ಓಂಗೋಲ್ ತಳಿಯ ಹಸು 4.82 ದಶಲಕ್ಷ ಡಾಲರ್ (ಸುಮಾರು 41 ಕೋಟಿ ರೂಪಾಯಿ) ಬೆಲೆಗೆ ಬ್ರೆಜಿಲ್‌ನಲ್ಲಿ ಹರಾಜಾಗಿದ್ದು, ವಿಶ್ವದ ಅತ್ಯಂತ ದುಬಾರಿ ಹಸು ಎಂಬ ದಾಖಲೆ ಸೃಷ್ಟಿಸಿದೆ. ಈ ತಳಿಯನ್ನು ಬ್ರೆಜಿಲ್‌ನಲ್ಲಿ ವಯಾಟಿನ-19 ತಳಿ ಎಂದು ಕರೆಯಲಾಗುತ್ತದೆ.
ಕುತೂಹಲ ವಿಷಯವೆಂದರೆ ನಮ್ಮ ದೇಶದ ಆಂಧ್ರಪ್ರದೇಶದಲ್ಲಿ ಓಂಗೋಲ್ ತಳಿಯ ಹಸುಗಳು ಇತ್ತೀಚಿನ ವರ್ಷಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸುಮಾರು 41 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕ ಜಪಾನ್‌ನ ಪ್ರಖ್ಯಾತ ವಗ್ಯೂ ಮತ್ತು ಭಾರತದ ಬ್ರಹ್ಮನ್ ತಳಿಗಳ ದಾಖಲೆಯನ್ನು ಮುರಿದಿದೆ. ಸೂಕ್ತ ಕಾಳಜಿ ಮತ್ತು ವೈಜ್ಞಾನಿಕ ಸಂತಾನೋತ್ಪತ್ತಿ ವಿಧಾನದ ಮೂಲಕ ಅಭಿವೃದ್ಧಿಪಡಿಸಿದರೆ ಈ ತಳಿ ಎಷ್ಟು ಮೌಲ್ಯ ಎನ್ನುವುದನ್ನು ಇದು ಸಾಬೀತುಪಡಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೆಟ್ರೋ ದರ ಏರಿಕೆ- ‘ಸತ್ತಂತೆಯೂ ಅತ್ತಂತೆಯೂ’ ಆಡುತ್ತಿರುವ ಈ ನಾಟಕ ನಿಲ್ಲಲಿ
ಈ ತಳಿಯ ಹಸುಗಳನ್ನು ನಿಯತವಾಗಿ ಹರಾಜು ಮಾಡಲಾಗುತ್ತಿದ್ದು, 2023ರಲ್ಲಿ ಬ್ರೆಜಿಲ್‌ನ ಅರಂಡು ಎಂಬಲ್ಲಿ ಕಳೆದ ವರ್ಷ ವಯಾಟಿನ-19 ತಳಿಯ ಹಸು 4.3 ದಶಲಕ್ಷ ಡಾಲರ್ ಗೆ ಹರಾಜಾಗಿತ್ತು. ಕಳೆದ ವರ್ಷ 4.8 ದಶಲಕ್ಷ ಡಾಲರ್‌ಗೆ ಹರಾಜಾಗಿತ್ತು.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮೂಲದ ಓಂಗೋಲ್ ತಳಿ ವಿಶಿಷ್ಟ ವಂಶವಾಹಿ ಗುಣಲಕ್ಷಣಗಳಿಗೆ ಹೆಸರುವಾಸಿ. ಇದರ ವಿಶೇಷ ದೈಹಿಕ ಸಾಮರ್ಥ್ಯ, ಉಷ್ಣ ಸಹಿಷ್ಣುತೆ, ಉತ್ಕೃಷ್ಟ ಸ್ನಾಯು ಸಂರಚನೆಗೆ ವಿಶೇಷ ಮಹತ್ವವಿದೆ.
ಈ ಗುಣಗಳು ಹೈನುಗಾರಿಕೆಗೆ ಅತ್ಯುತ್ತಮ ಅಪೇಕ್ಷಿತ ತಳಿಯಾಗಿ ಪರಿಗಣಿಸಲಾಗುತ್ತದೆ. ಭಾರತದಲ್ಲಿ ಈ ತಳಿಯ ಬಗ್ಗೆ ಹೆಚ್ಚಿನ ಗಮನ ಕೊಡದೇ ಇದರ ಸಂರಕ್ಷಣೆಯನ್ನು ನಿರ್ಲಕ್ಷಿಸಲಾಗುತ್ತಿದ್ದು, ಬ್ರೆಜಿಲ್‌ನಂಥ ದೇಶಗಳು ಇದರ ಸಂಪೂರ್ಣ ಸಾಮರ್ಥ್ಯದ ಪ್ರಯೋಜನ ಪಡೆದುಕೊಂಡು ಅನುವಂಶಿಕ ಸಂಪನ್ಮೂಲಗಳ ಮೂಲಕ ಅಪಾರ ಸಂಪತ್ತು ಸೃಷ್ಟಿಸುತ್ತಿವೆ.
ವಯಾಟಿನಾ-19 ತಳಿ ವಿಶ್ವ ಕೌ ಚಾಂಪಿಯನ್‌ಶಿಪ್ ನಲ್ಲಿ ‘ಮಿಸ್ ಸೌತ್ ಅಮೆರಿಕ’ ಎಂಬ ಖ್ಯಾತಿಗೂ ಪಾತ್ರವಾಗಿದೆ. ಇದೀಗ ವಿಶ್ವದಲ್ಲೇ ಅತಿಹೆಚ್ಚು ಬೆಲೆಗೆ ಮಾರಾಟವಾದ ಹಸು ಎಂಬ ದಾಖಲೆ ಸೃಷ್ಟಿಸಿದೆ. 2023ರಲ್ಲಿ ಇದು ಗಿನಿಸ್ ದಾಖಲೆಗೆ ಸೇರ್ಪಡೆಯಾಗಿತ್ತು.
