ಐಪಿಎಲ್ 2025ರ ಟೂರ್ನಿಯು ಮಾರ್ಚ್‌ನಲ್ಲಿ ಆರಂಭವಾಗಲಿದೆ. ಟೂರ್ನಿಗೆ ಕೆಲವೇ ದಿನಗಳ ಬಾಕಿ ಇರುವಾಗ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (RCB) ತಂಡುವ ತನ್ನ ಹೊಸ ನಾಯಕರನ್ನು ಆಯ್ಕೆ ಮಾಡಿದೆ. ಬ್ಯಾಟರ್ ರಜತ್ ಪಾಟೀದಾರ್ ಅವರು ತಂಡವನ್ನು ಮುನ್ನಡೆಸಲಾಗಿದ್ದಾರೆ ಎಂದು ಆರ್‌ಸಿಬಿ ಘೋಷಿಸಿದೆ.
ವಿರಾಟ್ ಕೊಹ್ಲಿ ಅವರು ತಂಡದ ನಾಯಕತ್ವವನ್ನು ತೊರೆದ ಬಳಿಕ, ಮೂರು ವರ್ಷಗಳಿಂದ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅವರು ತಂಡವನ್ನು ಮುನ್ನಡೆಸಿದ್ದರು. ಆದರೆ, ಈ ಬಾರಿ, ಅವರನ್ನು ತಂಡದಿಂದ ಕೈಬಿಡಲಾಗಿದೆ. ಹೀಗಾಗಿ, ಹೊಸ ನಾಯಕನನ್ನು ಆಯ್ಕೆ ಮಾಡಲು ತಂಡವು ಚಿಂತನೆ ನಡೆಸಿತ್ತು.
ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿಯಷ್ಟು ಅನುಭವಿ ಆಟಗಾರ ಬೇರೆ ಯಾರೂ ಇಲ್ಲದ ಕಾರಣ, ಕೊಹ್ಲಿ ಅವರೇ ಮತ್ತೆ ಆರ್‌ಸಿಬಿಗೆ ನಾಯಕನಾಗಿ ಮರಳಬಹುದು ಎಂಬ ಚರ್ಚೆಗಳೂ ಇದ್ದವು. ಆದರೆ, ಕ್ಯಾಪ್ಟನ್ಸಿ ಪಡೆಯಲು ಕೊಹ್ಲಿ ನಿರಾಕರಿಸಿದ್ದರು. ಬಳಿಕ ಪಾಟೀದಾರ್ ಮತ್ತು ಕೃನಾಲ್ ಪಾಂಡ್ಯಾ ಹೆಸರನ್ನು ಮುನ್ನೆಲೆಯಲ್ಲಿತ್ತು.
ಇದೀಗ, ಯುವ ಆಟಗಾರ ರಜತ್ ಅವರಿಗೆ ನಾಯಕತ್ವ ನೀಡಲಾಗಿದೆ. ರಜತ್ ಪಾಟೀದಾರ್ ದೇಶೀಯ ಕ್ರಿಕೆಟ್‌ನಲ್ಲಿ ಗಮನ ಸೆಳೆದಿದ್ದ ಆಟಗಾರ. ಅವರು ಸ್ಥಳೀಯ ತಂಡವನ್ನೂ ಮುನ್ನಡೆಸಿರುವ ಅನುಭವವನ್ನೂ ಹೊಂದಿದ್ದಾರೆ. ಈ ಬಾರಿ ಪಾಟೀದಾರ್ ತಂಡವನ್ನು ಮುನ್ನಡೆಸಲಿದ್ದಾರೆ.
ಬಹುಪರಾಕ್ ಹೇಳೋ ಸಮಯ ಬಂದಿದೆ, ಬೆಂಗಳೂರು! 🙌🔥
— Royal Challengers Bengaluru (@RCBTweets) February 13, 2025
ಈಗ ಪದಗ್ರಹಣ ಮಾಡ್ತಿರೋ ನಿಮ್ಮ ತಂಡದ ಅಧಿಪತಿ, ನಾಯಕ ರಜತ್ ಮನೋಹರ್ ಪಾಟಿದಾರ್! 👑💪#PlayBold #ನಮ್ಮRCB #RCBCaptain #Rajat #RajatPatidar #IPL2025 #PatidarPattabhisheka pic.twitter.com/NDf8EjIl2H
ತಮ್ಮನ್ನು ತಂಡದ ನಾಯಕನ್ನಾಗಿ ನೇಮಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಾಟೀದಾರ್, “ಈಗಾಗಲೇ ದಿಗ್ಗಜರು ಆರ್‌ಸಿಬಿ ತಂಡದ ನಾಯಕರಾಗಿದ್ದಾರೆ. ಈ ಬಾರಿ ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿರುವುದು, ನನಗೆ ಸಿಕ್ಕ ದೊಡ್ಡ ಗೌರವವೆಂದು ನಾನು ಭಾವಿಸುತ್ತೇನೆ. ನನ್ನ ನಾಯಕತ್ವದ ಶೈಲಿ ಕೊಂಚ ವಿಭಿನ್ನವಾಗಿರಲಿದೆ. ನಾನು ಶಾಂತಚಿತ್ತವಾಗಿರುತ್ತೇನೆ. ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ತಂಡಕ್ಕೆ ಏನು ಬೇಕು, ಏನು ಬೇಡ ಎಂಬುದನ್ನು ಅರ್ಥಮಾಡಿಕೊಂಡು ತಂಡವನ್ನು ಮುನ್ನಡೆಸುತ್ತೇನೆ” ಎಂದು ಹೇಳಿದ್ದಾರೆ.
ಹೊಸ ನಾಯಕನಾಗಿರುವ ರಜತ್ ಪಾಟೀದಾರ್ ಮುಂದಾಳತ್ವದಲ್ಲಿ ಆರ್‌ಸಿಬಿ ಹೊಸ ಅಧ್ಯಾಯ ಬರೆಯುವುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.