ಬೆಂಗಳೂರು | ಇಸ್ರೇಲ್ ವಿರುದ್ಧ ಪ್ರತಿಭಟನೆ; ಸಂಘಟಕರನ್ನು ವಶಕ್ಕೆ ಪಡೆದ ಪೊಲೀಸರು

Date:

Advertisements

ಗಾಜಾ, ಲೆಬನಾನ್, ಇರಾನ್ ಮೇಲೆ ದಾಳಿ ನಡೆಸುತ್ತಿರುವ, ವಿಶ್ವ ಶಾಂತಿಯನ್ನು ಕದಡುತ್ತಿರುವ ಇಸ್ರೇಲ್ ಜೊತೆ ಭಾರತ ವ್ಯಾಪಾರ ಸಂಬಂಧ ಮುಂದುವರೆಸಬಾರದು ಎಂದು ಆಗ್ರಹಿಸಿ ಬೆಂಗಳೂರಿನ ಗುಟ್ಟಹಳ್ಳಿ ಬಸ್ ನಿಲ್ದಾಣದ ಬಳಿ ನ್ಯಾಯ ಮತ್ತು ಶಾಂತಿಗಾಗಿ ಬೆಂಗಳೂರು ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಡ್ರೋನ್‌ಗಳು, ಕೃಷಿ ತಂತ್ರಜ್ಞಾನ ಮತ್ತು ಶುದ್ಧ ಇಂಧನದಲ್ಲಿ ಭಾರತ-ಇಸ್ರೇಲ್‌ ಸಹಕಾರದ ಕುರಿತಾದ ಚರ್ಚೆಗಳಾಗುತ್ತಿವೆ. ಆ ಚರ್ಚೆಗಳನ್ನು ಖಂಡಿಸಿ, ಪಿಯುಸಿಎಲ್, ನಾವೆದ್ದು ನಿಲ್ಲದಿದ್ದರೇ, ಎಐಸಿಸಿಟಿಯು, ಎಐಎಸ್ಎ ಮತ್ತು ಎಸ್ಎಫ್‌ಪಿಡಿ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಪ್ರತಿಭಟನೆ ವೇಳೆ, ‘ಪ್ಯಾಲೇಸ್ತೀನ್ ಜತೆಗೆ ಭಾರತ ನಿಂತಿದೆ’, ‘ಗಾಜಾ ಜತೆಗೆ ಭಾರತ ನಿಂತಿದೆ’ ಎಂಬ ಪೋಸ್ಟರ್‌ಗಳನ್ನ ಹಿಡಿದು ಇಸ್ರೇಲ್ ಜತೆಗೆ ಭಾರತ ಯಾವುದೇ ಕಾರಣಕ್ಕೂ ವ್ಯಾಪಾರ ಸಂಬಂಧವನ್ನ ಹೊಂದಬಾರದು. ಒಂದು ವೇಳೆ ಹಾಗೇ ಮಾಡಿದರೇ, ಈಗಾಗಲೇ ಗಾಜಾದಲ್ಲಿ ಕ್ರೂರತ್ವವನ್ನ ಮೇರೆಯುತ್ತಿರುವ ಇಸ್ರೇಲ್ ಚಿಕ್ಕ ಮಕ್ಕಳನ್ನ ಬಲಿ ತೆಗೆದುಕೊಳ್ಳುತ್ತಿದೆ. ಹಲವು ಜನರ ಜೀವನವನ್ನ ನಾಶ ಮಾಡಿದೆ. ಇಸ್ರೇಲ್ ಜತೆಗೆ ವ್ಯಾಪಾರ ಸಂಬಂಧ ಹೊಂದಿದರೇ, ನಾವು ಕೂಡ ಅದರಲ್ಲಿ ಪಾಲು ಹೊಂದಿದಂತಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

Advertisements

ಗಾಜಾ

ಪ್ರತಿಭಟನೆ ವೇಳೆ ಮಾತನಾಡಿದ ಪಿಯುಸಿಎಲ್ ಐಶ್ವರ್ಯ, “ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಮೂರು ದಿನ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಗಾಜಾದಲ್ಲಿ ತನ್ನ ಕ್ರೂರತ್ವವನ್ನ ಮೇರೆಯುತ್ತಿರುವ ಇಸ್ರೇಲ್ ಜತೆಗೆ ಭಾರತ ಯಾವುದೇ ರೀತಿಯ ವ್ಯಾಪಾರ ಸಂಬಂಧವನ್ನ ಹೊಂದಬಾರದು. ಈಗಾಗಲೇ, ಇರುವ ವ್ಯಾಪಾರ ಸಂಬಂಧವನ್ನ ಕೈಬಿಡಬೇಕು” ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೆಟ್ರೋ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್‌ ಎಂಡಿಗೆ ಕೇಳಿದ್ದೇನೆ: ಸಿಎಂ ಸಿದ್ದರಾಮಯ್ಯ

“ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.11ರಿಂದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಇನ್ವೆಸ್ಟ್ ಕರ್ನಾಟಕ – 2025) ಆರಂಭವಾಗಿದೆ. ಈ ಸಮಾವೇಶಲ್ಲಿ ಫ್ರಾನ್ಸ್, ನೆದರ್ಲೆಂಡ್ಸ್, ಜಪಾನ್, ಥಾಯ್ಲೆಂಡ್, ಮಲೇಷ್ಯಾ, ದಕ್ಷಿಣ ಕೊರಿಯಾ, ನಾರ್ವೆ, ಇಸ್ರೇಲ್, ಸ್ವಿಟ್ಜರ್ಲೆಂಡ್, ತೈವಾನ್, ಜರ್ಮನಿ, ಆಸ್ಟ್ರೇಲಿಯಾ, ಡೆನ್ಮಾರ್ಕ್, ಪೊಲಂಡ್, ಇಟಲಿ, ಬ್ರಿಟನ್, ಸ್ಲೊವೆನಿಯಾ, ಬಹರೇನ್ ಮತ್ತು ಸಿಂಗಪುರ ದೇಶಗಳು ಭಾಗಿಯಾಗಿವೆ. ಲೆಬನಾನ್, ಗಾಜಾ, ಇರಾನ್ ಮೇಲೆ ದಾಳಿ ನಡೆಸಿ ತನ್ನ ಕ್ರೂರತ್ವವನ್ನ ಮೆರೆಯುತ್ತಿರುವ ಇಸ್ರೇಲ್ ಜತೆಗೆ ಯಾವುದೇ ರೀತಿಯ ವ್ಯಾಪಾರ ಸಂಬಂಧವನ್ನ ಭಾರತ ಹೊಂದಬಾರದು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಗಾಜಾ

ಪ್ರತಿಭಟನಾಕಾರರ ಹಕ್ಕೊತ್ತಾಯಗಳು ಹೀಗಿವೆ

  • ಇಸ್ರೇಲ್ ಮೇಲೆ ಅರ್ನಿಸ್ ನಿರ್ಬಂಧ ಹೇರಬೇಕು
  • ನಮ್ಮ ರಾಜತಾಂತ್ರಿಕರನ್ನು ಭಾರತಕ್ಕೆ ವಾಪಸ್ ಕರೆತರಬೇಕು
  • ಇಸ್ರೇಲ್‌ನೊಂದಿಗಿನ ಎಲ್ಲ ಸಂಬಂಧಗಳನ್ನು ನಿರ್ಬಂಧಿಸಬೇಕು
  • ಜನಾಂಗೀಯ ಹತ್ಯೆಯು ಅಪರಾಧವೆಂದು ಕಾನೂನು ರೂಪಿಸಬೇಕು
  • ಇಸ್ರೇಲ್ ವಿರುದ್ಧದ ಐಜಿಜೆ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬೇಕು
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಒಳಮೀಸಲಾತಿ ಜಾರಿ, ಬಹುದಿನಗಳ ಕನಸು ನನಸು ಮಾಡಿದ ಎಲ್ಲರಿಗೂ ಅಭಿನಂದನೆ: ಎಸ್. ಎನ್. ಬಳ್ಳಾರಿ

ಪರಿಶಿಷ್ಟ ಜಾತಿಗಳ ಮೂರು ದಶಕಗಳ ಒಳಮೀಸಲಾತಿ ಹೋರಾಟವನ್ನು ಮಾನ್ಯ ಸುಪ್ರೀಂ ಕೋರ್ಟ್...

ಚಿಕ್ಕಮಗಳೂರು l ಅಕ್ರಮ ಪ್ಲಾಸ್ಟಿಕ್ ಮಾರಾಟ: ನಗರಸಭೆ ಅಧಿಕಾರಿಗಳು ದಾಳಿ

ಚಿಕ್ಕಮಗಳೂರು ನಗರದಲ್ಲಿ ಪ್ಲಾಸ್ಟಿಕ್ ನಿಷೇಧವಿದ್ದರೂ ಅಕ್ರಮವಾಗಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ...

ಕೋಲಾರ | 9 ತಿಂಗಳಿನಿಂದ ವೇತನ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೊರಗುತ್ತಿಗೆ ಕಾರ್ಮಿಕರು

ಕೋಲಾರ ನಗರಸಭೆಯಲ್ಲಿ ಕೆಲಸ ಮಾಡುವ 74 ಮಂದಿ ಹೊರಗುತ್ತಿಗೆ ಕಾರ್ಮಿಕರಿಗೆ ಕಳೆದ...

ಬೀದರ್‌ | ವಚನ ಸಾಹಿತ್ಯ, ಕನ್ನಡ ಭಾಷೆ ಸಂರಕ್ಷಣೆಯಲ್ಲಿ ಭಾಲ್ಕಿ ಹಿರೇಮಠದ ಕೊಡುಗೆ ಅನನ್ಯ : ಪುರಷೋತ್ತಮ ಬಿಳಿಮಲೆ

ಗಡಿಭಾಗದಲ್ಲಿ ವಚನ ಸಾಹಿತ್ಯ ಮತ್ತು ಕನ್ನಡ ಭಾಷೆ ಸಂರಕ್ಷಣೆಯಲ್ಲಿ ಭಾಲ್ಕಿ ಹಿರೇಮಠ...

Download Eedina App Android / iOS

X