃಹತ್ ಗಾತ್ರದ ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಯ ಛಾವಣಿ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಸುರಿದ ಬಿರುಸಿನ ಮಳೆಗೆ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ತಾಲೂಕಿನ ನರಿಕೊಂಬು ಗ್ರಾಮದ ದಿಂಡಿಕೆರೆ ಎಂಬಲ್ಲಿ ಜೂನ್ 11ರ ಬೆಳಗ್ಗೆ ಸುಮಾರು 6ರ ಗಂಟೆಗೆ ಘಟನೆ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಫಲ್ಗುಣಿ ನದಿಗೆ ತ್ಯಾಜ್ಯ; ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಲೋಕಾಯುಕ್ತ
ಮರದೊಂದಿಗೆ ವಿದ್ಯುತ್ ಕಂಬವೂ ಬಿದ್ದಿರುವುದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೂಡಲೇ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ, ಮರ ಹಾಗೂ ಕಂಬ ತೆರವು ಮಾಡುವ ಕಾರ್ಯ ಕೈಗೊಳ್ಳಲಾಯಿತು. ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯ ಚೇತನ್ ಏಲಭೆ ಘಟನಾ ಸ್ಥಳದಲ್ಲಿದ್ದು, ತೆರವು ಕಾರ್ಯದಲ್ಲಿ ಸಹಕರಿಸಿದರು.